Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ರಾಜಕೀಯ > Political analysis | ಜೆಡಿಎಸ್ ಸಾರಥಿಯಾಗಲು ನಿಖಿಲ್ ರೆಡಿ
ರಾಜಕೀಯ

Political analysis | ಜೆಡಿಎಸ್ ಸಾರಥಿಯಾಗಲು ನಿಖಿಲ್ ರೆಡಿ

Dinamaana Kannada News
Last updated: November 18, 2024 5:15 am
Dinamaana Kannada News
Share
Political analysis
Political analysis
SHARE

ಕಳೆದ ಶುಕ್ರವಾರ ರಾಜ್ಯ ಬಿಜೆಪಿಯ ಕೆಲ ನಾಯಕರು ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸಕ್ಕೆ ಹೋಗಿದ್ದಾರೆ. ಹೀಗೆ ಹೋದವರು ಪಕ್ಷದ ಭಿನ್ನಮತೀಯರು ಇಡುತ್ತಿರುವ ಹೆಜ್ಜೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಏನ್ಸಾರ್, ಈ ಯತ್ನಾಳ್, ಲಿಂಬಾವಳಿ ಅವರೆಲ್ಲ ಸೇರಿ ವಕ್ಪ್ ಗೋಜಲಿನ ವಿರುದ್ಧ ಯಾತ್ರೆ ಮಾಡಲು ನಿರ್ಧರಿಸಿದ್ದಾರೆ.ಇವತ್ತು ಅಧ್ಯಕ್ಷರು ಘೋಷಿಸಿರುವ ಹೋರಾಟಕ್ಕೆ ಪ್ರತಿಯಾಗಿ ಇವರ ಹೋರಾಟ ಶುರುವಾದರೆ ಪಕ್ಷದ ಗತಿಯೇನು? ಇವರಿಗ್ಯಾರು ಹೇಳುವವರು ಕೇಳುವವರೇ ಇಲ್ಲವೇ? ಅಂತ ಈ ನಾಯಕರು ಕೇಳಿದಾಗ ಯಡಿಯೂರಪ್ಪ ಮೌನವಾಗಿದ್ದರಂತೆ.

ಆಗ ಮಾತು ಮುಂದುವರಿಸಿದ ಈ ನಾಯಕರು, ಒಂದು ಪಕ್ಷದಲ್ಲಿ ಈ ರೀತಿ ಎರಡು ಬಣಗಳು ಕಂಡರೆ ನಮ್ಮ ಹೋರಾಟಕ್ಕೆ ಅರ್ಥವೇ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ಯತ್ನಾಳ್, ಜಾರಕಿಹೊಳಿ, ಲಿಂಬಾವಳಿ ಅವರಂತವರ ಪಕ್ಷ ವಿರೋಧಿ ಚಟುವಟಿಕೆಯನ್ನು ಹತ್ತಿಕ್ಕುವ ಕೆಲಸವಾಗದಿದ್ದರೆ ನಾವು ಮುಂದುವರಿಯುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.

ಈ ಸಂದರ್ಭದಲ್ಲಿ ಮೌನ‌ಮುರಿದ ಯಡಿಯೂರಪ್ಪ,’ ನಿಜ ಇವರದೆಲ್ಲ ಅತಿಯಾಗಿದೆ. ಹಾಗಂತ ನಾನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರಿಗೆ ಹಲವು ಬಾರಿ ಹೇಳಿದ್ದೇನೆ. ಹೀಗೆ ಅಪಸ್ವರ ಎತ್ತುತ್ತಿರುವವರಿಗೆ ವಾರ್ನ್ ಮಾಡಿ. ಇಲ್ಲವೇ ಪಕ್ಷದಿಂದ ಉಚ್ಚಾಟಿಸಿ ಅಂತ ಹೇಳಿದ್ದೇನೆ. ನಾನು ಹೇಳಿದಾಗಲೆಲ್ಲ ಅವರು ಡೋಂಟ್ ವರಿ ನಾನು ಯತ್ನಾಳ್, ಜಾರಕಿಹೊಳಿ ಅವರಿಗೆಲ್ಲ ವಾರ್ನ್ ಮಾಡುತ್ತೇನೆ ಅನ್ನುತ್ತಾರೆ.

