ಈ ಲೇಖನದಲ್ಲಿ ಇಕ್ವಿಟಿ ಮ್ಯೂಚುಯಲ್ ಫಂಡ್ ಗಳ (Equity Mutual Fund) ಬಗ್ಗೆ ತಿಳಿಯೋಣ ಮೊದಲಿಗೆ ಇಕ್ವಿಟಿ ಮ್ಯೂಚುಯಲ್ ಫಂಡ್ಗಳು ಎಷ್ಟು ವಿಧ ಎಂಬುದನ್ನು ತಿಳಿಯೋಣ. ನಾಲ್ಕು ಭಾಗಗಳಾಗಿ ವಿಂಗಡಿಸಲಾಗುತ್ತದೆ ಮೊದಲನೆಯದಾಗಿ ಲಾರ್ಜ್ ಕ್ಯಾಂಪ್ ಎರಡನೆಯದು ಮಿಡ್ ಕ್ಯಾಪ್ ಫಂಡ್ ಮೂರನೇದು ಮಲ್ಟಿ ಕ್ಯಾಪ್ ಅಥವಾ ಫ್ಲೆಕ್ಷಿ ಕ್ಯಾಪ್ ಫಂಡ್ ನಾಲ್ಕನೆಯದು ಹೈಬ್ರಿಡ್ ಫಂಡ್ ಅಥವಾ ಬ್ಯಾಲೆನ್ಸ್ಡಫಂಡ್. ಅಂದರೆ ಇದರಲ್ಲಿ ಇಕ್ವಿಟಿ ಮತ್ತು ಡೆಟ್ ಎರಡರ ಮಿಶ್ರಣ ಇರುತ್ತದೆ.
ಲಾರ್ಜ್ ಕ್ಯಾಪ್ ಫಂಡ್ ಈ ಕಂಪನಿಗಳು ದೊಡ್ಡ ಪ್ರಮಾಣದ ಕಂಪನಿಗಳಾಗಿರುತ್ತವೆ. ಇವುಗಳು ನಿರಂತರ ಆದಾಯ ನೀಡುತ್ತವೆ ಇವುಗಳಲ್ಲಿ ರಿಸ್ಕ್ ಪ್ರಮಾಣ ಕಡಿಮೆ ಇರುತ್ತದೆ. ಆದಾಯ ಸಾಧಾರಣವಾಗಿರುತ್ತದೆ. ಹೆಚ್ಚಿನ ರಿಸ್ಕ್ ಬೇಡ ಎನ್ನುವವರು ಮತ್ತು ಮಧ್ಯ ವಯಸ್ಸು ದಾಟಿದವರಿಗೆ ಈ ಫಂಡ್ ಗಳು ಸೂಕ್ತ ವಾಗಿವೆ. ಈ ಫಂಡ್ ಗಳು ಐದು ಅಥವಾ ಅದಕ್ಕಿಂತ ಹೆಚ್ಚು ಕಾಲದಲ್ಲಿ ಉತ್ತಮ ಲಾಭ ನೀಡುತ್ತವೆ.
ಇಕ್ವಿಟಿ ಮ್ಯೂಚುಯಲ್ ನ ಉಪಯೋಗ
ಮಿಡ್ ಕ್ಯಾಪ್ ಫಂಡ್ ಗಳು ಇವುಗಳಲ್ಲಿ ಆದಾಯ ಸ್ವಲ್ಪ ಜಾಸ್ತಿ ಇರುತ್ತದೆ ರಿಸ್ಕ್ ಸಹ ಸ್ವಲ್ಪ ಜಾಸ್ತಿ ಇರುತ್ತದೆ. ಈ ಫಂಡ್ ಗಳಲ್ಲಿ ಹೂಡಿಕೆ ಮಾಡಬಯಸುವವರು ಕನಿಷ್ಠ ಐದು ವರ್ಷ ಅಥವಾ ಹತ್ತು ವರ್ಷಗಳ ಅವಧಿಯಲ್ಲಿ ಒಳ್ಳೆಯ ಲಾಭವನ್ನು ನೀಡಬಲ್ಲವು. ಈ ಫಂಡ್ ಗಳು ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಬಯಸುವರಿಗೆ ಸೂಕ್ತ ವಾಗಿವೆ. ಏನೇ ಆದರೂ ಮ್ಯೂಚುವಲ್ ಫಂಡ್ ವಿತರಕರನ್ನು ಸಂಪರ್ಕಿಸಿ ಹೂಡಿಕೆ ಮಾಡಿದಲ್ಲಿ ಉತ್ತಮ ಲಾಭ ಗಳಿಸಬಹುದು.
