ದಾವಣಗೆರೆ (Davanagere ): ವಿಶ್ವಗುರು ಬಸವಣ್ಣನವರ ಹೆಸರು ಇಡೀ ಕರ್ನಾಟಕ, ಭಾರತಕ್ಕೆ ಅಲ್ಲ. ಇಡೀ ವಿಶ್ವಕ್ಕೇ ಮುಟ್ಟಿದೆ ಅದಕ್ಕೆ ಕಾರಣ ಕರ್ತರು ಎಂದರೆ ಹರ್ಡೆಕರ್ ಮಂಜಪ್ಪನವರು. ದಾವಣಗೆರೆಯ ವಿರಕ್ತಮಠದಲ್ಲಿ ಮೊಟ್ಟಮೊದಲ ಬಾರಿಗೆ ಬಸವ ಜಯಂತಿಯನ್ನು 1913ರಲ್ಲಿ ಪ್ರಾರಂಭ ಮಾಡಿದವರು. ಅಂದಿನಿAದ ಪ್ರಾರಂಭವಾದ ಬಸವ ಜಯಂತಿಯನ್ನು ಇಂದು ಇಡೀ ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತಿದೆ ಎಂದು ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ಹೊಸ ಅಂಡರ್ ಬ್ರಿಡ್ಜ್ ಬಳಿ ಇರುವ ಶರಣ ಹರ್ಡೆಕರ್ ಮಂಜಪ್ಪನವರ ಪುತ್ಥಳಿ ಬಳಿ ಬಸವ ಬಳಗ, ಜಾಗತಿಕ ಲಿಂಗಾಯತ ಮಹಾಸಭಾ, ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ, ವಿರಕ್ತಮಠ, ಬಸವ ಕಲಾಲೋಕದ ಸಹಯೋಗದಲ್ಲಿ ಆಯೋಜಿಸಿದ ಕರ್ನಾಟಕದ ಗಾಂಧಿ ಹರ್ಡೆಕರ್ ಮಂಜಪ್ಪನವರ 139ನೇ ಜಯಂತಿ ಕಾರ್ಯಕ್ರಮದಲ್ಲಿ ಪುತ್ಥಳಿಗೆ ಪುಷ್ಪಾರ್ಪಣೆ ಮಾಡಿ ಅವರು ಮಾತನಾಡಿದರು.
ಪ್ರತಿವರ್ಷ ಶರಣರ, ಮಹಾತ್ಮರ, ದಾರ್ಶನಿಕರ ಜಯಂತಿಯನ್ನು ನಮ್ಮ ಸರ್ಕಾರ ಆಚರಣೆ ಮಾಡುತ್ತಿದೆ, ಅದೇ ರೀತಿಯಾಗಿ ಕರ್ನಾಟಕದ ಗಾಂಧಿ, ಸ್ವಾತಂತ್ರ್ಯ ಹೋರಾಟಗಾರರಾದ, ದಾವಣಗೆರೆಯ ಮೊದಲ ಪತ್ರಕರ್ತರಾಗಿ, ಸರಳ ಜೀವನ ನಡೆಸಿದಂತಹ ಹರ್ಡೆಕರ್ ಮಂಜಪ್ಪನವರ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಬೇಕು ಎಂಬ ಹಕ್ಕೊತ್ತಾಯವನ್ನು ನಾವೆಲ್ಲರೂ ನಿಯೋಗದ ಮುಖಾಂತರ ಮುಖ್ಯಮಂತಿಗಳಿಗೆ ಮನವಿ ಮಾಡಿ ಇಡೀ ರಾಜ್ಯಾದ್ಯಂತ ಆಚರಣೆ ಮಾಡುವಂತಾಗಲು ಪ್ರಯತ್ನ ಮಾಡೋಣ ಎಂದರು.
ಕರ್ನಾಟಕದ ಗಾಂಧಿ ಎಂದೇ ಕರೆಸಿಕೊಂಡಿದ್ದ ಹರ್ಡೆಕರ್ ಮಂಜಪ್ಪನವರ ಜೀವನದ ಆದರ್ಶಗಳು, ವಿಚಾರಧಾರೆಗಳನ್ನು ಮಕ್ಕಳಿಗೆ, ಯುವ ಜನತೆಗೆ ತಿಳಿಸುವ ನಿಟ್ಟಿನಲ್ಲಿ ಅವರ ಕುರಿತು ಪಠ್ಯಗಳಲ್ಲಿ ಅಳವಡಿಸಬೇಕು. ಈ ದೇಶದ ಶಕ್ತಿ ಯುವಕರೇ ಆಗಿರುವುದರಿಂದ ಅವರಿಂದಲೇ ಆಚಾರ ವಿಚಾರ ಉಳಿಯುವಂತಹದ್ದು. ಅವರು ದುಶ್ಚಟ, ದುರ್ಗುಣಗಳನ್ನು ಬಿಡಬೇಕು ಎಂದು ಪರಿವರ್ತನೆ ಮಾಡಿದರು. ಜೊತೆಗೆ ಬಸವ ತತ್ವ, ಗಾಂಧಿ ತತ್ವ ತಿಳಿಸಿದರು.
ಈ ಸಂದರ್ಭದಲ್ಲಿ ಬಾಗಲಕೋಟೆಯ ಮಹಾಮಲ್ಲಪ್ಪ ಪಟ್ಟಣಶೆಟ್ಟಿ ಹರ್ಡೆಕರ್ ಮಂಜಪ್ಪನವರ ಬಗ್ಗೆ ಮಾತನಾಡಿದರು.
ಬಸವ ಬಳಗದ ಹುಚ್ಚಪ್ಪ ಮೇಸ್ಟುç, ಮಹಾನಗರ ಪಾಲಿಕೆ ಉಪ ಮಹಾಪೌರರಾದ ಸೋಗಿ ಶಾಂತಕುಮಾರ, ಜಾಗತಿಕ ಲಿಂಗಾಯತ ಮಹಾಸಭಾದ ಆವರಗೆರೆ ರುದ್ರಮುನಿ, ವಿರಕ್ತಮಠದ ಕಾರ್ಯದರ್ಶಿ ಕಣಕುಪ್ಪಿ ಮುರುಗೇಶಪ್ಪ, ಅಗಡಿ ಮಹಾಂತೇಶ, ಬಸವ ಕಲಾಲೋಕದ ಶಶಿಧರ, ರುದ್ರೇಗೌಡ, ಶರಣ ಸಾಹಿತ್ಯ ಪರಿಷತ್‌ನ ಪರಮೇಶ್ವರಪ್ಪ, ಬಸವ ಬಳಗದ ಶಿವಾನಂದ ಗುರೂಜಿ, ಲಂಬಿ ಮುರುಗೇಶ, ಚನ್ನಬಸವ ಶೀಲವಂತ್, ಗೋಪನಾಳ ರುದ್ರಗೌಡ್ರು, ವೀಣಾ ಮಂಜುನಾಥ, ಭುವನೇಶ್ವರಿ ತಾಯಿ, ಶಿವಬಸಮ್ಮ, ಕದಳಿ ಮಹಿಳಾ ವೇದಿಕೆಯ ಕುಸುಮ ಲೋಕೇಶ, ಗಾಯತ್ರಿ ವಸ್ತçದ್, ಸದ್ಭಕ್ತರು, ಇತರರು ಭಾಗವಹಿಸಿದ್ದರು.
Read also : JOB NEWS | ಗ್ರಾಮೀಣ ಅಂಚೆ ಸೇವಕರ ನೇಮಕಾತಿಗಾಗಿ ಅರ್ಜಿ ಆಹ್ವಾನ