ದಾವಣಗೆರೆ (Davanagere): ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ದಾವಣಗೆರೆಯ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘಟನೆಗಳ ಕಾರ್ಯಕರ್ತರು, ಮುಖಂಡರು “ಭೀಮಾ ಕೋರೆಗಾಂವ್” ವಿಜಯೋತ್ಸವವನ್ನು ಆಚರಿಸಿದರು.
ದಲಿತ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವದ ನೆನಪಿಗಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಲವಾರು ದಲಿತ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಭಾಗವಹಿಸಿ ಡಾ.ಅಂಬೇಡ್ಕರ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಮಲ್ಲೇಶ್ ಮಾತನಾಡಿ, ಭೀಮ ಕೋರೆಗಾಂವ್ ವಿಜಯೋತ್ಸವವು ಐತಿಹಾಸಿಕ ಘಟನೆಯಾಗಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಲಂಡನ್‍ನÀಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಇದರ ಬಗ್ಗೆ ತಿಳಿದು ಸಂಶೋಧನೆ ನಡೆಸಿ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದ್ದಾರೆ ಎಂದರು.
30,000ದಷ್ಟು ಸೈನಿಕರಿದ್ದ ಪೇಶ್ವೆಗಳನ್ನು 500 ಸೈನಿಕರಿದ್ದ ಮಹರ್ ಸೈನಿಕರು ಹೋರಾಟ ನಡೆಸಿ ಸೋಲಿಸಿದ ಮಹತ್ವದ ದಿನವಿದು. ಈ ದಿನದಂದು ಹಲವಾರು ಜನ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸುತ್ತಾರೆ. ಈ ದಿನ ಮರಾಠ ಪೇಶ್ವೆಗಳನ್ನು ಸೋಲಿಸಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಮಹರ್ ಸೈನಿಕರ ಸಹಾಯ ಪಡೆದು ಪೇಶ್ವೆಗಳನ್ನು ಸೋಲಿಸಿ ಬ್ರಿಟಿμï ಆಡಳಿತಕ್ಕೆ ಇದು ಮುನ್ನುಡಿ ಪಡೆಯಿತು. ಇದು ದಲಿತರನ್ನು ಅವಮಾನಿಸಿದ್ದ ಪೇಶ್ವೆಗಳ ವಿರುದ್ಧ ದಲಿತರು ಆತ್ಮ ಗೌರವ, ಹಕ್ಕುಗಳಿಗಾಗಿ ಹೋರಾಡಿದ ಐತಿಹಾಸಿಕ ದಿನ” ಎಂದು ವಿವರಿಸಿದರು.
ಸಂಭ್ರಮಾಚರಣೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಹೆಗ್ಗೆರೆ ರಂಗಪ್ಪ, ಅವರಗೆರೆ ಎಚ್.ಜಿ. ಉಮೇಶ್, ಜಿಗಳಿ ಹಾಲೇಶ್, ಪುರದಾಳ್ ಪರಮೇಶ್, ಎಲ್. ಜಯಣ್ಣ, ಬಾತಿ ಸಿದ್ದೇಶ್, ಶಶಿಧರ್ ಶಿರಮಗೊಂಡನಹಳ್ಳಿ, ಮಲ್ಲೇಶ್ ಚಿಕ್ಕನಹಳ್ಳಿ, ಐರಣಿ ಚಂದ್ರು, ನಿಟುವಳ್ಳಿ ಉಮೇಶ್, ನಿಂಗರಾಜ್ ಶಿರಮಗೊಂಡನಹಳ್ಳಿ, ನಾಗರಾಜ್ ಚಿಕ್ಕನಹಳ್ಳಿ, ರಾಮನಗರ ನಿಂಗಪ್ಪ, ತಿಪ್ಪೇರುದ್ರಪ್ಪ, ನಾಗೇಶ್, ಮೇಗಳಗೆರೆ ಮಂಜು, ಎಚ್.ಸಿ. ಮಲ್ಲಪ್ಪ, ಬಿ. ಹನುಮಂತಪ್ಪ, ಕಾರ್ಯಕರ್ತರು ಭಾಗವಹಿಸಿದ್ದರು.
Read also : Davanagere | ಕಾರು ಢಿಕ್ಕಿ ಯುವಕ ಸಾವು