ದಾವಣಗೆರೆ: ಇಲ್ಲಿನ ಮಹಾನಗರ ಪಾಲಿಕೆಯ ಆವರಗೊಳ್ಳದಲ್ಲಿನ ಘನತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿ ಘಟಕದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ವಿಷಪೂರಿತ ಹೊಗೆ ಗ್ರಾಮವನ್ನು ಆವರಿಸಿದೆ.
ಕಳೆದ ಕೆಲವು ದಿನಗಳ ಹಿಂದೆ ಇದೇ ರೀತಿಯಾಗಿ ಬಿದ್ದಿದ್ದ ಬೆಂಕಿ ನಂದಿಸಲು ತಿಂಗಳ ಕಾಲ ಹಿಡಿಯಿತು. ಇದರಿಂದಾಗಿ ಗ್ರಾಮಸ್ಥರು ತೀವ್ರ ಸಮಸ್ಯೆ ಅನುಭವಿಸಿದ್ದರು. ಈಗ ಮತ್ತೆ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿದ್ದಾರೆ.
ಈ ಘಟನೆಯಿಂದ ಸಮೀಫದಲ್ಲಿನ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ಘನತ್ಯಾಜ್ಯಕ್ಕೆ ಬೆಂಕಿ ಬಿದ್ದ ಹಿನ್ನಲೆಯಲ್ಲಿ ವಿಷಪೂರಿತ ಹೊಗೆ ಗ್ರಾಮವನ್ನು ಆವರಿಸುತ್ತದೆ ಎಂಬ ಆತಂಕದ ಕಾರಣದಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಘಟಕದಲ್ಲಿ ಬೃಹತ್ ರಾಶಿಯನ್ನು ಗುಡ್ಡದಂತೆ ಶೇಖರಿಸಲಾಗಿದ್ದು, ಇಂಥ ಅನಾಹುತ ನಡೆಯಲು ಕಾರಣವಾಗಿದೆ ಎಂದು ಗ್ರಾಮಸ್ಥರ ಆರೋಪವಿದೆ. ಈ ವಿಚಾರ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದ್ದರೂ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದೂ ಗ್ರಾಮಸ್ಥರು ದೂರಿದ್ದಾರೆ.
ಅವರಗೊಳ್ಳ ಗ್ರಾಮಕ್ಕೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಆಯುಕ್ತೆ ರೇಣುಕಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು