ದಾವಣಗೆರೆ (Harihara) : ಹರಿಹರ ತಾಲೂಕಿನ ಗುತ್ತೂರು ಗ್ರಾಮದಲ್ಲಿ ಗುರುವಾರ ಚಿಕ್ಕಪ್ಪ ಮತ್ತು ಅಣ್ಣನ ಮಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಗುತ್ತೂರು ಗ್ರಾಮದ ಪ್ರಶಾಂತ (14) ,ಅತನ ಚಿಕ್ಕಪ್ಪ ಅಣ್ಣಪ್ಪ (45) ಮೃತ ದುರ್ದೈವಿ ಗಳು.
ತುಂಗಾಭದ್ರಾ ನದಿಯಲ್ಲಿ ಟ್ರ್ಯಾಕ್ಟರ್ ತೊಳೆಯಲು ಹೋಗಿದ್ದ ವೇಳೆ ಅಣ್ಣನ ಮಗ ಪ್ರಶಾಂತ ಕಾಲು ಜಾರಿ ಗುಂಡಿಯಲ್ಲಿ ಬಿದ್ದಿದ್ದಾನೆ. ಇದನ್ನು ನೋಡಿದ ಚಿಕನ್ನ ಅಣ್ಣಪ್ಪ ಕಾಪಾಡಲು ತೆರಳಿದ್ದಾನೆ. ಇಬ್ಬರು ಮೃತಪಟ್ಟಿದ್ದಾರೆ.
ನೀರಿನಲ್ಲಿ ಮುಳುಗುತ್ತಿರುವಾಗ ಸ್ಥಳೀಯರು ರಕ್ಷಣೆ ಗೆ ಮುಂದಾದರು ಸಹ ದುರದೃಷ್ಠಾವಶಾತ್ ರಕ್ಷಣೆ ಮಾಡುವ ವೇಳೆಗೆ ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ. ಕುಟುಂಬಸ್ಥರು ಅಕ್ರಂದನ ಮುಗಿಲು ಮುಟ್ಟಿತ್ತು.
READ ALSO : Davanagere | ದೇಶದಲ್ಲಿ ಆರ್ಥಿಕ ಕ್ರಾಂತಿಗೆ ನಾಂದಿ ಹಾಡಿದವರು ಇಂದಿರಾಗಾಂಧಿ : ಡಿ. ಬಸವರಾಜ್
ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ರಮ ಮರಳುಗಾರಿಕೆಯಿಂದಲೇ ಇಂತಹ ಅನಾಹುತ ಗಳಾಗುತ್ತಿವೆ ಎಂದು ಜನರ ಅಕ್ರೋಶ ವ್ಯಕ್ತಪಡಿಸಿದ್ದಾರೆ.