ದಾವಣಗೆರೆ : ನಿರ್ಮಿತಿ ಕೇಂದ್ರದಲ್ಲಿ ನೇಮಕಗೊಂಡಿರುವ 12 ಜನರನ್ನು ಅಮಾನತ್ತುಗೊಳಿಸುವಂತೆ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆನೇ ನಿರ್ಮಿತಿ ಕೇಂದ್ರದವರ ವಿರುದ್ಧ ಪತ್ರಿಕಾಗೋಷ್ಠಿ ಮಾಡಿ ಜಿಲ್ಲಾಧಿಕಾರಿಗಳಿಗೂ ವೈಯಕ್ತಿಕವಾಗಿ ಭೇಟಿ ಮಾಡಿ ಮಾಹಿತಿ ನೀಡಲಾಯಿತು. ಆದರೂ ಸಹ ಜಿಲ್ಲಾಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರಾಗಲಿ ಯಾವುದೇ ಸೂಕ್ತ ಕ್ರಮ ಜರುಗಿಸದೆ ಮೌನವಾಗಿಸಿದ್ದಾರೆ ಎಂದು ಹೇಳಿದರು.
ಕೇಂದ್ರ ಕಚೇರಿ ಕಾರ್ನಿಕ್ ಸಂಸ್ಥೆಯಿAದ ಮಾಹಿತಿ ಪಡೆದ್ದಿದ್ದೇನೆ. ಈ ಮಾಹಿತಿ ಜಿಲ್ಲಾಧಿಕಾರಿ ಬಳಿ ಇದ್ದರೂ ಸಹ ಏನು ಕಾನೂನು ಕ್ರಮ ಜರುಗಿಸಿಲ್ಲ ಎಲ್ಲೋ ಒಂದು ಕಡೆ ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಮಣಿದು ಯಾವುದೇ ಅನುಭವವಿಲ್ಲದೇ ಔಟ್ ಸೋರ್ಸ್ನಲ್ಲಿ ಕೆಲಸ ಮಾಡುತ್ತಿರುವವರನ್ನು ನೇರ ನೇಮಕಾತಿ ಮಾಡಿದ್ದಾರೆ. ಹಾಗೂ ಈ ಹಿಂದೇ ಪ್ರೊಜೆಕ್ಟ್ ಇಂಜಿನಿಯರಾಗಿ ರಾಜಪ್ಪ ಎಂಬುವವರು ಕಾರ್ಯ ನಿರ್ವಹಿಸುತ್ತಿದ್ದು ಅವರ ವಿ ಆರ್ ಎಸ್ ನಂತರ ಅವರ ಸಂಬAಧಿಕರಾದ ರವಿ ಅವರನ್ನು ನೇಮಕಮಾಡಿಕೊಂಡಿದ್ದರು ಅವರ ನಂತರ ಆ ಹುದ್ದೆಗೆ ರಾಜಪ್ಪನವರ ಮತ್ತೊಬ್ಬ ಸಂಬAಧಿಯಾದ ಚಂದನ್ ಅವರನ್ನು ನೇಮಕಮಾಡಿದ್ದಾರೆ. ಇವುಗಳೆಲ್ಲ ಅಕ್ರಮವಾಗಿ ನೇಮಕಾತಿ ಮಾಡಿದ್ದಾರೆ. ಈ ಕೂಡಲೇ ಅವರನ್ನು ವಜಾ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ ಅವರು, ಕ್ರಮಕೈಗೊಳ್ಳದಿದ್ದರೆ ಈ ಎಲ್ಲ ದಾಖಲೆಯೊಂದಿಗೆ ನ್ಯಾಯಾಲಯ ಮೊರೆ ಹೋಗುವುದಾಗಿ ಎಚ್ಚರಿಸಿದರು.
ಕೆ.ಟಿ.ಟಿ.ಪಿ ಆಕ್ಟ್ ಪ್ರಕಾರ ಅವರ ವ್ಯಾಪ್ತಿಗೆ ಬರುವ ಕಾಮಗಾರಿಗಳು ಸರಕಾರಿ ಕಟ್ಟಡಗಳು, ರಸ್ತೆಗಳು, ಚರಂಡಿಗಳು ಬರುವಂತದ್ದು ಇದನ್ನ ಹೊರತುಪಡಿಸಿ ಕಾನೂನು ಬಾಹಿರವಾಗಿ ಹೈ ಮಾಸ್ಕ್ ಲೈಟ್, u g ಕೇಬಲ್, ಏರ್ ಸೋರ್ಸ್ ಸಪ್ಲೆ ಅಂದರೆ ವಾಟರ್ ಹೀಟರ್, ಸೋಲಾರ್ ಇವನ್ನೆಲ್ಲ ಸರಕಾರಿ ಹಾಸ್ಟೆಲ್, ಸರಕಾರಿ ಆಸ್ಪತ್ರೆಗಳಿಗೆ ಅಳವಡಿಸುವ ಕಾಮಗಾರಿಯನ್ನು ಮಾಡುವ ಕೆಲಸ ಮಾಡುವುದಲ್ಲದೆ ಅದಕ್ಕೆ ಅದರ ಬೆಲೆಗಿಂತ ಹತ್ತು ಪಟ್ಟು ಹೆಚ್ಚು ಬಿಲ್ಲುಗಳನ್ನು ಮಾಡಿ ಸರ್ಕಾರದ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
Read also : Silver price rise| ಬೆಳ್ಳಿ ಬೆಲೆ 6 ತಿಂಗಳಲ್ಲಿ ₹25 ಸಾವಿರ ಏರಿಕೆ!
ಬಿಜೆಪಿ ಮುಖಂಡರಾದ ಬಿ. ಎಂ ಸತೀಶ್ ಕೊಳೇನಹಳ್ಳಿ, ಎನ್.ಹೆಚ್ ಹಾಲೇಶ್ ನಾಯಕ, ರಾಜುತೋಟಪ್ಪನವರ್‌ರವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.