ಹರಿಹರ (Harihara): ತಾಲ್ಲೂಕಿನ ತುಂಗಭದ್ರಾ ನದಿ ಹಾಗೂ ಸೂಳೆಕೆರೆ ಹಳ್ಳದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಾ ಅಪಾಯಕಾರಿ ಗುಂಡಿಗಳನ್ನು ಸೃಷ್ಟಿsಸುವ ಜೊತೆಗೆ ಸರ್ಕಾರಕ್ಕೆ ಕೋಟ್ಯಾಂತರ ರೂ.ಗಳ ರಾಜಧನ ನಷ್ಟ ಉಂಟು ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಘಟಕ ತಹಶೀಲ್ದಾರ್ ಗುರು ಬಸವರಾಜ್‌ರಿಗೆ ಮಂಗಳವಾರ ಮನವಿ ನೀಡಿದರು.
ಕದಸಂಸತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಧೂಳೆಹೊಳೆ, ಮಳಲಹಳ್ಳಿ, ಪಾಳ್ಯ, ಹರ್ಲಾಪುರ, ಗುತ್ತೂರು, ಸಾರಥಿ, ಚಿಕ್ಕಬಿದರಿ, ಬಿಳಸನೂರು, ರಾಜನಹಳ್ಳಿ, ಹಳಸಬಾಳು ಹಾಗೂ ಇತರೆ ಗ್ರಾಮಗಳಲ್ಲಿನ ತುಂಗಭದ್ರ ನದಿಯಲ್ಲಿ ಹಾಗೂ ಹನಗವಾಡಿ ಗ್ರಾಮದ ಇಂಡಸ್ಟಿçಯಲ್ ಏರಿಯಾ ಬಳಿ ಮತ್ತು ಬೆಳ್ಳೂಡಿ ಗ್ರಾಮ ಬಳಿಯ ಸೂಳೆಕೆರೆ ಹಳ್ಳದದಲ್ಲಿ ಕಳೆದ ಹತ್ತಾರು ದಿನಗಳಿಂದ ರಾತ್ರಿ ಸಮಯದಲ್ಲಿ ಹಲವರು ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು.
ಜೆಸಿಬಿ, ಇಟಾಚಿಯಂತಹ ಬೃಹತ್ ಯಂತ್ರಗಳಿAದ ನದಿ ಮತ್ತು ಹಳ್ಳದ ದಡದಲ್ಲಿ ಮತ್ತು ಒಡಲಲ್ಲಿ ಮರಳನ್ನು ಎತ್ತಿ ಬೃಹತ್ ಲಾರಿಗಳಲ್ಲಿ ರಾತ್ರೋ ರಾತ್ರಿ ಸಾಗಿಸುತ್ತಿದ್ದಾರೆ. ತಾಲ್ಲೂಕಿನ ನದಿ ಹಾಗೂ ಹಳ್ಳದ ಯಾವ ಬ್ಲಾಕ್‌ಗಳೂ ಮರಳುಗಾರಿಕೆಗೆ ಟೆಂಡರ್ ಗುತ್ತಿಗೆ ನೀಡಿಲ್ಲದಿದ್ದರೂ ಮರಳನ್ನು ಸಾಗಿಸಲಾಗುತ್ತಿದೆ ಎಂದು ಆರೋಪಿಸಿದರು.
ಹೀಗೆ ಅಕ್ರಮ, ಅವ್ಯಾಹತ ಹಾಗೂ ಅವೈಜ್ಞಾನಿಕವಾಗಿ ಮರಳು ಗಣಿಗಾರಿಕೆ ನಡೆಸುತ್ತಿರುವುದರಿಂದ ನದಿ, ಹಳ್ಳದ ದಡ ಮತ್ತು ಒಡಲಲ್ಲಿ ಹತ್ತಾರು ಮೀಟರ್‌ಗಳವರೆಗೆ ಗುಂಡಿಗಳು ಸೃಷ್ಟಿಯಾಗುತ್ತಿವೆ. ಮಳೆಗಾಲದಲ್ಲಿ ಇಂತಹ ಗುಂಡಿಗಳಲ್ಲಿ ನೀರು ಹರಿಯುವಾಗ ಗುಂಡಿಗಳು ಅರಿವಿಗೆ ಬಾರದೆ ಇತ್ತೀಚಿಗೆ ತಾಲ್ಲೂಕಿನ ಗುತ್ತೂರು ಗ್ರಾಮದಲ್ಲಿ ಚಿಕ್ಕಪ್ಪ ಮತ್ತು ಅಣ್ಣನ ಮಗ ನೀರಲ್ಲಿ ಮುಳುಗಿ ಮರಣ ಹೊಂದಿದ ದುರ್ಘಟನೆ ನಮ್ಮ ಕಣ್ಣ ಮುಂದಿದೆ ಎಂದು ಹೇಳಿದ್ದಾರೆ.
