ದಾವಣಗೆರೆ (Davanagere) : ಪಿ.ಟಿ.ಸಿ.ಎಲ್. ಕಾಯ್ದೆಗೆ ಸೂಕ್ತ ತಿದ್ದುಪಡಿ, ಸರ್ಕಾರಿ ಶಾಲಾ ಸಬಲೀಕರಣ ಸಮಿತಿ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರಜಾಪರಿವರ್ತನ ವೇದಿಕೆ ಜಿಲ್ಲಾ ಘಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.
ಸರ್ಕಾರಿ ಆಸ್ಪತ್ರೆಗಳ ದುರಸ್ತಿ ಮತ್ತು ಮೂಲಭೂತ ಸೌಲಭ್ಯ ಕಲ್ಪಿಸುವುದು, ಶಾಲಾ ಆವರಣದಲ್ಲಿ ಮಾದಕ ದ್ರವ್ಯಗಳ ನಿಷೇಧ, ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ನಿಷೇಧದ ಬಗ್ಗೆ ಸೂಕ್ತ ಕ್ರಮ, ಪ್ರಕೃತಿ ವಿಕೋಪ ಯೋಜನೆಯಲ್ಲಿ ನೀಡಲಾದ ಮನೆಗಳಿಗೆ ಶೀಘ್ರ ಅನುದಾನ ಬಿಡುಗಡೆ ಬಗ್ಗೆ ಹಾಗೂ ಹಲವು ಹಕ್ಕೊತ್ತಾಯಗಳನ್ನು ಈಡೇರಿಸಲು ಒತ್ತಾಯಿಸಿದರು.
ಪ.ಜಾತಿ ಮತ್ತು ಪಂಗಡಗಳ ಜಮೀನು ಮಾರಾಟ ನಿಷೇಧ ಕಾಯ್ದೆಗೆ ಪ.ಜಾತಿ ಮತ್ತು ಪ.ವರ್ಗದ ಮೂಲ ಮಂಜೂರಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ತಿದ್ದುಪಡಿ ತಂದಿರುವುದು ಸರಿ ಅಷ್ಟೇ, ಆದರೆ ಇದರ ಕ್ರಮಬದ್ಧತೆ ಯನ್ನು ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯಗಳನ್ನೊಳಗೊಂಡತೆ ಎಲ್ಲಾ ಅಧೀನ ನ್ಯಾಯಾಲಯಗಳು ಮೂಲಮಂಜೂರಿದಾರರು ಅವರ ವಾರಸುದಾರರ ಪರವಾಗಿ ಆದೇಶ ಮಾಡದೆ ಎಲ್ಲಾ ಪ್ರಕರಣಗಳಲ್ಲಿಯೂ ಸಹ ಜಮೀನು ಖರೀದಿದಾರರ ಪರವಾಗಿ ಆದೇಶ ಮಾಡುತ್ತಿವೆ.
ಇದರಿಂದ ಕಾಯ್ದೆಯ ಹಿತಾಶಕ್ತಿಗೆ ಧಕ್ಕೆ ಉಂಟಾಗುತ್ತಿರುವುದಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗಗಳು ಜಮೀನನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ, ಆದುದರಿಂದ ರಾಜ್ಯ ಸರ್ಕಾರ ಪಿಟಿಸಿಎಲ್ ಕಾಯ್ದೆಯ ಬಗ್ಗೆ ಮತ್ತೊಮ್ಮೆ ಸೂಕ್ತ ಗಮನ ಹರಿಸಿ, ಕಾನೂನು ತಜ್ಞರ ಜೊತೆ ಸಮಗ್ರವಾಗಿ ಚರ್ಚಿಸಿ ಜಮೀನನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಅನುಕೂಲಕರವಾಗುವ ರೀತಿಯಲ್ಲಿ ಸೂಕ್ತ ಕಾನೂನು ತಿದ್ದುಪಡಿ ಕೈಗೊಳ್ಳುವಂತೆ ಒತ್ತಾಯಿಸಿದರು.
