ದಾವಣಗೆರೆ (Davanagere): ಕರ್ನಾಟಕ ಸರ್ಕಾರದ ಸಾರಿಗೆ ಸಂಸ್ಥೆ ಮತ್ತು ಸಂಚಾರಿ ಪೊಲೀಸ್ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಸಹಯೋಗದೊಂದಿಗೆ ರಸ್ತೆ ಸುರಕ್ಷತಾ ಸಪ್ತಾಹ ಜಾಗೃತಿ ಹಿನ್ನಲೆಯಲ್ಲಿ ದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ, ಕೊಂಡಜ್ಜಿ ಬಸಪ್ಪ ಸ್ಥಳೀಯ ಸಂಸ್ಥೆಯಿಂದ ಇಲ್ಲಿನ ತರಳಬಾಳು ವಸತಿಯುತ ಶಾಲೆಯ ಆವರಣದಲ್ಲಿ ಸ್ಕೌಟ್ ಗೈಡ್ ಮಕ್ಕಳಿಗೆ ರಸ್ತೆಯ ನಿಯಮಗಳ ಬಗ್ಗೆ ಎಲ್‌ಇಡಿ ಮೂಲಕ ದೃಶ್ಯಾವಳಿಗಳನ್ನು ತೋರಿಸುವುದರ ಮೂಲಕ ಅರಿವು ಮೂಡಿಸಲಾಯಿತು.
ವಾರ್ತಾ ಇಲಾಖೆಯ ಅಧಿಕಾರಿ ರಮ್ಯಾ, ಸಂಚಾರಿ ಪೊಲೀಸ್ ಬಸವರಾಜ, ತರಳಬಾಳು(ಸಿಬಿಎಸ್‌ಇ)ಶಾಲೆಯ ನಿರ್ದೇಶಕ ಸೋಮಶೇಖರ, ಪ್ರಾಚಾರ್ಯ ಉಮೇಶ್, ಖಜಾಂಚಿ ನವೀನ್, ಕೊಂಡಜ್ಜಿ ಬಸಪ್ಪ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಟಿ.ಎಂ. ರವೀಂದ್ರ ಸ್ವಾಮಿ, ಗೈಡ್ ಕ್ಯಾಪ್ಟನ್ ಅನಿತಾ, ರಜನಿ ಹಾಗೂ ವಿದ್ಯಾರ್ಥಿಗಳು ಇದ್ದರು.
ನಿಯಮಗಳ ಬಗ್ಗೆ ಮಕ್ಕಳಿಗೆ ಪ್ರಶ್ನೆ ಕೇಳಿ ಅವರಿಗೆ ಪ್ರಮಾಣ ಪತ್ರ ನೀಡಿದರು.
Read also : Davanagere | ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣಕ್ಕೆ ಪೋಷಕರ ಪಾತ್ರ ಮುಖ್ಯ : ಸಿಸ್ಟರ್ ವೆನಿಸಾ