ಅವರು ಈ ರೀತಿ ವಾರ್ನ್ ಮಾಡಿದ ಮೇಲೆ ಇವರೂ ನಾಲ್ಕು ದಿನ ಸುಮ್ಮನಿರುತ್ತಾರೆ. ಆ ಮೇಲೆ ಯಥಾಪ್ರಕಾರ ಅಪಸ್ವರ ಎತ್ತುತ್ತಾರೆ. ಹೀಗಾಗಿ ಹೇಳಿ ಹೇಳಿ ನನಗೂ ಬೇಸತ್ತು ಹೋಗಿದೆ ಎಂದಿದ್ದಾರೆ. ಯಡಿಯೂರಪ್ಪ ಅವರ ಮಾತಿನಲ್ಲಿದ್ದ ನೋವನ್ನು ಗಮನಿಸಿದ ಈ ನಾಯಕರ ಪಡೆ: ‘ಸಾರ್ ಇದೆಲ್ಲ ಆ ಸಂಘ ಪರಿವಾರದ ಲೀಡರ್ ಕೊಟ್ಟಿರುವ ಕುಮ್ಮಕ್ಕು . ಇದು ಹೀಗೇ ಮುಂದುವರಿಯಲು ಬಿಟ್ಟರೆ ನಾಳೆ ಯತ್ನಾಳ್, ಜಾರಕಿಹೊಳಿ, ಲಿಂಬಾವಳಿ ಯರದವರೆಲ್ಲ ವಿಜಯೇಂದ್ರ  ಅವರ ಕೈ  ಕಟ್ಟಿ ಹಾಕುತ್ತಾರೆ.

ಹಾಗಂತ ಈ  ಆಟವನ್ನು ಎಷ್ಟು ದಿನ ಅಂತ ಸಹಿಸ್ಕೊಳ್ಳೋದು? ಹೀಗಾಗಿ ನೀವು ನಮಗೆ ಪರ್ಮಿಷನ್ ಕೊಡಿ. ನಾವು ಇಪ್ಪತ್ತೋ ಮೂವತ್ತು ಮಂದಿ ದಿಲ್ಲಿಗೆ ಹೋಗುತ್ತೇವೆ. ಹೋಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ದೂರು ಕೊಡುತ್ತೇವೆ. ಒಂದೋ ಈ ಭಿನ್ನಮತೀಯರ ಬಾಯನ್ನು ಅವರು ಮುಚ್ಚಿಸಲಿ. ಇಲ್ಲವೇ ಪಕ್ಷದಿಂದ ಉಚ್ಚಾಟನೆ ಮಾಡಲಿ’ ಎಂದಿದ್ದಾರೆ.

ಆದರೆ, ಈ ನಾಯಕರ ಮಾತನ್ನು ಕೇಳಿದ ಯಡಿಯೂರಪ್ಪ ಅವರು, ನೋ ನೋ ಜಾಗೆಲ್ಲ ನಿಯೋಗದಲ್ಲಿ ಹೋಗಿ ದೂರು ಕೊಡೋದು ಸರಿಯಲ್ಲ.ಹಾಗೇನಾದ್ರೂ ಹೋದ್ರೆ ಪಕ್ಷದ ಒಳಜಗಳದ ಬಗ್ಗೆ ನಾವೇ ವಿರೋಧ ಪಕ್ಷದವರಿಗೆ ಮೆಸೇಜು ಕೊಟ್ಟಂತಾಗುತ್ತದೆ ಅಂತ ಹೇಳಿದ್ದಾರೆ.

ಯಾವಾಗ ಯಡಿಯೂರಪ್ಪ ಈ ಮಾತು ಹೇಳಿದರೋ? ಆಗ ಅಲ್ಲಿದ್ದ ನಾಯಕರಿಗೆ ಮತ್ತಷ್ಟು ಬೇಸರವಾಗಿದೆ. ಹಾಗಂತಲೇ:’ಸಾರ್ ಈ ಭಿನ್ನಮತೀಯರನ್ನು ಈಗಲೇ ಕಂಟ್ರೋಲಿಗೆ ತರದಿದ್ದರೆ ನಾಳೆ ಬಹಿರಂಗವಾಗಿಯೇ ವಿಜಯೇಂದ್ರ ಅವರನ್ನು‌ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಅಂತ ಹೋರಾಟ ಶುರು ಮಾಡ್ತಾರೆ. ಹೀಗಾಗಿ ಅವರ ಆಟಕ್ಕೆ ಪ್ರತಿಹೋರಾಟ ಶುರು ಮಾಡದಿದ್ದರೆ ಕಷ್ಟ.ಅಂದ ಹಾಗೆ ಈ ಯತ್ನಾಳ್ ಅವರೆಲ್ಲ ತಮ್ಮಿಚ್ಚೆಯಂತೆ ಯಾತ್ರೆ ಶುರು ಮಾಡಿದರು ಅಂತಿಟ್ಟುಕೊಳ್ಳಿ. ಆಮೇಲೆ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ಒಂದು ಸಲ ಈ ಯಾತ್ರೆ ನಡೆದೇ ಹೋಯಿತು ಅಂದುಕೊಳ್ಳಿ. ಆಗ ವಿಜಯೇಂದ್ರ ಅವರ ನಾಯಕತ್ವಕ್ಕೆ ಪವರ್ರು ಇರುವುದಿಲ್ಲ ಅಂತ ಹೇಳಿದ್ದಾರೆ.