2016 ರಲ್ಲಿ ರಾಜ್ಯ ಸರ್ಕಾರ ಕಾರ್ಯ ಶಾಲೆಗಳನ್ನ ಸಬಲೀಕರಣ ಗೊಳಿಸುವ ಉದ್ದೇಶದಿಂದ ಅಂದಿನ ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿದ್ದಂತಹ ಜಿ,ಎಸ್, ಸಿದ್ದರಾಮಯ್ಯ ರವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನ ರಚಿಸಿದ್ದು , ಸಮಿತಿಯು ಸಮಗ್ರ ಅಧ್ಯಾಯನ ನಡೆಸಿ 21 ಶಿಫಾರಸ್ಸುಗಳೊಂದಿಗೆ 2017 ರಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿರುತ್ತದೆ, ಸರ್ಕಾರ ತಕ್ಷಣ ಈ ಬಗ್ಗೆ ಸೂಕ್ತ ಗಮನ ಹರಿಸಿ ವರದಿಯನ್ನ ಸದನ ಸಮಿತಿಯಲ್ಲಿ ಮಂಡನೆ ಮಾಡಿ ಎಲ್ಲಾ 21 ಅಂಶಗಳನ್ನು ಸಹ ಜಾರಿಗೆ ತರಲು ಕ್ರಮ ವಹಿಸುವಂತೆ ಒತ್ತಾಯಿಸಿದೆ .
ಸರ್ಕಾರಿ ಆಸ್ಪತ್ರೆಗಳಲ್ಲಿ ದಲಿತರು , ಹಿಂದುಳಿದವರು ಅಲ್ಪಸಂಖ್ಯಾತರು ಹಾಗೂ ಇನ್ನಿತರೆ ಆರ್ಥಿಕವಾಗಿ ಹಿಂದುಳಿದಿರುವ ಎಲ್ಲಾ ಸಮುದಾಯದ ಬಡವರು ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪಡೆಯುತ್ತಿದ್ದು ಕೆಲವು ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳ ಕೊರತೆ ಇದ್ದರೆ ಮತ್ತೆ ಕೆಲವು ಆಸ್ಪತ್ರೆಗಳಲ್ಲಿ ಮೂಲಸೌಕರ್ಯದ ಕೊರತೆ ಇದೆ , ಸಿಬ್ಬಂದಿ ಹಾಗೂ ಮೂಲ ಸೌಕರ್ಯ ಇರುವ ಆಸ್ಪತ್ರೆಗಳಲ್ಲಿ ವೈದ್ಯರು ಉತ್ತಮ ರೀತಿಯ ಸೇವೆ ಸಲ್ಲಿಸುತ್ತಿಲ್ಲ ಇನ್ನು ತಾಲೂಕ್ ಕೇಂದ್ರಗಳಲ್ಲಿ ಹೆರಿಗೆ ಹಾಗೂ ಆಪರೇಷನ್ ಇಂತಹ ಚಿಕಿತ್ಸೆಗೆ ಇಂತಿಷ್ಟು ಎಂದು ದರ ನಿಗದಿಗೊಳಿಸಲಾಗಿದೆ ಪ್ರತಿಯೊಬ್ಬರ ಆರೋಗ್ಯ ಕಾಪಾಡುವುದು ಸರ್ಕಾರದ ಅಧ್ಯ ಕರ್ತವ್ಯವಾಗಿದ್ದು ಸರ್ಕಾರ, ಎಲ್ಲಾ ಸರ್ಕಾರಿ ಆಸ್ಪತ್ರೆಗಳನ್ನ ಸುಧಾರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶಾಲಾ ಆವರಣಗಳಲ್ಲಿ ಮಾದಕ ದ್ರವ್ಯಗಳ ನಿಷೇಧ ಕಾಯ್ದೆ ಜಾರಿ ಇದ್ದರೂ ಸಹ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿಲ್ಲ ಯಾವುದೇ ನಿಬರ್ಂಧವಿಲ್ಲದೆ ಅಕ್ರಮವಾಗಿ ಮಾದಕ ದ್ರವ್ಯ ಮಾರಾಟ ದಂದೆ ಯಥೇಚ್ಛವಾಗಿ ನಡೆಯುತ್ತಿದೆ , ಇದರಿಂದ ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಸಮಾಜ ಮತ್ತು ಕುಟುಂಬಕ್ಕೆ ಮಾರಕವಾಗುತ್ತಿದ್ದಾರೆ, ಆದುದರಿಂದ ಶಾಲಾ ಕಾಲೇಜುಗಳ ಆವರಣಗಳಲ್ಲಿ ಮಾದಕ ದ್ರವ್ಯಗಳ ನಿಷೇಧ ವನ್ನು ಕಟ್ಟುನಿಟ್ಟಾಗಿ ಮಾಡಬೇಕು.
