Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಪರಾಧ ಸುದ್ದಿ > ರೈತರು, ದಲ್ಲಾಳಿಗಳಿಗೆ ಕೋಟ್ಯಾಂತರ ರೂ. ವಂಚನೆ: ಆರೋಪಿ ಅಂದರ್
ಅಪರಾಧ ಸುದ್ದಿ

ರೈತರು, ದಲ್ಲಾಳಿಗಳಿಗೆ ಕೋಟ್ಯಾಂತರ ರೂ. ವಂಚನೆ: ಆರೋಪಿ ಅಂದರ್

Dinamaana Kannada News
Last updated: November 15, 2024 4:44 am
Dinamaana Kannada News
Share
SHARE

ದಾವಣಗೆರೆ : ರೈತರು ಮತ್ತು ದಲ್ಲಾಳಿಗಳಿಂದ ಮೆಕ್ಕೆಜೋಳ , ಭತ್ತ ಖರೀದಿ ಮಾಡಿ ರೈತರಿಗೆ ಹಣ ನೀಡದೆ ಹಲವು ಪ್ರಕರಣಗಳಲ್ಲಿ ವಂಚನೆ ಮಾಡಿದ್ದ ಆರೋಪಿ ಶ್ರೀನಿವಾಸನನ್ನು ಪೊಲೀಸರು ಬಂಧಿಸಿದ್ದಾರೆ.

ದಿನಾಂಕ: 07.10.2023 ರಂದು ರಾತ್ರಿ 10-00 ಗಂಟೆಗೆ ಆಂಧ್ರ ಪ್ರದೇಶದ ನಂದಿಹಾಲ ಜಿಲ್ಲೆಯ, ಕಂಪಮಲ್ಲ ಗ್ರಾಮದ ಭತ್ತದ ಬ್ರೋಕರ್ ಕೆಲಸ ಮಾಡುವ ಎಂ. ನರಸಯ್ಯ ತಮ್ಮ ಜಿಲ್ಲೆಯ ಸುತ್ತಮುತ್ತ ಇರುವ ರೈತರಿಂದ ಭತ್ತವನ್ನು ಕೊಡಿಸುವ ಬ್ರೋಕರ್ ಕೆಲಸವನ್ನು ಮಾಡುತ್ತಿದ್ದರು.

ದಾವಣಗೆರೆಯ ಶ್ರೀನಿವಾಸ ದೂರವಾಣಿ ಕರೆಮಾಡಿ ನಾನು ನಿಮ್ಮ ಲಾರಿಯ ಡ್ರೈವರ್ ಕಡೆಯಿಂದ ನಿಮ್ಮ ನಂಬರ್ ಪಡೆದು ಕೊಂಡಿದ್ದೇನೆ, ನನ್ನದು ಭತ್ತದ ಮಿಲ್ ಇದೆ. ನೀವು ನನಗೆ ಭತ್ತವನ್ನು ಕಳುಹಿಸಿದರೆ ನಾನು ಬೇರೆಯವರಿಗಿಂತ 50 ರೂ ಹೆಚ್ಚಿಗೆ ಕೊಡುತ್ತೇನೆ. ಭತ್ತ ಮಾರಾಟಕ್ಕೆ ನನ್ನ ಜಿ ಎಸ್ ಟಿ ಇದೆ ನಿಮಗೆ ಬೇಕಾದರೆ ಕೊಡುತ್ತೇನೆ ಎಂದು ನಂಬಿಸಿದ್ದಾರೆ.

ಇದನ್ನು ನಂಬಿದ ದೂರುದಾರ ನರಸಯ್ಯ ದಿ: 28-04-2023 ರಿಂದ 21-05-2023 ರ ಅವಧಿಯಲ್ಲಿ 40 ಲೋಡ್ ಭತ್ತವನ್ನು ಕಳುಹಿಸಿದ್ದಾರೆ. ಅದರ ಒಟ್ಟು ಮೊತ್ತ 2,58,65,200/- ಆಗಿದೆ. ಅದರಲ್ಲಿ ಮೊದಲು ಕಳುಹಿಸಿರುವ 15 ಲೋಡ್ ಭತ್ತದ ಹಣಕ್ಕೆ, ಮೊತ್ತ ರೂ. 75,00,000 /- ಹಣವನ್ನು ಆರೋಪಿತ ಶ್ರೀನಿವಾಸ ಕಳುಹಿಸಿ ನಂಬಿಕೆಯನ್ನು ಹುಟ್ಟಿಸಿದ್ದಾನೆ. ಅದೇ ನಂಬಿಕೆಯಿಂದ ಉಳಿದ 25 ಲೋಡ್ ಭತ್ತವನ್ನು ನೆರೆಹೊರೆಯ ರೈತರಿಂದ ಪಡೆದು ಶ್ರೀನಿವಾಸ ರವರಿಗೆ ಕಳುಹಿಸಿಕೊಟ್ಟಿದ್ದಾರೆ.

