ದಾವಣಗೆರೆ : ಆರೋಗ್ಯ ಸೇವಾ ಕ್ಷೇತ್ರದ ಪ್ರತಿಷ್ಠಿತ ಕಂಪನಿ ಆಪ್ಟಮ್ ನಲ್ಲಿ ಉದ್ಯೋಗವಕಾಶ ಪಡೆದ ಕರ್ನಾಟಕದ ವಿವಿಧ ಕಾಲೇಜುಗಳ ಬಿ.ಎಸ್ಸಿ, ಎಂ.ಎಸ್ಸಿ ಮತ್ತು ಬಿಇ ಬಯೋಟೆಕ್ನಾಲಜಿಯ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ಸನ್ನದ್ಧಗೊಳಿಸಲಾಗುತ್ತಿದೆ.
ಇತ್ತೀಚಿಗೆ ಆಪ್ಟಮ್ ಕಂಪನಿಯು ಒಟ್ಟು 153 ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಆಯ್ಕೆ ಮಾಡಿತ್ತು. ಈ ಪೈಕಿ ದಾವಣಗೆರೆಯ ಜಿಎಂ ತಾಂತ್ರಿಕ ಮಹಾವಿದ್ಯಾಲಯದ 30 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ನೇಮಕಾತಿ ಪ್ರಕ್ರಿಯೆಯಲ್ಲಿ ಮೆಡಿಕಲ್ ಕೋಡರ್ ಹುದ್ದೆಗೆ ವಾರ್ಷಿಕ ವೇತನ 4,07,320 ಗೆ ಆಯ್ಕೆಯಾಗಿದ್ದಾರೆ.
ಈ ಆಯ್ಕೆಯಾದ ಅಭ್ಯರ್ಥಿಗಳು ವೈದ್ಯಕೀಯ ಕೋಡರ್‌ಗಳ ಪಾತ್ರಗಳಿಗೆ ಅವರನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿರುವ ಆಪ್ಟಮ್ ನ ಉದ್ಯಮ ತಜ್ಞರು ಸಮಗ್ರ 6 ವಾರಗಳು ಅಂದರೆ ಒಂದೂವರೆ ತಿಂಗಳ ತರಬೇತಿ ಪ್ರಾರಂಭಿಸಿದ್ದಾರೆ. ಈ ತರಬೇತಿಗೆ ಬಾಗಲಕೋಟೆ, ಬೆಳಗಾವಿ, ಶಿವಮೊಗ್ಗ, ಮೈಸೂರು ಸೇರಿದಂತೆ ಕರ್ನಾಟಕದ ವಿವಿಧ ಕಾಲೇಜುಗಳ ಬಿ.ಎಸ್ಸಿ, ಎಂ.ಎಸ್ಸಿ ಮತ್ತು ಬಿಇ ಬಯೋಟೆಕ್ನಾಲಜಿಯ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
Read also : 22 ವರ್ಷದ ದಾವಣಗೆರೆ ಯುವಕ ಹೃದಯಘಾತಕ್ಕೆ ಬಲಿ
ದಾವಣಗೆರೆಯ ಜಿಎಂ ತಾಂತ್ರಿಕ ಮಹಾವಿದ್ಯಾಲಯವನ್ನು ತರಬೇತಿ ಕೇಂದ್ರವಾಗಿಸಿಕೊಂಡಿದ್ದು, ಜುಲೈ 7,2025 ರಂದು ಈ ತರಬೇತಿಗೆ ಚಾಲನೆ ನೀಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸಂಜಯ್ ಪಾಂಡೆ ಎಂ.ಬಿ (Dr. sanjay Pande m.b), ಜಿಎಂ ಯುನಿವರ್ಸಿಟಿಯ ತರಬೇತಿ ಮತ್ತು ಉದ್ಯೋಗ ಇಲಾಖೆ ನಿರ್ದೇಶಕ ತೇಜಸ್ವಿ ಕಟ್ಟಿಮನಿ ಟಿ.ಆರ್, ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಪ್ರಕಾಶ್ ಕೆ.ಕೆ, ಆಪ್ಟಮ್ ಕಂಪನಿಯ ತರಬೇತುದಾರ ವಿಜಯ್ ಮತ್ತು ಗಂಗಾಧರ್ ಇದ್ದರು.