ದಾವಣಗೆರೆ : ಗಂಡನನ್ನು ಕೊಂದು ಮನೆಯಲ್ಲಿ ಹೂತು ಹಾಕಿದ್ದ ಹೆಂಡತಿ ಮತ್ತು ಆಕೆ ಪ್ರೇಮಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ತಲಾ 55 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಹೊನ್ನಾಳಿ ತಾಲ್ಲೂಕಿನ ನೆಲಹೊನ್ನೆ ಗ್ರಾಮದ ಜಗದೀಶ್ (64) ಹಾಗೂ ಗಂಗಮ್ಮ (54) ಶಿಕ್ಷೆಗೆ ಗುರಿಯಾದವರು.
ಲಕ್ಷ್ಮಣ್ ಎಂಬ ವ್ಯಕ್ತಿಯನ್ನು ಹೆಂಡತಿ ಮತ್ತು ಪ್ರೇಮಿ ಸೇರಿಕೊಂಡು 2015ರ ಸೆ.8ರಂದು ಕೊಲೆ ಮಾಡಿ ಹೂತಹಾಕಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ.ಎಚ್. ಅಣ್ಣಯ್ಯನವರ್ ಆದೇಶ ನೀಡಿದರು.
Read also : ದಾವಣಗೆರೆ | ಬಾಲಕಿ ಪುಸಲಾಯಿಸಿ ಅತ್ಯಾಚಾರ : ಆರೋಪಿಗೆ 04 ವರ್ಷ ಕಾರಾಗೃಹ ಶಿಕ್ಷೆ
ಲಕ್ಷ್ಮಣ್ ಅವರ ಮೇಲೆ ಹೆಂಡತಿ ಗಂಗಮ್ಮ ಹಾಗೂ ಪ್ರೇಮಿ ಜಗದೀಶ್ ಆಗಾಗ ಮನೆಗೆ ಬರುತ್ತಿದ್ದ ಜಗದೀಶ್ ಏಕಾಏಕಿ ಲಕ್ಷ್ಮಣ್ ಮೇಲೆ ದಾಳಿ ನಡೆಸಿದ್ದರು. ಇದರಿಂದ ಲಕ್ಷ್ಮಣ್ ಸ್ಥಳದಲ್ಲೇ ಮೃತಪಟ್ಟಿದ್ದರು. ಇಬ್ಬರು ಸೇರಿಕೊಂಡು ದೇವರ ಕೋಣೆಯಲ್ಲಿ ಗುಂಡಿ ತೆಗೆದು ಹೂತುಹಾಕಿದ್ದರು.
ಈ ಸಂಬAಧ ಗಂಗಮ್ಮ ಮತ್ತು ಲಕ್ಷ್ಮಣ್ ದಂಪತಿಯ ಪುತ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಇನ್ಸ್ಪೆಕ್ಟರ್ ಗಜೇಂದ್ರಪ್ಪ, ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.