ಆಗ ಮಾತನಾಡಿದ ಯಡಿಯೂರಪ್ಪ,’ ಇಲ್ಲ ಇಲ್ಲ ಅವರ ಯಾತ್ರೆ ನಡೆಯುವುದಿಲ್ಲ. ನಾನು ಕೂಡಾ ನಡ್ಡಾ ಅವರಿಗೆ ಈ ಕುರಿತು ಸ್ಪಷ್ಟವಾಗಿ ಹೇಳಿದ್ದೇನೆ. ಅವರು ಕೂಡಾ ಈ ಯಾತ್ರೆ ನಡೆಯುವುದಿಲ್ಲ. ಕ್ಯಾನ್ಸಲ್ ಮಾಡಿಸುತ್ತೇನೆ ಅಂತ ಪ್ರಾಮಿಸ್ಸು ಮಾಡಿದ್ದಾರೆ’ ಅಂತ ವಿವರಿಸಿದ್ದಾರೆ.

ದಿಲ್ಲಿಗೆ ಧಾವಿಸಲಿದೆ ನಿಷ್ಟರ ಪಡೆ (Political analysis)

ಹೀಗೆ ಭಿನ್ನಮತೀಯರ ವಿರುದ್ದ ಆರ್ಭಟಿಸದಂತೆ ಯಡಿಯೂರಪ್ಪ ತಮ್ಮ ನಿಷ್ಟರಿಗೆ ಸೂಚಿಸಿದ್ದಾರಾದರೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಹಲ ನಾಯಕರು ದಿಲ್ಲಿ ಯಾತ್ರೆಗೆ ಅಣಿಯಾಗತೊಡಗಿದ್ದಾರೆ. ಒಂದು ವೇಳೆ ನಿಗದಿತ ಸಮಯಕ್ಕೆ ಯತ್ನಾಳ್ ಅಂಡ್ ಗ್ಯಾಂಗ್ ನ ಯಾತ್ರೆ ಶುರುವಾದರೆ ದಿಲ್ಲಿಗೆ ಹೋಗಿ ವರಿಷ್ಟರಿಗೆ ದೂರು ನೀಡುವುದು ಈ ನಾಯಕರ ಲೆಕ್ಕಾಚಾರ.

ಕರ್ನಾಟಕದಲ್ಲಿ ಪಕ್ಷವನ್ನು ಕಟ್ಟಿದವರು ಯಡಿಯೂರಪ್ಪ.ಇಡೀ ರಾಜ್ಯ ಸುತ್ತಿ ಪಕ್ಷವನ್ನು ಅಧಿಕಾರಕ್ಕೆ ತಂದವರು ಯಡಿಯೂರಪ್ಪ. ಇವತ್ತು ಯಡಿಯೂರಪ್ಪ ಬೇಡ, ವಿಜಯೇಂದ್ರ ಬೇಡ ಅನ್ನುತ್ತಿರುವ ಭಿನ್ನಮತೀಯರ ಪೈಕಿ ಯಾರಿಗೆ ಈ ಶಕ್ತಿ‌ ಇದೆ? ಅದರಲ್ಲೂ ಬಹುತೇಕರಿಗೆ ತಮ್ಮ ಕ್ಷೇತ್ರದಲ್ಲೇ ಶಕ್ತಿಯಿಲ್ಲ. ಉಳಿದವರಿಗೆ ತಮ್ಮ ಕ್ಷೇತ್ರ ಬಿಟ್ಟು ಮತ್ತೊಂದು ಕಡೆ ಪವರ್ರಿಲ್ಲ. ಇಂತವರನ್ನು ತಕ್ಷಣ ತಡೆಗಟ್ಟಿ.ಇಲ್ಲವೇ ಪಕ್ಷದಿಂದ ಕಿತ್ತೆಸೆಯಿರಿ ಅಂತ ವರಿಷ್ಟರಿಗೆ ಹೇಳಲು ಈ ಪಡೆ ನಿರ್ಧರಿಸಿದೆ.

