ದಾವಣಗೆರೆ (Davanagere): ಯುವತಿ ಪ್ರೀತಿಸುವಂತೆ ಪೀಡಿಸಿ, ಅವಾಚ್ಯವಾಗಿ ಬೈದು, ಪ್ರಾಣ ಬೆದರಿಕೆ ಹಾಕಿದ ಪ್ರಕರಣದ ಆರೋಪಿಗೆ 3 ತಿಂಗಳು ಕಾರಾಗೃಹ ಶಿಕ್ಷೆ ಹಾಗೂ 15 ಸಾವಿರ ರೂ ದಂಡ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ.
19.06.2021 ರಂದು ರಾತ್ರಿ 8-00 ಗಂಟೆಗೆ ಯುವತಿ ಠಾಣೆಗೆ ಹಾಜರಾಗಿ ನಿಂದನೆ, ಕೊಲೆ ಯತ್ನ ಹಾಗೂ ನಿಂದನೆ ಮಾಡಿರುವ ಯುವಕನ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ವಿದ್ಯಾನಗರ ಠಾಣೆಯಲ್ಲಿ ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪಿಎಸ್‌ಐ ರೂಪ ತೆಂಬದ್ ತನಿಖೆ ನಡೆಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಯತ್ನ ಹಾಗೂ ನಿಂದನೆ ದೃಢವಾಗಿರುವ ಕುರಿತು ಆರೋಪಿತನ ವಿರುದ್ದ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ .ಎನ್ ಹೆಗಡೆ ಅವರು ಆರೋಪಿ ನವೀನ್ ಈತನ ಮೇಲೆ ಆರೋಪ ಸಾಬೀತಾಗಿದ್ದರಿಂದ 16-01-2025 ರಂದು ಆರೋಪಿಗೆ 03 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಮತ್ತು 15,000/- ದಂಡ ವಿಧಿಸಿ ಆದೇಶಿದ್ದಾರೆ.
ಆರೋಪಿತನು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದುದ್ದರಿಂದ ಬಂಧನದ ಅವಧಿಯನ್ನು ಪರಿಗಣಿಸಿ ಶಿಕ್ಷಾ ಅವಧಿಯನ್ನು ಸೆಟ್ ಆಪ್ ಮಾಡಲಾಗಿರುತ್ತದೆ ಹಾಗೂ ಸದರಿ ಆರೋಪಿತನಿಂದ ವಸೂಲುಮಾಡಿದ ದಂಡದ ಮೊತ್ತದಲ್ಲಿ 10,000/-ರೂಗಳನ್ನು ಪ್ರಕರಣದ ಸಂತ್ರಸ್ಥೆಗೆ ನೀಡುವಂತೆ ಹಾಗೂ ಉಳಿದ 5,000/-ರೂಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿದ್ದಾರೆ. ಸರ್ಕಾರಿ ವಕೀಲರಾದ ಮಂಜುನಾಥ್ .ಬಿ ರವರು ನ್ಯಾಯ ಮಂಡನೆ ಮಾಡಿದ್ದಾರೆ.
ಪ್ರಕರಣದಲ್ಲಿ ತನಿಖೆ ಕೈಗೊಂಡು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ ತನಿಖಾಧಿಕಾರಿ ರೂಪ ತೆಂಬದ್, ಸಿಬ್ಬಂದಿಗಳನ್ನು ಹಾಗೂ ನ್ಯಾಯಾ ಮಂಡನೆ ಮಾಡಿದ ಸರ್ಕಾರಿ ವಕೀಲರಾದ ಮಂಜುನಾಥ್. ಬಿ ರವರನ್ನು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಶ್ಲಾಘೀಸಿದ್ದಾರೆ.
Read also : ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವೀಲಿಂಗ್ : ಇಬ್ಬರ ಬಂಧನ