ದಾವಣಗೆರೆ : ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭ ದೇಶೀಕೇಂದ್ರ ಶಿವಯೋಗಿಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದು, ಇದು ನಿಜವಾಗುತ್ತಾ ಎನ್ನುವುದು ಕಾದು ನೋಡಬೇಕಿದೆ.
ಶ್ರೀಮಠ, ರೈತಾಪಿ ಜನ, ವರ್ತಕರು, ರಾಜಕೀಯ ಮುತ್ಸದ್ದಿಗಳು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲೆಂಬ ಸಂಕಲ್ಪದಲ್ಲಿ ಭಾಗಿಯಾಗಿದ್ದಾರೆ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ತಿಳಿಸಿದರು.
ಸಿದ್ದರಾಮಯ್ಯ ತಮ್ಮ ಮಾತಿನಂತೆ ಅಧಿಕಾರ ಬಿಟ್ಟುಕೊಡಲಿದ್ದಾರೆ. ಡಿ.ಕೆ. ಶಿವಕುಮಾರ್ ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಹೈಕಮಾಂಡ್ ಸಹ ಒಪ್ಪಲಿದೆ ಎಂದರು.
ಡಿಕೆಶಿ ಅವರು ಶ್ರೀಮಠದ ಭಕ್ತನಾಗಿ, ಶ್ರೀಮಠದ ಮಗನಾಗಿ ನಿರಂತರ ಸೇವೆ ಮಾಡಿ ಕೊಂಡು ಬರುತ್ತಿದ್ದಾರೆ. ಯಾವಾಗಲೂ ನೊಣವಿನಕೆರೆ ಮಠಕ್ಕೆ ಡಿ.ಕೆ.ಶಿವಕುಮಾರ್ ಬಂದು ಸೇವೆ ಮಾಡುತ್ತಾರೆ. ಆದರೆ, ರಾಜಕೀಯ ವಿಚಾರವಾಗಿ ಬರುವುದಿಲ್ಲ. ಡಿ. ಕೆ.ಶಿವಕುಮಾರ್‍ಗೆ ಆರೋಗ್ಯವಂತರಾಗಿ, ಜನರ ಸೇವೆ ಮಾಡಲು ಅವಕಾಶ ಒದಗಿ ಬರಲಿ ಎಂದು ಆಶೀರ್ವಾದ ಮಾಡುತ್ತೇವೆ ಎಂದರು.
Read also : ದಾವಣಗೆರೆ | ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್ ನೀಡಿದ ಸರ್ಕಾರ
ಸತ್ಯ ಸಾಯಿ, ಶ್ರೀ ಶಿರಡಿ ಸಾಯಿಬಾಬಾರ ಆಶೀರ್ವಾದ, ಬಾಳೆಹೊನ್ನೂರು ಜಗದ್ಗುರುಗಳ ಆಶೀರ್ವಾದ, ನಮ್ಮ ಆಶೀರ್ವಾದದಿಂದ ನಮ್ಮ ಮಠದ ಮಗನಾದ ಡಿಕೆಶಿ ವಿಜೇತರಾಗಿ, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ. ಈ ಗುರುಪೂರ್ಣಿ ಯಂದೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿ ಆಶೀರ್ವಾದ ಮಾಡುತ್ತೇವೆ ಎಂದರು.