ದಾವಣಗೆರೆ (Davanagere): ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ಪ್ರಧಾನವಾಗಿ ಕಲಿಕೆಗೆ ಮಾತ್ರ ತೊಡಗಿಸಿಕೊಂಡು ಎಲ್ಲಾ ರೀತಿಯ ಕಲಿಕೇತರ ಕೆಲಸಗಳಿಂದ ಅವರನ್ನು ಮುಕ್ತಗೊಳಿಸಲು ಒತ್ತಾಯಿಸಿ ಪ್ರಜಾ ಪರಿವರ್ತನಾ ವೇದಿಕೆ ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಉಚಿತ ಮತ್ತು ಕಡ್ಡಾಯಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009 ಪ್ರಕರಣ 27 ರ ಅನ್ವಯ ದಶವಾರ್ಷಿಕ ಜನಗಣತಿ, ವಿಪತ್ತು ಪರಿಹಾರ ಕಾರ್ಯಗಳು ಅಥವಾ ಸಂದರ್ಭಾನುಸಾರ, ಸ್ಥಳೀಯ ಪ್ರಾಧಿಕಾರ ಅಥವಾ ರಾಜ್ಯ ವಿಧಾನ ಮಂಡಲ ಅಥವಾ ಸಂಸತ್ತು ಚುನಾವಣೆಗಳಿಗೆ ಸಂಬAಧಿಸಿದ ಕರ್ತವ್ಯಗಳನ್ನು ಹೊರತುಪಡಿಸಿ, ಉಳಿದ ಯಾವುದೇ ಶಿಕ್ಷಣೇತರ ಉದ್ದೇಶಗಳಿಗೆ ಶಿಕ್ಷಕರನ್ನು ನಿಯೋಜಿಸಬಾರದು ಎಂದು ಹೇಳುತ್ತದೆ. ಆದರೆ, ಶಿಕ್ಷಕರ ಕಾರ್ಯಭಾರದಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಕೂಡಲೇ ಶಿಕ್ಷಕರಿಗೆ ಕಾರ್ಯಾಭಾರ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಅಕ್ಷರ ದಾಸೋಹ ಕಾರ್ಯಕ್ರಮ ಹಾಗೂ ದಾಖಲೆ ನಿರ್ವಹಣೆ, ಕ್ಷೀರಭಾಗ್ಯ ಕಾರ್ಯಕ್ರಮ ಹಾಗೂ ದಾಖಲೆ ನಿರ್ವಹಣೆ, ಆಧಾರ್ ನೋಂದಣಿ ಕಾರ್ಯಕ್ರಮ ಹಾಗೂ ದಾಖಲೆ ನಿರ್ವಹಣೆ, ಮಾತ್ರೆ ವಿತರಣೆ ಕಾರ್ಯಕ್ರಮ ಹಾಗೂ ದಾಖಲೆ ನಿರ್ವಹಣೆ, ಶೂ, ಬೈಸಿಕಲ್, ಸಮವಸ್ತç, ಪಠ್ಯಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ ಹಾಗೂ ದಾಖಲೆ ನಿರ್ವಹಣೆ, ಬೋಧಕೇತರ ಸಿಬ್ಬಂದಿ ಇಲ್ಲದಿರುವುದರಿಂದ ಎಲ್ಲಾ ಶಾಲಾ ದಾಖಲೆಗಳ ನಿರ್ವಹಣೆ, ವಿವಿಧ ಅನುದಾನಗಳ ಸಮರ್ಪಕ ವೆಚ್ಚ ಹಾಗೂ ದಾಖಲೆ ನಿರ್ವಹಣೆ, ವೆಚ್ಚವಾದ ಅನುದಾನಗಳ ಲೆಕ್ಕಪತ್ರ ಹಾಗೂ ದಾಖಲೆ ನಿರ್ವಹಣೆ, ಬ್ಯಾಂಕ್‌ನೊAದಿಗೆ ಶಾಲೆಯ ವ್ಯವಹಾರ ಖಾತೆಯ ನಿರ್ವಹಣೆ, ಬಿ.ಎಲ್.ಓ. ಕಾರ್ಯಭಾರ (ಭೂತ್ ಲೆಟರ್ ಆಫೀಸರ್), ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಯೊಂದಿಗಿನ ವ್ಯವಹಾರ, ಶೌಚಾಲಯ ಮತ್ತು ಕುಡಿಯುವ ನೀರಿನ ನಿರ್ವಹಣೆ, ಸ್ವಚ್ಛತೆ ಕಾಪಾಡುವುದು. ಜನಗಣತಿ, ಜಾತಿಗಣತಿ, ಮಕ್ಕಳ ಗಣತಿ ಇಷ್ಟೆಲ್ಲಾ ಕಾರ್ಯಭಾರಗಳು ಕಲಿಕೆಗೆ ಅಡ್ಡಿಯುಂಟು ಮಾಡುತ್ತಿರುವುದರಿಂದ ಕಲಿಕಾ ಸಮಯ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಮಕ್ಕಳ ಪಾಲಕರಿಗೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ಕಾರಣಗಳಿಂದ ಸರ್ಕಾರ ಈ ಬಗ್ಗೆ ಗಂಭೀರವಾಗಿ ಗಮನಹರಿಸಿ ಶಿಕ್ಷಕರಿಗೆ ಕಲಿಕೇತರ ಅನ್ಯ ಕಾರ್ಯಭಾರವನ್ನು ಕಡಿಮೆ ಮಾಡಿ ಶಿಕ್ಷಕರು ಪೂರ್ಣವಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಅನುವಾಗುವಂತೆ ಕ್ರಮ ವಹಿಸಬೇಕೆಂದು ಪ್ರಜಾಪರಿವರ್ತನಾ ವೇದಿಕೆ-ಕರ್ನಾಟಕ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಕಾರ್ಯಾಧ್ಯಕ್ಷ ಎ.ಡಿ.ಈಶ್ವರಪ್ಪ, ಜಿಲ್ಲಾ ಅಧ್ಯಕ್ಷ ಹೆಚ್.ಕೆ. ಕೃಷ್ಣಪ್ಪ ಅರಕೆರೆ, ಜಿಲ್ಲಾ ಉಪಾಧ್ಯಕ್ಷರಾದ ಲಿಂಗರಾಜು ಎಂ. ಗಾಂಧಿನಗರ, ಧನಿಕ ತಿಮ್ಮೇನಹಳ್ಳಿ,
ಮಹಮ್ಮದ್ ಹನೀಫ್ ಕೆ., ಜಿಲ್ಲಾ ಕಾನೂನು ಸಲಹೆಗಾರ ರಾಕೇಶ್ ಕಕ್ಕರಗೊಳ್ಳ ನಾಗರಾಜ್ ಕಲ್ಕೆರೆ, ಸಿದ್ದಪ್ಪ ಸಿಂಗಟಗೇರಿ ಸೇರಿದಂತೆ ಇತರರು ಇದ್ದರು.
Read also : ಪೋಡಿ ಮಾಡಲು ರೈತರಿಂದ ಡಿಸಿಗೆ ಮನವಿ