ದಾವಣಗೆರೆ (Davanagere) : ನಗರದಲ್ಲಿ ವಿಶ್ವ ಹಿಂದೂ ಪರಿಷತ್ತು ಸಾರ್ವಜನಿಕ ವಿಜದಶಮಿ ಮಹೋತ್ಸವ ಸಮಿತಿ ವತಿಯಿಂದ ನಗರದ ವೆಂಕಟೇಶ್ವರ ವೃತ್ತದಿಂದ ವಿಜಯದಶಮಿ ಶೋಭಾಯಾತ್ರೆ ಮೆರವಣಿಗೆ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಕಾನೂನು & ಸುವ್ಯವಸ್ಥೆ ಕಾಪಾಡುವ ಹಾಗೂ ಸಾರ್ವಜನಿಕರಲ್ಲಿ ಭಯಮುಕ್ತ ವಾತಾವರಣ ನಿರ್ಮಾಣ ದೃಷ್ಠಿಯಿಂದ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ‘ಪೊಲೀಸ್ ಪಥ ಸಂಚಲನ’ ನಡೆಯಿತು.
ಪೊಲೀಸ್ ಪಥ ಸಂಚಲನವು ನಗರದ ವೆಂಕಟೇಶ್ವರ ವೃತ್ತ ದಿಂದ ಆರಂಭವಾಗಿ ಅಣೆಕೊಂಡ ರಸ್ತೆ ಮಾರ್ಗವಾಗಿ ಬಂಬೂ ಬಜಾರ್ ರಸ್ತೆ, ಗಣೇಶ ಟೆಂಪಲ್ , ಮಾರ್ಗವಾಗಿ ಹಾಸಭಾವಿ ವೃತ್ತ, ಹೊಂಡದ ವೃತ್ತ ಮೂಲಕ ಅರುಣ ವೃತ್ತದಲ್ಲಿ ಮುಕ್ತಾಯವಾಯಿತು.
ವಿಜಯದಶಮಿ ಶೋಭಾಯಾತ್ರೆ ಪಾಲಿಸಬೇಕಾದ ಅಂಶಗಳು:
- ವಿಜಯದಶಮಿ ಮೆರವಣಿಗೆಯನ್ನು ಈಗಾಗಲೇ ನಿಗಧಿಪಡಿಸಿದ ಮಾರ್ಗಗಳಲ್ಲಿಯೇ ಸಾಗುವುದು ಹಾಗೂ ಯಾವುದೇ ಕಾರಣಕ್ಕೂ ಮಾರ್ಗ ಬದಲಾವಣೆಗೆ ಅವಕಾಶವಿಲ್ಲ.
- ವಿಜಯದಶಮಿ ಮೆರವಣಿಗೆಯ ಸಮಯದಲ್ಲಿ ಯಾವುದೇ ಜೀವ ಹಾನಿಯಾಗದಂತೆ ಸುರಕ್ಷತಾ ಕ್ರಮ ಕೈಗೊಳ್ಳುವುದು
- ವಿಜಯದಶಮಿ ಮೆರವಣಿಗೆ ಸಂಧರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆ ತರುವಂತಹವರ ಮತ್ತು ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್ಚರಿಸಿದ್ದಾರೆ.
- ಎಎಸ್ಪಿ ವಿಜಯಕುಮಾರ ಎಂ ಸಂತೋಷ, ಮಂಜುನಾಥ ಜಿ. ರವರು, ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಡಿಎಆರ್ ಡಿವೈಎಸ್ಪಿ ಪಿಬಿ ಪ್ರಕಾಶ್, ಪೊಲೀಸ್ ನಿರೀಕ್ಷಕರಾದ ಗುರುಬಸವರಾಜ, ನೆಲವಾಗಲು ಮಂಜುನಾಥ, ಅಶ್ವಿನ್ ಕುಮಾರ, ಸುನೀಲ್ ಕುಮಾರ್, ನೂರ್ ಅಹಮ್ಮದ್, ಪ್ರಭಾವತಿ, ಮಲ್ಲಮ್ಮ ಚೌಬೆ, RPIi ಸೋಮಶೇಖರ್ ಸೇರಿದಂತೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.