ದಾವಣಗೆರೆ (Davanagere): ಮುಸ್ಲಿಂ ಸಮುದಾಯ ಕನ್ನಡ ಭಾಷೆ ಹೆಚ್ಚಾಗಿ ಬಳಸುವುದರಿಂದ ಸಮಾಜದಲ್ಲಿ ಸೌಹಾರ್ಧತೆ ಬೆಳೆಯುತ್ತದೆ ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ಕೆ ಚಮನ್ ಸಾಬ್ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕದಿಂದ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡ ನಾಡು ನುಡಿಗೆಸೇವೆ ಸಲ್ಲಿಸಿದ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭದ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆ ಬಹಳ ಪ್ರಾಚೀನವಾದ ಭಾಷೆ. ಬೇರೆ ರಾಜ್ಯಗಳ ಭಾಷೆಗಳಿಗೆ ಹೋಲಿಸಿದರೆ ನಮ್ಮ ಕರ್ನಾಟಕದಲ್ಲಿ ಇದೊಂದು ಹಬ್ಬವನ್ನಾಗಿ ಆಚರಿಸುತ್ತಿರುವುದು ವಿಶೇಷವೆಂದರು
ಎರಡನೇ ಶತಮಾನದಲ್ಲಿಯೇ ಕನ್ನಡ ಭಾಷೆಯ ಬಗ್ಗೆ ಉಲ್ಲೇಖವಿದ್ದು ಕನ್ನಡ ಭಾಷೆಯನ್ನು ಬೆಳೆಸಲು ಅನೇಕ ದಾಸರು, ವಚನಕಾರರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಆದರೆ , ಭಾಷೆ ಹಾಗೂ ಧರ್ಮಕ್ಕೆ ಸಂಬಂಧ ಕಟ್ಟುವ ಕೆಲಸ ನಡೆಯುತ್ತಿದೆ. ಆದರೆ, ಭಾಷೆಗೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಈ ನೆಲದಲ್ಲಿ ಹುಟ್ಟಿರುವ ಎಲ್ಲರೂ ಕನ್ನಡಿಗರು ಎಂಬ ಅಭಿಮಾನಿವಿರಬೇಕು ಎಂದರು.
ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ಮಕ್ಕಳ ಭವಿಷ್ಯ ಉತ್ತಮವಾಗಿರಲಿದೆ. ಅದ್ದರಿಂದ ಕನ್ನಡ ಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕು. ಕನ್ನಡವನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ವೆಂದರು.
Read also : Davangere | ಆರೋಗ್ಯ ಭಾಗ್ಯವನ್ನು ಕೊಡುವವನು ಧನ್ವಂತರಿ : ವೇದಬ್ರಹ್ಮ ಗೋಪಾಲ ಆಚಾರ್ ಮಣ್ಣೂರ್
ಕನ್ನಡ ಭಾಷೆಯ ಬಗ್ಗೆ ಅನೇಕ ದಾಸರು ವಚನಕಾರರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅವರನ್ನೆಲ್ಲ ಸ್ಮರಿಸೋಣ ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ. ದಾದಾಪೀರ್ ನವಳಿಹಾಳ್ ಮಾತನಾಡಿ, ಕನ್ನಡ ಭಾಷೆಗೆ ಮುಸ್ಲಿಮರ ಕೊಡುಗೆ ಅಪಾರವಾಗಿದೆ. ಕನ್ನಡ ಭಾಷೆಯನ್ನು ಆಡಳಿತ ಭಾಷೆಯಾಗಿ ಜಾರಿಗೆ ತಂದವರು ಟಿಪ್ಪು ಸುಲ್ತಾನ್. ಕನ್ನಡಕ್ಕೆ ಅನೇಕ ಮುಸ್ಲಿಂ ಕವಿಗಳು ದಾರ್ಶನಿಕರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕನ್ನಡ ಭಾಷೆಗೆ ಮುಸ್ಲಿಮರ ಕೊಡುಗೆ ಅಪಾರವಾಗಿದೆ ಎಂದರು.
ಕನ್ನಡ ಭಾಷೆಯನ್ನು ಮುಸ್ಲಿಮರು ಸೊಗಸಾಗಿ ಬಳಸುತ್ತಾರೆ. ಆದರೆ, ಸಿನಿಮಾ ಹಾಗೂ ನಾಟಕಗಳಲ್ಲಿ ಪಾತ್ರಧಾರಿಗಳು ಕನ್ನಡ ಬಳಸುವ ಭಾಷೆ ತುಂಬಾ ಕೆಟ್ಟದಾಗಿರುತ್ತೆದೆ ಎಂದು ವಿಷಾಧ ವ್ಯಕ್ತಪಡಿಸಿದರು .
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತಹ ಸಾಧಕರಿಗೆ ಸನ್ಮಾನಿಸಲಾಯಿತು.
ಜಾಕಿರ್ ಹುಸೇನ್ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಜಮೀರ್ ಅಹ್ಮದ್ ಮಾತನಾಡಿದರು.
ಮಹಮ್ಮದ್ ಗೌಸ್ ಸೈಯದ್ ಚಾರ್ಲಿ, ಸಾದಾರಲಿ ಖಾನ್ ಸನಾವುಲ್ಲಾ ನವಿಲೇಹಾಳ, ಕಲೀಮ್ ಬಾಷಾ, ಶೋಕತ್ ಅಲಿ , ಉಮ್ಮರ್ ಸಾಬ್ ಮಹಮ್ಮದ್ ಜಬಿವುಲ್ಲಾ ಮುಂತಾದವರು ಉಪಸ್ಥಿತರಿದ್ದರು.