ದಾವಣಗೆರೆ ಮಾ.06 (Davanagere): ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಅವೈಜ್ಞಾನಿಕ ಮಾಹಿತಿಗೆ ಕಿವಿಗೊಡಬೇಡಿ. ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಸೆವಿಸುವುದರಿಂದ ಈ ರೋಗ ಬರುವುದಿಲ್ಲ, ಆದ್ದರಿಂದ ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ತಿಳಿಸಿದ್ದಾರೆ.
ಕೋಳಿ ಫಾರಂ ಹಾಗೂ ಮಾಂಸದ ಕೋಳಿ ಅಥವಾ ಮೊಟ್ಟೆ ಕೋಳಿ ಫಾರಂ, ಹಾಗೂ ಅಂಗಡಿ ಸುತ್ತಮುತ್ತ ಕಚ್ಚಾವಸ್ತುಗಳನ್ನು ಇಟ್ಟುಕೊಳ್ಳದೇ ಸುತ್ತಮುತ್ತಲೂ ಸೋಂಕು ನಿವಾರಕಗಳೊಂದಿಗೆ ಸ್ವಚ್ಚವಾಗಿಟ್ಟುಕೊಳ್ಳಬೇಕು. ತ್ಯಾಜ್ಯವನ್ನು ಆಗಿಂದಾಗ್ಗೆ ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದರೊಂದಿಗೆ ಕೋಳಿ ಫಾರಂಗಳಲ್ಲಿ ಕೆಲಸ ಮಾಡುತ್ತಿರುವವರ ಆರೋಗ್ಯದ ಬಗ್ಗೆ ನಿಗಾವಹಿಸಿ, ಬಟ್ಟೆ, ಶೂ, ಕೈ ಕಾಲುಗಳಿಗೆ ನಂಜುನಾಶಕ ದ್ರಾವಣವನ್ನು ಕಡ್ಡಾಯವಾಗಿ ಬಳಸಬೇಕು. ಅಷ್ಟೇ ಅಲ್ಲದೇ ಫಾರಂಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಪಿಪಿಇ ಕಿಟ್‍ಗಳನ್ನು ಧರಿಸುವಂತೆ ಕ್ರಮವಹಿಸಬೇಕು. ಕೋಳಿ ಶೀತಜ್ವರ ಕಂಡುಬಂದ ಜಿಲ್ಲೆಗಳಿಂದ ಯಾವುದೆ ಕೋಳಿ, ಕೋಳಿ ಉತ್ಪನ್ನಗಳನ್ನು ಖರೀದಸಬಾರದು ಎಂದರು.
ಹಾಗೆಯೇ ಅಡಕೆ ಬೆಳೆಗಾರರು ಸದ್ಯಕ್ಕೆ ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಕೋಳಿ ಗೊಬ್ಬರವನ್ನು ಖರೀದಿಸಿ ಸಾಗಾಣೆ ಮಾಡಬಾರದು. ಕೋಳಿ ಫಾರಂ, ಇತರೆ ಪಕ್ಷಿಗಳು ಹಾಗೂ ಕೋಳಿ ಉತ್ಪನ್ನಗಳೊಂದಿಗೆ ಸಂಪರ್ಕದಲ್ಲಿರುವವರು ಮಾಸ್ಕ್ ಮತ್ತು ಗ್ಲೌಸ್‍ಗಳನ್ನು ಉಪಯೋಗಿಸಬೇಕು. ಆರೋಗ್ಯವಂತ ಕೋಳಿ, ಶಂಕಾಸ್ಪದವಾಗಿ ಮರಣ ಹೊಂದಿದ ಪಕ್ಷಿಗಳು ಗಮನಕ್ಕೆ ಬಂದ ತಕ್ಷಣ ಇಲಾಖೆಯ ಸಹಾಯವಾಣಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.
Read also : Davanagere | ಆಸ್ತಿ ತೆರಿಗೆ ಪರಿಷ್ಕರಣೆ, ಶೇ.3 ರಷ್ಟು ತೆರಿಗೆ ಹೆಚ್ಚಳ