ಡಿಸೆಂಬರ್ ಎರಡನೇ ವಾರ ಪ್ರಾರಂಭವಾಗಲಿರುವ ವಿಧಾನಮಂಡಲ ಅಧಿವೇಶನದ ನಂತರ ದಿಲ್ಲಿ ಯಾತ್ರೆ ನಡೆಸುವುದು ಯಡಿಯೂರಪ್ಪ ಆಪ್ತರ ಲೆಕ್ಕಾಚಾರ. ಹಾಗೊಂದು ವೇಳೆ ಪಕ್ಷದ ವರಿಷ್ಟರು ಯತ್ನಾಳ್ ಅಂಡ್ ಗ್ಯಾಂಗಿನ ಯಾತ್ರೆಗೆ ಬ್ರೇಕ್ ಹಾಕಿದರೆ ಯಡಿಯೂರಪ್ಪ ನಿಷ್ಟರ ದಿಲ್ಲಿ ಯಾತ್ರೆಗೂ ಬ್ರೇಕ್ ಬೀಳಲಿದೆ ಎಂಬುದು ಸಧ್ಯದ ಮಾಹಿತಿ.

ಯಡಿಯೂರಪ್ಪ ಆಪ್ತರ ಅನುಮಾನ ಏನು? (Political analysis)

ಅಂದ ಹಾಗೆ ಯತ್ನಾಳ್ ಸೇರಿದಂತೆ ಭಿನ್ನಮತೀಯರ ವಿರುದ್ಧ ಯಡಿಯೂರಪ್ಪ ಮತ್ತು ವಿಜಯೇಂದ್ರ ಹಲವು ಬಾರಿ ದೂರು ನೀಡಿರುವುದೇನೋ ಸರಿ. ಆದರೆ ಅಷ್ಟೆಲ್ಲ ಮಾಡಿದರೂ ವರಿಷ್ಟರೇಕೆ ಸುಮ್ಮನಿದ್ದಾರೆ?ಎಂಬುದು ಅವರ ಆಪ್ತರ ಅನುಮಾನ.

ಎಲ್ಲಕ್ಕಿಂತ ಮುಖ್ಯವಾಗಿ ಇಷ್ಟು ಬಾರಿ ದೂರು ನೀಡಿದ ಮೇಲೂ ಭಿನ್ನಮತೀಯರ ಧ್ವನಿ ಏನೂ ಅಡಗಿಲ್ಲ. ಬದಲಿಗೆ ವಿಜಯೇಂದ್ರ ಅವರನ್ನು ಅಧ್ಯಕ್ಷ ಪಟ್ಟದಿಂದ ಕೆಳಗಿಳಿಸುವುದೇ ತಮ್ಮ ಗುರಿ ಎಂಬ ಮೆಸೇಜನ್ನು ಭಿನ್ನರು ರವಾನಿಸುತ್ತಲೇ ಇದ್ದಾರೆ. ಹೀಗೆ ಭಿನ್ನರು ಹೇಳಿದ ಮಾತ್ರಕ್ಕೆ ವರಿಷ್ಟರು ವಿಜಯೇಂದ್ರ ಅವರನ್ನು ತಕ್ಷಣ ಇಳಿಸುತ್ತಾರೆ ಅಂತೇನೂ ಅಲ್ಲ.ಆದರೆ ಈಗಿನ ಸ್ಥಿತಿ ನೋಡಿದರೆ ವಿಜಯೇಂದ್ರ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಯ ತನಕ ಮುಂದುವರಿಸುವುದು ಡೌಟು ಎಂಬುದು ಈ ಆಪ್ತರ ಯೋಚನೆ.

