ದಾವಣಗೆರೆ (Davanagere): ರೈಲ್ವೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಒಟ್ಟು 21,03,600/- ಹಣವನ್ನು ಆನ್ ಲೈನ್ ಮೂಲಕ ಹಾಕಿಸಿಕೊಂಡು ವಂಚನೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಮೊಬೈಲ್ ನಲ್ಲಿ ಕನ್ನಡ ಮ್ಯಾಟ್ರಿಮೋನಿಯಲ್ ಆಪ್ ನೋಡುತ್ತಿರುವಾಗ ಅಪರಿಚಿತವಾದ ಮಧು ಎಂ ಮಹಾದೇವಪ್ಪ ಎಂಬುವರು ದೂರುದಾರರ ಮೊಬೈಲ್ ನಂಬರ್‍ಗೆ ವಾಟ್ಸಪ್ ಮೂಲಕ ಮೇಸೆಜ್ ಮಾಡಿ ನನಗೆ ನಿಮ್ಮ ಪ್ರೋಪೈಲ್ ಇಷ್ಟವಾಗಿದ್ದು, ನಾನು ನಿಮ್ಮನ್ನು ಮದುವೆ ಆಗಲು ಒಪ್ಪಿರುತ್ತೇನೆ ಎಂದು ಮೇಸೆಜ್ ಮಾಡಿ ನಂತರ ಆರೋಪಿತ ದೂರುದಾರರ ಮೊಬೈಲ್ ನಂಬರ್ ಗೆ ಪ್ರತಿ ದಿನ ವಿವಿಧ ಮೊಬೈಲ್ ನಂಬರ್ ಗಳಿಂದ ವಾಟ್ಸಪ್, ಕಾಲ್ ಮಾಡಿ ಮಾತನಾಡಿರುತ್ತಾರೆ.
ವಿದ್ಯಾಭ್ಯಾಸದಬಗ್ಗೆ ವಿಚಾರಿಸಿ ಮೈಸೂರು ನಗರದ ಆರ್ ಆರ್ ಬಿ ರೈಲ್ವೆ ಇಲಾಖೆಯಲ್ಲಿ Clerical Post ಗಳು ಖಾಲಿ ಇದ್ದು, ನಾನು ರೈಲ್ವೆ ಇಲಾಖೆಯ ವರ್ಕಶಾಫ್ ನಲ್ಲಿ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಉದ್ಯೋಗ ಕೊಡಿಸುವುದಾಗಿ ನಂಬಿಸಿ ದೂರುದಾರರಿಂದ ವಿವಿಧ ದಿನಾಂಕಗಳಂದು ಹಂತ ಹಂತವಾಗಿ ಒಟ್ಟು 21,03,600/- ಹಣವನ್ನು ಆನ್ ಲೈನ್ ಮೂಲಕ ಹಾಕಿಸಿಕೊಂಡು ವಂಚನೆ ಮಾಡಿರುವುದಾಗಿ ದಾವಣಗೆರೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಸಿಇಎನ್ ಪೊಲೀಸರು ಪ್ರಕರಣದ ಆರೋಪಿತನ ಪತ್ತೆಗಾಗಿ ಎಎಸ್ಪಿ ವಿಜಯಕುಮಾರ ಎಂ ಸಂತೋಷ ರವರು & ಜಿ ಮಂಜುನಾಥ, ಸಿಇಎನ್ ಪೊಲೀಸ್ ಉಪಾಧ್ಯಕ್ಷರಾದ ಪದ್ಮಶ್ರೀ ಗುಂಜೀಕರ್ ಮಾರ್ಗದರ್ಶನದಲ್ಲಿ ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಲಕ್ಷ್ಮಣ್ ನಾಯ್ಕ್ ನೇತೃತ್ವದಲ್ಲಿ ಸಿಬ್ಬಂದಿಯವರಾದ ಗೋವಿಂದರಾಜ್, ಅಶೋಕ, ಜಿಲ್ಲಾ ಪೊಲೀಸ್ ಕಛೇರಿಯ ರಾಮಚಂದ್ರ ಜಾಧವ್, ರಾಘವೇಂದ್ರ ರವರ ತಂಡ ಮಂಡ್ಯ ಜಿಲ್ಲೆಯ ಮಾಚಹಳ್ಳಿಯ ಆರೋಪಿ ಮಧು ಪತ್ತೆ ಮಾಡಿ 1 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ತನಿಖೆ ಮುಂದುವರೆಸಿದ್ದಾರೆ. ಆರೋಪಿತನಿಂದ 4,01,463 ದೂರುದಾರರಿಗೆ ಮರುಪಾವತಿ ಮಾಡಿಸಿದ್ದಾರೆ.
ಮ್ಯಾಟ್ರಮನಿ ವಿಚಾರವಾಗಿ ಆರೋಪಿಯು ಚಿಕ್ಕ ಮಗಳೂರು ಪೊಲೀಸ್ ಠಾಣೆ ಪ್ರಕರಣದಲ್ಲಿ-3,80,000/- ರೂ, ಮಂಡ್ಯ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿನ ಪ್ರಕರಣದಲ್ಲಿ -26,00,000/- ರೂ, ದಾವಣಗೆರೆ ಸಿಇಎನ್ ಪೊಲೀಸ್ ಠಾಣೆ ಪ್ರಕರಣದಲ್ಲಿ -21,03600/-ರೂ, ದಾವಣಗೆರೆ ಬಡಾವಣೆ ಪೊಲೀಸ್ ಠಾಣೆ ಪ್ರಕರಣದಲ್ಲಿ -1,50,000/- ರೂ, ಹರಿಹರ ನಗರ ಪೊಲೀಸ್ ಠಾಣೆ- ಸಿ ಆರ್ ನಂ 142-20219 ಪ್ರಕರಣದಲ್ಲಿ-1,30,000/- ರೂ, ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆ ಪ್ರಕರಣದಲ್ಲಿ – 2,80,000/-ರೂ, ಮೈಸೂರು ಸಿಇಎನ್ ಪೊಲೀಸ್ ಠಾಣೆ 35/2021 ಪ್ರಕರಣದಲ್ಲಿ -90,000/ರೂ, ಕೆ ಆರ್ ನಗರ ಪೊಲೀಸ್ ಠಾಣೆ ಪ್ರಕರಣದಲ್ಲಿ – 5,50,000/-ರೂ ವಿವಿಧ ಕಡೆಗಳಲ್ಲಿ 8 ಪ್ರಕರಣಗಳಲ್ಲಿ ಒಟ್ಟು 62,83,600/- ರೂ ವಂಚನೆ ಮಾಡಿರುತ್ತಾನೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಪ್ರಶಂಸ ವ್ಯಕ್ತಪಡಿಸಿರುತ್ತಾರೆ.
Read also : Davanagere | ಒತ್ತಡ ಮುಕ್ತ ಜೀವನಕ್ಕೆ ಪುಸ್ತಕ ಸಹಕಾರಿ : ಡಾ.ಪ್ರಭಾ ಮಲ್ಲಿಕಾರ್ಜುನ್