ಈ ಗುಂಡಿಗಳಲ್ಲಿ ಕಳೆದ ನಾಲ್ಕು ವರ್ಷಗಳಿಂದ ೨೫ಕ್ಕೂ ಹೆಚ್ಚು ಜನರು ಹಾಗೂ ೫೦ಕ್ಕೂ ಹೆಚ್ಚು ದನಕರುಗಳು ಸಾವನ್ನಪ್ಪಿದ್ದಾರೆ.ಆದರೆ ಇದರಲ್ಲಿ ಬಹುತೇಕ ಪ್ರಕರಣಗಳು ದಾಖಲಾಗಿಲ್ಲ. ಅಕ್ರಮ, ಅವೈಜ್ಞಾನಿಕ ಮರಳು ಗಣಿಗಾರಿಕೆ ಮಾಡುತ್ತಿರುವುದರಿಂದ ಜಲಚರ ಪ್ರಾಣಿಗಳ ಆವಾಸಕ್ಕೂ ದೊಡ್ಡ ಧಕ್ಕೆ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಕ್ರಮ, ಅವೈಜ್ಞಾನಿಕ ಮರಳು ಗಣಿಗಾರಿಕೆಯ ಇನ್ನೊಂದು ಮಗ್ಗಲು ಏನೆಂದರೆ ಸರ್ಕಾರದ ಖಜಾನೆಗೆ ಸೇರಬೇಕಿದ್ದ ಕೋಟ್ಯಾಂತರ ರೂ.ರಾಜಧನ ಕೈ ತಪ್ಪಿ ಹೋಗಿದೆ. ಮುಂಬರುವ ಮಾರ್ಚ್ ತಿಂಗಳಲ್ಲಿ ತಾಲ್ಲೂಕಿನ ಏಳೆಂಟು ಮರಳಿನ ಬ್ಲಾಕ್‌ಗಳ ಟೆಂಡರ್ ನೀಡುವ ಪ್ರಕ್ರಿಯೆ ನಡೆಯಲಿದ್ದು ಟೆಂಡರ್ ಪಡೆದವರಿಗೆ ನಿರೀಕ್ಷಕಿತ ಮರಳು ಸಿಗದೆ ನಷ್ಟವಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಅಕ್ರಮ ಮರಳು ಸಾಗಣೆ ಮಾಡುವ ಬೃಹತ್ ಲಾರಿಗಳು ಸಾಗುವ ಜಾಗದಲ್ಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಪೈಪ್ ಲೈನ್‌ಗೆಧಕ್ಕೆ ಮಾಡುತ್ತಿದ್ದುಕುಡಿಯುವ ನೀರುಕಲುಷಿತವಾಗುತ್ತಿದೆ, ಗ್ರಾಮಸ್ಥರುಕಲುಷಿತ ನೀರನ್ನೆ ಸೇವಿಸುತ್ತಿದ್ದಾರೆ. ಇಷ್ಟೆಲ್ಲಾ ರಾದ್ಧಾಂತ ಸೃಷ್ಟಿಸುತ್ತಿರುವ ತಾಲ್ಲೂಕಿನ ಅಕ್ರಮ ಮರಳುಗಾರಿಕೆಯನ್ನು ತಕ್ಷಣವೇ ತಡೆದು ಆರೋಪಿತರ ವಿರುದ್ಧಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಡಾರನಾಯಕನಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಪರಶುರಾಮ, ಭಾನುವಳ್ಳಿ ಚೌಡಪ್ಪಸಿ., ಕಡ್ಲೆಗೊಂದಿ ತಿಮ್ಮಣ್ಣ, ಶಿವಪ್ಪ, ನಿಜಗುಣ, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕ ಅಧ್ಯಕ್ಷ ಎಂ.ಇಲಿಯಾಸ್ ಅಹ್ಮದ್ ಇದ್ದರು.
Read also : Recruitment rally | ನೇಮಕಾತಿ ರ‍್ಯಾಲಿ