ಅಂದ ಹಾಗೆ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯ ಅವಧಿ ಎರಡು ವರ್ಷವಾದರೂ ತಮ್ಮನ್ನು ಎರಡನೇ ಅವಧಿಗೂ ಮುಂದುವರಿಸುತ್ತಾರೆ ಅಂತ ವಿಜಯೇಂದ್ರ ಅವರೇನೋ ನಂಬಿದ್ದಾರೆ. ಹಾಗಂತಲೇ ರಾಜ್ಯಾದ್ಯಂತ ಯುವಕರ ಪಡೆಯನ್ನು ಬಲಿಷ್ಟಗೊಳಿಸುತ್ತಾ ಮುಂಬರುವ ವಿಧಾನಸಭಾ ಚುನಾವಣೆಯ ನೇತೃತ್ವ ತಮ್ಮದೇ ಅಂತ ನಂಬಿದ್ದಾರೆ.

ಆದರೆ ದಿಲ್ಲಿ ಲೆವೆಲ್ಲಿನಲ್ಲಿ ವಿಜಯೇಂದ್ರ ಅವರನ್ನು ದುರ್ಬಲಗೊಳಿಸಲು ವಿರೋಧಿಗಳು ಒಂದುಗೂಡುತ್ತಿದ್ದಾರೆ. ಹೀಗೆ ಒಂದುಗೂಡುತ್ತಿರುವವರು ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರ ವಿಶ್ವಾಸ ಗಿಟ್ಟಿಸುತ್ತಿರುವುದನ್ನು ನೋಡಿದರೆ ಮುಂದಿನ ಕೆಲವೇ ಕಾಲದಲ್ಲಿ ವಿಜಯೇಂದ್ರ ಅವರ ಕೈ ಬಿಗಿ ಮಾಡುವ  ಕೆಲಸ ವಿದ್ಯುಕ್ತವಾಗಿಯೇ ನಡೆಯಲಿದೆ.

ಇಂತಹ ಪರಿಸ್ಥಿತಿ ನಿರ್ಮಾಣವಾಗುವುದನ್ನು ತಡೆಗಟ್ಟಲು ಈಗಲೇ ವಿಜಯೇಂದ್ರ ಮತ್ತು ಯಡಿಯೂರಪ್ಪ ಸಜ್ಜಾಗದಿದ್ದರೆ ಅಧ್ಯಕ್ಷ ಪಟ್ಟ ಬೇರೆಯವರ ಪಾಲಾದರೂ ಅಚ್ಚರಿ ಇಲ್ಲ ಎಂಬುದು ಈ ಆಪ್ತರ ಅನುಮಾನ.

ಜೆಡಿಎಸ್ ಗೆ   ನಿಖಿಲ್ ಸಾರಥಿ (Political analysis)

ಇನ್ನು ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗುವ ಕಾಲ ಹತ್ತಿರ ಬಂದಿದೆ. ಮೂಲಗಳ ಪ್ರಕಾರ, ಉಪಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿಖಿಲ್‌ಕುಮಾರಸ್ವಾಮಿ ಅವರನ್ನು ನೇಮಕ ಮಾಡಲು ತೀರ್ಮಾನಿಸಲಾಗಿದೆ.

ವಾಸ್ತವವಾಗಿ ಕುಮಾರಸ್ವಾಮಿ ಅವರು  ಕೇಂದ್ರ ಮಂತ್ರಿಯಾದ ಸಂದರ್ಭದಲ್ಲೇ ನಿಖಿಲ್ ಅವರಿಗೆ ಪಟ್ಟ ಕಟ್ಟುವ ತೀರ್ಮಾನವಾಗಿತ್ತು.ಆದರೆ,  ಶಾಸಕರಾಗುವ ಮುನ್ನವೇ ಈ ಜಾಗಕ್ಕೆ ಅವರನ್ನು ತಂದು ಕೂರಿಸುವುದು ಸರಿಯಲ್ಲ.ಹಾಗೇನಾದರೂ ಮಾಡಿದರೆ ಪಕ್ಷದಲ್ಲಿರುವ ಕೆಲ‌ ಹಿರಿಯ ನಾಯಕರು ಮುನಿಸಿಕೊಳ್ಳಬಹುದು ಎಂಬ ಕಾರಣಕ್ಕಾಗಿ ಕುಮಾರಸ್ವಾಮಿ ಮತ್ತು ದೇವೇಗೌಡರು ಸುಮ್ಮನಾಗಿದ್ದರು.

ಆದರೆ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆದ ನಂತರ ಕುಮಾರಷ್ವಾಮಿ ಮತ್ತು ದೇವೇಗೌಡರಿಗೆ ಫುಲ್ಲು ನಂಬಿಕೆ ಬಂದಿದೆಯಂತೆ. ಅರ್ಥಾತ್,ಉಪಚುನಾವಣೆಯಲ್ಲಿ ನಿಖಿಲ್ ಗೆಲ್ಲುವುದು ಪಕ್ಕಾ ಎಂಬುದು ಅವರ ನಂಬಿಕೆ. ಹೀಗಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟಕ್ಕೆ ಅವರನ್ನು ತಂದು ಕೂರಿಸಬಹುದು ಅಂತ ಈ ಜೋಡಿ ಭಾವಿಸಿದೆ. ಅಂದ ಹಾಗೆ ಈ ಮುಂಚೆ ನಿಖಿಲ್‌ ಅವರಿಗೆ ಪಟ್ಟ ಕಟ್ಟಿದರೆ ಅಪಸ್ವರ ಎತ್ತುವವರು ಯಾರು? ಅಂತ ಊಹಿಸಿದ್ದ ಕುಮಾರಸ್ವಾಮಿ ಮತ್ತು ದೇವೇಗೌಡರಿಗೆ ಆ ವಿಷಯದಲ್ಲಿ‌ ಮತ್ತಷ್ಟು ಸ್ಪಷ್ಟತೆ ಬಂದಿದೆ.

ಕುತೂಹಲದ ಸಂಗತಿ ಎಂದರೆ ಇಂತಹ ನಾಯಕರೆಲ್ಲ ಜೆಡಿಎಸ್ ಗಿಂತ ಕಾಂಗ್ರೆಸ್ ಪಕ್ಷಕ್ಕೆ ಹತ್ತಿರದವರು ಮತ್ತು ಸದಾ ಕಾಲ ಕೈ ನಾಯಕರ ಸಂಪರ್ಕದಲ್ಲಿರುವವರು.ಇವರಿಗೆ ದೇವೇಗೌಡ ಕುಮಾರಸ್ವಾಮಿ ಅವರಿಗಿಂತ ಕಾಂಗ್ರೆಸ್ ಪಕ್ಷದ ನಾಯಕರೇ ಆಪ್ತರು. ಹೀಗಾಗಿ ಇಂತವರನ್ನು ಗುರುತಿಸಿರುವ ಅವರು ಉಪಚುನಾವಣೆಯ ಫಲಿತಾಂಶ ಬಂದ ನಂತರ ಪಕ್ಷದಿಂದಲೇ ಉಚ್ಚಾಟಿಸಲು ಅಣಿಯಾಗಿದ್ದಾರೆ. ಅಲ್ಲಿಗೆ ನಿಖಿಲ್ ಪಟ್ಟಾಭಿಷೇಕಕ್ಕೂ ಮುನ್ನ ಪಕ್ಷದ ನಾಲ್ಕೈದು ಮಂದಿ ನಾಯಕರ ತಲೆದಂಡ ಆಗುವುದು ಪಕ್ಕಾ ಆದಂತಿದೆ.

ಲಾಸ್ಟ್ ಸಿಪ್ (Political analysis)

ಈ ಮಧ್ಯೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಸಂದರ್ಭದಲ್ಲಿ ಸಚಿವ ಜಮೀರ್ ಅಹ್ಮದ್ ಆಡಿದ ಮಾತು ಕೈ ಪಾಳಯವನ್ನು ತಲ್ಲಣಗೊಳಿಸಿದೆಯಾದರೂ ಡಿಕೆ ಬ್ರದರ್ಸ್ ಮಾತ್ರ ಯೋಗೇಶ್ವರ್ ಗೆಲ್ಲುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರಂತೆ.

ಅಂದ ಹಾಗೆ ಚನ್ನಪಟ್ಟಣದ ಕಣಕ್ಕೆ ಮಾಜಿ ಪ್ರಧಾನಿ ದೇವೇಗೌಡರು ನುಗ್ಗಿದ ರೀತಿ ಮತ್ಗು ಕುಮಾರಸ್ವಾಮಿ ಅವರನ್ನು ಕರಿಯ ಅಂತ ಜಮೀರ್ ಲೇವಡಿ ಮಾಡಿದ ವಿಷಯ ಒಕ್ಕಲಿಗ ಮತ ಬ್ಯಾಂಕಿನ ಮೇಲೆ ಪರಿಣಾಮ ಬೀರಿದ್ದು ಹೌದಾದರೂ,ಅದು ಯೋಗೇಶ್ವರ್ ಗೆಲುವಿಗೆ ಅಡ್ಡಿಯಾಗುವುದಿಲ್ಲ ಎಂಬುದು ಡಿಕೆ ಬ್ರದರ್ಸ್ ನಂಬಿಕೆ.