ನಂತರ 25 ಲೋಡ್ ಬತ್ತದ ಬಾಕಿ ಉಳಿದಿರುವ ರೂ. 1,83,65,200/- ರೂ ಹಣವನ್ನು ಕೊಡದೆ ಸಬೂಬು ಹೇಳುತ್ತಾ , ಫೋನ್ ರಿಸೀವ್ ಮಾಡದೇ ಇದ್ದುದರಿಂದ ದಾವಣಗೆರೆಗೆ ಹುಡುಕಿಕೊಂಡು ಬಂದಿದ್ದು, ಅವರ ವಿಳಾಸ ಇತರೆ ಮಾಹಿತಿ ದೊರೆತಿಲ್ಲ.

ಶ್ರೀನಿವಾಸ ಮೊದಲು ನೀಡಿದ ಭತ್ತಕ್ಕೆ ಹಣವನ್ನು ನನಗೆ ಸರಿಯಾಗಿ ನೀಡಿ, ನಂಬಿಕೆ ಹುಟ್ಟಿಸಿ ಮೋಸ ಮಾಡುವ ಉದ್ದೇಶದಿಂದಲೇ ಉಳಿದ 25 ಲೋಡ್ ಭತ್ತವನ್ನು ತರಿಸಿಕೊಂಡು ರೂ. 1,83,65,200/- ರೂ ಹಣವನ್ನು ನೀಡದೇ ಮೋಸ ಮಾಡಿರುವ ಶ್ರೀನಿವಾಸ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಆರ್.ಎಂ.ಸಿ. ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಗಾಗಿ ಸಿಇಎನ್ ಪೊಲೀಸ್ ಠಾಣೆಯ ವರ್ಗಾವಣೆ ಮಾಡಿದ್ದಾರೆ.

ಪ್ರಕರಣದ ಆರೋಪಿತನ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಸಂತೋಷ , ಮಂಜುನಾಥ ಜಿ, ಸಿಇಎನ್ ಠಾಣೆಯ ಡಿವೈಎಸ್ಪಿ ಪದ್ಮಶ್ರೀಗುಂಜೀಕರ್ ಮಾರ್ಗದರ್ಶನದಲ್ಲಿ ಪಿ.ಎಸ್.ಐ ರೂಪಾ ತೆಂಬದ್, ಸಿಬ್ಬಂದಿಗಳಾದ ಸೋಮಶೇಖರಪ್ಪ, ಲೋಹಿತ್, ಮಲ್ಲಿಕಾರ್ಜುನ ಹಾದಿಮನಿ, ಗೋವಿಂದರಾಜ್, ಸಣ್ಣ ಬುಡೇನ್ ವಲಿ ತಂಡವು ನ.13 ರಂದು ಆರೋಪಿ ಶ್ರೀನಿವಾಸನನ್ನು ಮಹಾಲಕ್ಷ್ಮಿ ಲೇಔಟ್ ದಾವಣಗೆರೆ ಇಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಆರೋಪಿ ಶ್ರೀ ನಿವಾಸ ವಿರುದ್ಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಹದಡಿ, ಆರ್.ಎಂ.ಸಿ. ಪೊಲೀಸ್ ಠಾಣೆ, ಬಸವನಗರ ಪೊಲೀಸ್ ಠಾಣೆ, ಆಂದ್ರಪ್ರದೇಶ ರಾಜ್ಯದ ತಿರುಪತಿ ಜಿಲ್ಲೆಯ ಸತ್ಯವೇಡು ಪೊಲೀಸ್ ಠಾಣೆ ಪ್ರಕರಣಗಳಿವೆ.

ಆರೋಪಿ ಮೇಲೆ ರಾಜ್ಯದಲ್ಲಿನ ರೈತರಲ್ಲಿ ಭತ್ತವನ್ನು ಪಡೆದು ಹಣವನ್ನು ವಾಪಸ್ ಕೊಡದೆ ಹಲವು ದೂರುಗಳು ದಾಖಲಾಗಿದ್ದು,
ಈ ಬಗ್ಗೆ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಬೇಕಾಗಿದೆ.

ಹಲವಾರು ರೈತರಿಗೆ ಹಾಗೂ ದಲ್ಲಾಳಿಗೆ ವರ್ತಕರಿಗೆ ವಂಚನೆ ಮಾಡಿದ್ದ ಆರೋಪಿತ ಶ್ರೀನಿವಾಸ ನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಸಿಇಎನ್ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡವನ್ನು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್
ಶ್ಲಾಘಿಸಿ, ಪ್ರಶಂಸನಾ ಪತ್ರಗಳನ್ನು ನೀಡಿದ್ದಾರೆ.

TAGGED:crime newsdavangere latest newsದಾವಣಗೆರೆ ಸುದ್ದಿವಂಚನೆ
Share This Article
Twitter Email Copy Link Print
Previous Article davanagere Davanagere | ರೈಲ್ವೆಯಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ : ಆರೋಪಿ ಸೆರೆ
Next Article Davanagere ಮಾದಿಗ ಮತ್ತು ಸಹೋದರ ಜಾತಿಗಳಿಗೆ ಒಳಮೀಸಲಾತಿ ವರ : ಮಾಜಿ ಸಚಿವ ಎಚ್.ಆಂಜನೇಯ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere | ಸಿಟಿ ಬಸ್ ಕಲ್ಪಿಸಲು ಕೋರಿ ಮನವಿ ಸಲ್ಲಿಕೆ 

ದಾವಣಗೆರೆ (Davanagere): ದಾವಣಗೆರೆಯ ಕೆಟಿಜೆ ನಗರ, ಭಗತ್ ಸಿಂಗ್ ನಗರ ಹಾಗೂ ಲೆನಿನ್ ನಗರಕ್ಕೆ ಸಿಟಿ ಬಸ್ ಕಲ್ಪಿಸಲು ಕೋರಿ…

By Dinamaana Kannada News

ಸಮಗ್ರ ಲೆಗಸಿ ರಕ್ಷಣೆಗಾಗಿ ಕೋಟಕ್ ಸಿಗ್ನೇಚರ್ ಟರ್ಮ್ ಪ್ಲಾನ್ ಪ್ರಾರಂಭಿಸಿದ (Kotak Life) ಕೋಟಕ್ ಲೈಫ್

ಶಿವಮೊಗ್ಗ : ಕೋಟಕ್ ಮಹೀಂದ್ರಾ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ("ಕೋಟಕ್ ಲೈಫ್") ಕೋಟಕ್ ಸಿಗ್ನೇಚರ್ ಟರ್ಮ್ ಪ್ಲಾನ್ ಪ್ರಾರಂಭಿಸುವುದಾಗಿ…

By Dinamaana Kannada News

ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಅಹ್ವಾನ

ದಾವಣಗೆರೆ :  ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿಪ್ಲೋಮಾ ಕೋರ್ಸ್ಗಳಾದ ಡಿಪ್ಲೋಮಾ ಇನ್ ಟೂಲ್ & ಡೈ ಮೇಕಿಂಗ್,…

By Dinamaana Kannada News

You Might Also Like

Davanagere
ಅಪರಾಧ ಸುದ್ದಿತಾಜಾ ಸುದ್ದಿ

ಕಳವು ಪ್ರಕರಣ : ಆರೋಪಿ ಸೆರೆ,10 ಲಕ್ಷ ಮೌಲ್ಯದ ಒಡವೆ ವಶಕ್ಕೆ

By Dinamaana Kannada News
crime news davanagere
ತಾಜಾ ಸುದ್ದಿಅಪರಾಧ ಸುದ್ದಿ

ಸರಣಿ ಜಾನುವಾರು ಕಳ್ಳತನ ಪ್ರಕರಣ : 6 ಜನರ ಬಂಧನ

By Dinamaana Kannada News
ಅಪರಾಧ ಸುದ್ದಿ

ದಾವಣಗೆರೆಯಲ್ಲಿ ಭೀಕರ ಅಪಘಾತ: ಬೈಕ್-ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಆರ್ ಟಿ ಒ ಅಧೀಕ್ಷಕ ಸ್ಥಳದಲ್ಲೇ ಸಾವು

By Dinamaana Kannada News
Electrical accident: Three people die
ಅಪರಾಧ ಸುದ್ದಿತಾಜಾ ಸುದ್ದಿ

ಚಿಕ್ಕಜಾಜೂರು |ವಿದ್ಯುತ್ ಅವಘಡ: ಮೂವರ ದುರ್ಮರಣ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?