ಸ್ಮಾಲ್ ಕ್ಯಾಪ್ ಫಂಡ್ ಇವುಗಳು ಹೆಚ್ಚಿನ ಆದಾಯ ನೀಡುತ್ತವೆ ರಿಸ್ಕ್ ಸಹ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.ಸ್ಮಾಲ್ ಕ್ಯಾಪ್ ಫಂಡ್ಗಳು ದೀರ್ಘಾವಧಿ ಹೂಡಿಕೆ ಮಾಡಬಯಸುವವರಿಗೆ ಹೆಚ್ಚು ಲಾಭ ಮಾಡಿಕೊಡುತ್ತವೆ. ಈ ಫಂಡ್ ಗಳು ಯುವ ಜನತೆಗೆ ಅತ್ಯಂತ ಸೂಕ್ತ ವಾಗಿವೆ. ಏಕೆಂದರೆ ಆಗ ತಾನೇ ಕೆಲಸಕ್ಕೆ ಸೇರಿದ ಯುವಕ/ ಯುವತಿ ಯರಿಗೆ ಹೆಚ್ಚು ಕಾಲಾವಕಾಶ ಇರುವುದು ದೀರ್ಘಾವಧಿ ಹೂಡಿಕೆ ಮಾಡಿ ಅತಿ ಹೆಚ್ಚು ಲಾಭ ಪಡೆದು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುತ್ತದೆ.ಆದರೆ ವೃತ್ತಿಪರ ವಿತರಕರನ್ನು (Mutual fund Distributor) ಸಂಪರ್ಕಿಸಿ ಸಲಹೆ ಪಡೆದು ಹೂಡಿಕೆ ಮಾಡುವುದು ಸೂಕ್ತ.
Large cap, Mid cap ಮತ್ತು small cap ಇವುಗಳನ್ನು ಹೇಗೆ ನಿರ್ಧರಿಸುತ್ತಾರೆ ಅಂದರೆ ಲಾರ್ಜ್ ಆಪ್ ಇವುಗಳು ಸ್ಟಾಕ್ ಮಾರ್ಕೆಟ್ನಲ್ಲಿ ಟಾಪ್ 100 ಕಂಪನಿಗಳಾಗಿರುತ್ತವೆ. ಉದಾಹರಣೆಗೆ ಇನ್ಫೋಸಿಸ್. ಟಿಸಿಎಸ್ .ರಿಲಯನ್ಸ್ ಇಂಡಸ್ಟ್ರೀಸ್ .ಹೆಚ್ ಡಿ ಎಫ್ ಸಿ ಬ್ಯಾಂಕ್.
ಇನ್ನು ಎರಡನೆಯದಾಗಿ ಮಿಡ್ ಕ್ಯಾಪ್ ಫಂಡ್ ಇವುಗಳು 101 ರಿಂದ 250 ಶ್ರೇಣಿ ಯಲ್ಲಿ ಇರುತ್ತವೆ.
Read This: ಮ್ಯೂಚುಯಲ್ ಫಂಡ್ ಅಂದರೇನು; ಹಣ ಹೂಡಿಕೆಗೆ ಇಲ್ಲಿದೆ ಚಿನ್ನದ ದಾರಿ!
ಮೂರನೆಯದಾಗಿ ಸ್ಮಾಲ್ ಕ್ಯಾಪ್ ಫಂಡ್ 250ರ ನಂತರದವು. ಉದಾಹರಣೆಗೆ ಟಾಟಾ ಕಮ್ಯುನಿಕೇಶನ್ ಲಿಮಿಟೆಡ್, ಅಪೋಲೊ ಟೈರ್ಸ ಲಿಮಿಟೆಡ್, ಇಂಡಿಯನ್ ಬ್ಯಾಂಕ್ ಇತರೆ. ಇನ್ನು ಮಲ್ಟಿ ಕ್ಯಾಪ್ ಫಂಡ್ ಇವುಗಳ ಬಗ್ಗೆ ತಿಳಿದುಕೊಳ್ಳೋಣ ಮಲ್ಟಿ ಕ್ಯಾಪ್ ಫಂಡ್ ಅಂದರೆ ಇದರಲ್ಲಿ ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಈ ಮೂರೂ ಫಂಡ್ ಗಳು ಇರುತ್ತವೆ. ಈಗಿನ ಕಾಲದಲ್ಲಿ ಈ ಮಲ್ಟಿ ಕ್ಯಾಪ್ ಫಂಡ್ ಗಳು ಸೂಕ್ತ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ. ಮುಂದಿನ ಸಂಚಿಕೆಯಲ್ಲಿ ಮತ್ತಷ್ಟು ವಿಷಯ ಹಂಚಿಕೊಳ್ಳೋಣ.
ಮರುಳಸಿದ್ಧಯ್ಯ ಕೆ ಆರ್
ಮ್ಯೂಚುವಲ್ ಫಂಡ್ ವಿತರಕರು.
9620104888.