ಅವರ ಈ ನಂಬಿಕೆಗೆ ಕಾರಣವೂ ಇದೆ. ಅದೆಂದರೆ ಮುಸ್ಲಿಂ,ಕುರುಬ ಮತ್ತು ದಲಿತ  ಮತ ಬ್ಯಾಂಕು ದೊಡ್ಡ ಮಟ್ಟದಲ್ಲಿ ಯೋಗೇಶ್ವರ್ ಪರವಾಗಿ ಕನ್ ಸಾಲಿಡೇಟ್ ಆಗಿದೆ ಎಂಬುದು. ಅದೇ ರೀತಿ ಒಕ್ಕಲಿಗ ಮತ ಬ್ಯಾಂಕಿನ ಮಿನಿಮಮ್ ನಲವತ್ತು ಪರ್ಸೆಂಟ್ ಷೇರು ಕಾಂಗ್ರೆಸ್ ಗೆ ಲಭ್ಯವಾಗಿದೆ ಎಂಬುದು ಡಿಕೆ ಬ್ರದರ್ಸ್ ಲೆಕ್ಕಾಚಾರ.

ಈ ಲೆಕ್ಕಾಚಾರ ನಿಜವೇ ಆದರೆ ಯೋಗೇಶ್ವರ್ ಐದರಿಂದ ಹತ್ತು ಸಾವಿರ ಮತಗಳ ಅಂತರದಲ್ಲಿ ಗೆಲ್ಲುವುದು ಗ್ಯಾರಂಟಿ. ಆದರೆ , ಒಂದು ವೇಳೆ ಈ ಲೆಕ್ಕಾಚಾರವನ್ನು ಮೀರಿ ನಿಖಿಲ್ ಕುಮಾರಸ್ವಾಮಿ ಅವರು ಗೆದ್ದರೆ ನೋ ಡೌಟ್, ಸಚಿವ ಜಮೀರ್ ಅಹ್ಮದ್ ಅವರು ಕೈ ಪಾಳಯದ ವಿಲನ್ ಪಾತ್ರಧಾರಿಯಾಗುವುದು ಗ್ಯಾರಂಟಿ.

Read also : Political analysis | ಜಮೀರಣ್ಣ ಬಂದ್ರು ಕುಮಾರಣ್ಣ ಖುಷಿಯಾದ್ರು

ವಸ್ತುಸ್ತಿತಿ ಎಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮುಸ್ಲಿಂ ಕೋಟಾದಡಿ ಜಮೀರ್ ಅಹ್ಮದ್ ಮತ್ತು ಎನ್.ಎ.ಹ್ಯಾರೀಸ್ ಅವರ ಪೈಕಿ ಒಬ್ಬರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಸಿದ್ದು-ಡಿಕೆಶಿ ಮಧ್ಯೆ ಜಟಾಪಟಿ ನಡೆದಿತ್ತು. ಅವತ್ತು ಎನ್.ಎ.ಹ್ಯಾರೀಸ್ ಪರ ನಿಂತ ಡಿಕೆಶಿ :’ ಚುನಾವಣೆಯಲ್ಲಿ ಪಕ್ಷಕ್ಕಾಗಿ ಹ್ಯಾರೀಸ್ ತುಂಬ ಇನ್ ವೆಸ್ಟ್ ಮಾಡಿದ್ದಾರೆ.ಹೀಗಾಗಿ ಅವರಿಗೇ ಮಂತ್ರಿಗಿರಿ ಸಿಗಬೇಕು ಎಂದಿದ್ದರಂತೆ.

ಆದರೆ ಜಮೀರ್ ಅಹ್ಮದ್ ಅವರು ಮುಸ್ಲಿಂ ಮತಗಳು ಕನ್ ಸಾಲಿಡೇಟ್ ಆಗಲು ದುಡಿದಿದ್ದಾರೆ. ಹೀಗಾಗಿ ಅವರಿಗೇ ಚಾನ್ಸು ಸಿಗಬೇಕು ಅಂತ ಸಿದ್ದು ಪಟ್ಟು ಹಿಡಿದು ಸಕ್ಸಸ್ ಆದರು. ಆದರೆ,  ಚನ್ನಪಟ್ಟಣದ ಕಣದಲ್ಲೀಗ ಯೋಗೇಶ್ವರ್ ಸೋತರೆ ಜಮೀರ್ ಅವರಿಗೆ ಕಷ್ಟದ ದಿನಗಳು ಕಾದಿವೆ ಅಂತಲೇ ಅರ್ಥ.