ಜಿಲ್ಲಾಧ್ಯಂತ ಪ್ರತಿಯೊಂದು ಹಳ್ಳಿಗಳಲ್ಲಿ ದೇವಸ್ಥಾನಗಳ ಅಭಿವೃದ್ಧಿಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳಿಗೆ ಅಕ್ರಮವಾಗಿ ಮಧ್ಯ ಮಾರಾಟಕ್ಕೆ ಹರಾಜು ಹಾಕಲಾಗುತ್ತಿದೆ, ಇದಕ್ಕೆ ಸ್ಥಳೀಯ ಅಬಕಾರಿ ಅಧಿಕಾರಿಗಳು ಪರೋಕ್ಷವಾಗಿ ಸಹಕರಿಸುತ್ತಿದ್ದು ಇದರಿಂದ ಗ್ರಾಮೀಣ ಭಾಗದ ಅಪ್ರಪ್ತ ಯುವಕರು ಸಹ ಮಧ್ಯವೇಶನಗಳಾಗುತ್ತಿದ್ದಾರೆ ಆದುದರಿಂದ ಸರ್ಕಾರ ಇಂತಹ ಅಕ್ರಮ ಮಧ್ಯ ಮಾರಾಟ ಚಟುವಟಿಕೆಗಳನ್ನು ನಿಲ್ಲಿಸಿ ಇದರಲ್ಲಿ ಭಾಗಿಯಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.
ಪ್ರಕೃತಿ ವಿಕೋಪಕ್ಕೆ ಒಳಗಾಗಿ ಮನೆಗಳನ್ನು ಕಳೆದುಕೊಂಡ ನಿರ್ಗತಿಕರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ವಸತಿ ಸೌಲಭ್ಯ ಕಲ್ಪಿಸಿ ಕೊಟ್ಟಿದ್ದು ಮನೆ ಪೂರ್ಣಗೊಂಡಿದ್ದರು ಸಹ ಇದುವರೆಗೂ ಅನುದಾನ ಬಿಡುಗಡೆಯಾಗಿರುವುದಿಲ್ಲ , ಇದರಿಂದ ಫಲಾನುಭವಿಗಳಿಗೆ ಅನಾನುಕೂಲವಾಗುತ್ತಿದ್ದು ತಕ್ಷಣ ಸರ್ಕಾರ ಬಾಕಿ ಇರುವ ಎಲ್ಲಾ ಅನುದಾನವನ್ನು ಬಿಡುಗಡೆಗೊಳಿಸಬೇಕು ಪ್ರಜಾ ಪರಿವರ್ತನಾ ವೇದಿಕೆ ಕರ್ನಾಟಕ ದಾವಣಗೆರೆ ಜಿಲ್ಲಾ ಘಟಕ ಒತ್ತಾಯಿಸುತ್ತಿದೆ.
ರಾಜ್ಯ ಕಾರ್ಯಾಧ್ಯಕ್ಷ ಎ.ಡಿ.ಈಶ್ವರಪ್ಪ, ಜಿಲ್ಲಾಧ್ಯಕ್ಷ ಹೆಚ್.ಕೆ.ಕೃಷ್ಣಪ್ಪ ಅರಕೆರೆ, ಜಿಲ್ಲಾ ಉಪಾಧ್ಯಕ್ಷರಾದ ಲಿಂಗರಾಜು ಎಂ ಗಾಂಧಿನಗರ, ಧನಿಕ ತಿಮ್ಮೇನಹಳ್ಳಿ, ಜಿಲ್ಲಾ ಕಾನೂನು ಸಲಹೆಗಾರ ಮಹಮ್ಮದ್ ಹನೀಫ್ ಕೆ., ಹೊನ್ನಾಳ್ಳಿ ಅಧ್ಯಕ್ಷ ಕೆ.ಓ,ಹನುಮಂತಪ್ಪ, ಜಿಲ್ಲಾ ಕಾರ್ಯದರ್ಶಿ ರಾಕೇಶ್ ಕಕ್ಕರಗೊಳ್ಳ ಸೇರಿದಂತೆ ಇತರರು ಇದ್ದರು.
Read also : ಬಿಜೆಪಿ ಕೊಳಕು ಮನಸ್ಥಿತಿಗೆ ಜನತೆ ತಕ್ಕ ಪಾಠ ಕಲಿಸುವುದು ಖಚಿತ: ಬಿ. ಎನ್. ವಿನಾಯಕ್