ದಾವಣಗೆರೆ (Davanagere) : ಚಿಕ್ಕಬಳ್ಳಾಪುರ ಜಿಲ್ಲೆ ಮಹರ್ಷಿ ವಾಲ್ಮೀಕಿ ಗುರುಪೀಠದಿಂದ 2024ನೇ ಯ ಸಾಲಿನಲ್ಲಿ ನೀಡಲಾಗುವ ರಾಜ್ಯಮಟ್ಟದ ವಾಲ್ಮೀಕಿ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ ನೈಜ ನಾಯಕ ಬೇಡರ ಪಡೆ ರಾಜ್ಯಾಧ್ಯಕ್ಷ ಹಾಗೂ ಡಿವಿಜಿ ವಾಯ್ಸ್ (ಸಾಮಾಜಿಕ ಜಾಲತಾಣ ) ಸಂಪಾದಕರಾದ ಟಿ. ಎಸ್ ಕರಿಯಪ್ಪ ಅವರನ್ನು 2024 ನೇ ವರ್ಷದ ಸಾಧಕ ಎಂದು ಆಯ್ಕೆ ಮಾಡಲಾಗಿದೆ.
ಟಿ.ಎಸ್ ಕರಿಯಪ್ಪ ನಾಯಕ ಸಾಮಾಜಿಕ, ಶೈಕ್ಷಣಿಕ , ಧಾರ್ಮಿಕ ಹಾಗೂ ವಾಲ್ಮೀಕಿ ಸಮಾಜದ ಸೇವೆಯಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಾರೆ. ಸರ್ವಧರ್ಮ ಸೇವಾ ಟ್ರಸ್ಟ್ ನ ಅಧ್ಯಕ್ಷ. ದಾವಣಗೆರೆ ಕನ್ನಡಪರ ಹೋರಾಟಗಾರರ ಒಕ್ಕೂಟದಲ್ಲಿ ಉಪಾಧ್ಯಕ್ಷ, ಶಂಕರನಾಗ ಅಸೋಸಿಯೇಷನ್ ರಾಷ್ಟ್ರೀಯ ಅಧ್ಯಕ್ಷ, ಕರ್ನಾಟಕ ಚಾಲಕ ಹಾಗೂ ಮಾಲೀಕರ ಸಂಘದ ರಾಜ್ಯಾಧ್ಯಕ್ಷರಾಗಿ, ದಿನಪತ್ರಿಕೆ, ವಾರಪತ್ರಿಕೆ ಮಾಸಪತ್ರಿಕೆ ಗಳಲ್ಲಿ ಕೆಲಸ ಮಾಡಿದ ಅನುಭವ ಇದೆ.ಇವರ ಆ ಸೇವೆ ಗುರುತಿಸಿ ಟಿ.ಎಸ್ ಕರಿಯಪ್ಪನವರಿಗೆ ಬೆಂಗಳೂರು ಗಾಂಧಿ ಭವನದಲ್ಲಿ ನವೆಂಬರ್ 9ನೇ ರಂದು ವಾಲ್ಮೀಕಿ ಬ್ರಹ್ಮಾನಂದ ಸ್ವಾಮಿಗಳ ಪ್ರಶಸ್ತಿ ವಿತರಿಸಲಿದ್ದಾರೆ.
READ ALSO : Davanagere | ಪಾಲಿಕೆಯಿಂದ ನ. 13 ರಿಂದ ಡಿಸೆಂಬರ್ 31 ರ ವರೆಗೆ ಇ-ಆಸ್ತಿ ವಿಶೇಷ ಆಂದೋಲನ