ಆರ್.ಟಿ.ವಿಠ್ಠಲಮೂರ್ತಿ

TAGGED:Dinamana.comKannada NewsPolitical Analysisಕನ್ನಡ ಸುದ್ದಿದಿನಮಾನ.ಕಾಂರಾಜಕೀಯ ವಿಶ್ಲೇಷಣೆ
Share This Article
Twitter Email Copy Link Print
Previous Article DAVANAGERE Davanagere | ಸಾಮಾಜಿಕ ಜಾಲತಾಣಗಳಲ್ಲಿ ವಂಚನೆ ಹೆಚ್ಚಾಗಿವೆ : ಮಹಮ್ಮದ್ ರಫಿ  
Next Article Davanagere ಒಳ್ಳೆಯ ಆರೋಗ್ಯಕ್ಕಾಗಿ ನೈಸರ್ಗಿಕ ಚಿಕಿತ್ಸೆ ಅವಶ್ಯ : ಬಸವಪ್ರಭುಸ್ವಾಮೀಜಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

THE TEAM ACADEMY ವಿದ್ಯಾರ್ಥಿ ಫಕ್ಕಿರೇಶ್‌ ಟಿ ರಾಜ್ಯಕ್ಕೆ 160 ನೇ ರ‍್ಯಾಂಕ್

ದಾವಣಗೆರೆ :  2023-24 ನೇ ಸಾಲಿನಲ್ಲಿ ನಡೆಸಲಾದ ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ದಿ.ಟೀಮ್‌ ಅಕಾಡಮಿಯ ವಿದ್ಯಾರ್ಥಿ ಫಕ್ಕಿರೇಶ್‌ ಟಿ 160 ನೇ…

By Dinamaana Kannada News

JOB NEWS | ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ

ದಾವಣಗೆರೆ(JOB NEWS): ಸಿಬ್ಬಂದಿ ನೇಮಕಾತಿ ಆಯೋಗದ ವತಿಯಿಂದ ಸ್ಟೆನೋಗ್ರಾಫರ್ ಗ್ರೇಡ್-ಸಿ ಮತ್ತು ಡಿ.ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಜೂನ್ 26…

By Dinamaana Kannada News

ದಿನಮಾನ ಹೆಮ್ಮೆ : ಬಳ್ಳಾರಿ ಜಾಲಿ ಹೂಗಳ ಕವಿ- ಪೀರ್ ಬಾಷಾ

Kannada News | Dinamaanada Hemme  | Dinamaana.com | 06-07-2024 ಆಕ್ಕಾ...ಸೀತಾ ನಿನ್ನಂತೆ ನಾನೂ ಶಂಕಿತ  (Peer Basha)…

By Dinamaana Kannada News

You Might Also Like

bhadra-dam
ತಾಜಾ ಸುದ್ದಿ

Bhadra dam | ಭದ್ರಾ ಜಲಾಶಯ : ತುಂಬಲು ದಿನಗಣನೆ ಆರಂಭ

By Dinamaana Kannada News
Dinesh K Shetty
ತಾಜಾ ಸುದ್ದಿ

ದಾವಣಗೆರೆ|ದೇಶ ಮತ್ತು ಯೋಧರ ವಿಚಾರದಲ್ಲಿ ರಾಜಕೀಯ ಸಲ್ಲ: ದಿನೇಶ್ ಕೆ ಶೆಟ್ಟಿ

By Dinamaana Kannada News
recruitment for posts in BSF
ತಾಜಾ ಸುದ್ದಿ

BSFನಲ್ಲಿ 3588 ಹುದ್ದೆಗಳ ಭರ್ಜರಿ ನೇಮಕಾತಿ

By Dinamaana Kannada News
Gold price
ತಾಜಾ ಸುದ್ದಿ

ಮೂರು ದಿನಗಳಲ್ಲಿ ಚಿನ್ನದ ಬೆಲೆ 2,400 ರೂ. ಇಳಿಕೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?