ದಾವಣಗೆರೆ, ಜೂ.12 (Davanagere) ಹರಿಹರದ ಕವಲೆತ್ತು ಗ್ರಾಮದ ಹತ್ತಿರವಿರುವ ಜಾಕ್‍ವೆಲ್ ಪಂಪ್ ಹೌಸ್‍ನಲ್ಲಿ ಹೊಸದಾಗಿ ವಿ.ಟಿ ಪಂಪ್, ಮೋಟಾರ್‍ಗಳನ್ನು ಅಳವಡಿಸುವ ಕಾರ್ಯವು ಜೂನ್ 9 ರಿಂದ ಪ್ರಗತಿಯಲ್ಲಿದೆ.
ಇದರಿಂದ ಹರಿಹರ ನಗರಸಭಾ ವ್ಯಾಪ್ತಿಯ ವಾರ್ಡ್ ಪ್ರದೇಶಗಳಲ್ಲಿ ನಿರಂತರ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಶುದ್ದೀಕರಿಸಿದ ಕುಡಿಯುವ ನೀರನ್ನು ಅಗತ್ಯಕ್ಕೆ ತಕ್ಕಂತೆ ಸಂಗ್ರಹಣೆ ಮಾಡಿಕೊಳ್ಳುವಂತೆ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
Read also : Davanagere | ನಗರ ಸಚ್ಚತೆಗೆ ಸಹಕರಿಸಿ, ಉಲ್ಲಂಘನೆಯಾದಲ್ಲಿ ದಂಡ ಪಾವತಿಸಿ : ಡಿಸಿ