Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ವಾರಕ್ಕೊಂದು ಕಥೆ > ವಾರದ ಕಥೆ | ಬಹುಮಾನ : ಜಗದೀಶ ಕೆ. ಬಳಿಗೇರ
ವಾರಕ್ಕೊಂದು ಕಥೆ

ವಾರದ ಕಥೆ | ಬಹುಮಾನ : ಜಗದೀಶ ಕೆ. ಬಳಿಗೇರ

ಜಗದೀಶ ಕೆ. ಬಳಿಗೇರ
Last updated: July 21, 2025 5:45 am
ಜಗದೀಶ ಕೆ. ಬಳಿಗೇರ
Share
Jagadish K. Baligera
SHARE
ಅರುಣ ದಿನ ಪತ್ರಿಕೆಯಲ್ಲಿನ ಪುಟಗಳನ್ನು ಮುಗುಚಿ ಹಾಕುವ ದರಲ್ಲಿಯೇ ತಲ್ಲೀನನಾಗಿದ್ದ. ಹಾಗೆ ಹಾಕುತ್ತಾ ಹಾಕುತ್ತಾ ಕೊನೆಯ ಪುಟದಲ್ಲಿ ಒಂದು ಭಾವಚಿತ್ರ ಕಂಡು ವಿಸ್ಮಯನಾಗಿ ಎರಡು ಸಾಲು ಓದಿದಾ. ಅವನಿಗೆ ಇನ್ನೂ ಕುತೂಹಲ ಹೆಚ್ಚಿಸಿತು. ಮತ್ತೆ ಮತ್ತೆ ಓದಿದಾ. ಅವನಿಗೊಂದು ಆಲೋಚನೆ ಹೊಳೆಯಿತು. ಇಂಥಾ ಶೋಧನೆಯ ಕಾರ್ಯಕ್ಕೆ ನಾನೇ ತೊಡಗಿಬಿಟ್ರೆ ! ಆ ಕಾರ್ಯ ಸಫಲವಾದರೆ ನನಗೆ 5000 ರೂಪಾಯಿ ಬಹುಮಾನ!!  ಹಾಗೂ ವರದಕ್ಷಿಣೆಯ ಪೆಡಂಭೂತದಿಂದಾ ತಂಗಿಯ ಮದುವೆ ನಿಂತು ಹೋಗುವ ಸಂಭವ ಜಾಸ್ತಿ ಇದೆ. ತಂಗಿ ಮದುವೆಗೆ ಬರೀ ಒಂದು ಸಾವಿರ ರೂಪಾಯಿ ಕಡಿಮೆಯಾಗಿದೆ.
ಸಾವಿರ ರೂಪಾಯಿ ಸಲುವಾಗಿ ಅರುಣ ತುಂಬಾ ಹೆಣಗಾಡಿದ್ದ, ಕಂಡ ಕಂಡವರ ಹತ್ತಿರ ಕೈಚಾಚಿದ್ದ. ಆದ್ರೆ ಅವನ ಮುಖಕ್ಕೆ ಸಾವಿರ ರೂಪಾಯಿ ಹುಟ್ಟಿದ್ದಿಲ್ಲ. ಈ ಪೋಟೊದಲ್ಲಿರುವ ವ್ಯಕ್ತಿ ಕಾಣೆಯಾಗಿ ಬರೀ ಹತ್ತು ದಿನಗಳಾದವು. ಈ ವ್ಯಕ್ತಿಯ ಮನೆಗೆ’ ಹೋಗಿ ಎಲ್ಲ ವಿಷಯ ತಿಳಿದುಕೊಂಡು ಬರಲಿ? ಬೇಡಾ ಬೇಡಾ ಮೊದಲು ಇಲ್ಲೇ ಪ್ರತಿಯೊಂದು ಹೊಟೆಲ್ಗಳನ್ನು ಹುಡುಕಿ ತದನಂತರ ಪೋದರಾತು, ಅರುಣ ನಿರ್ಧರಿಸಿ ದಿನ ಪತ್ರಿಕೆ ಮಡಚಿ ಮೇಲಿದ್ದಾ.
ಅರುಣ ಇಷ್ಟು ದಿವಸ ಯಾವ ಹೊಟೆಲೆಗಳಿಗೂ ಹೆಚ್ಚು ತಿರುಗಿದವನಲ್ಲ. ಹೆಚ್ಚು ದುಡ್ಡು ಖರ್ಚು ಮಾಡೋ ಮನುಷ್ಯನೂ ಅಲ್ಲ. ಪ್ರತಿ ಹೊಟೆಲನಲ್ಲೂ ಆ ಭಾವ ಚಿತ್ರ ಹತ್ರ ಇಟ್ಟುಕೊಂಡು, ಪ್ರತಿಯೊಬ್ಬ ಮಾನಿ ಯನ್ನ ಅಡಿಯಿಂದಾ ಮುಡಿಯವರೆಗೆ, ಇಂಚು ಇಂಚಿನಂತೆ ಅವರನ್ನ ಅಳೆದು, ಹತ್ತಿರವಿದ್ದ ಭಾವಚಿತ್ರಕ್ಕೆ ಅವರು ಹೊಂದಲಿಲ್ಲದಾಗ ನಿರಾಶೆಯಿಂದಾ ಅದನ್ನ ಜೇಬಿಗಿಳಿಸುತ್ತಿದ್ದ. ಅರುಣ ಹೀಗೆ ಪ್ರತಿ ದಿವಸ (ಏಳು-ಎಂಟು) ಹೊಟೆಲ್ ಗಳನ್ನು ಅಲಿದು, ಪ್ರತಿ ಹೊಟೆಲನಲ್ಲೂ ಕಾಫಿ ಕುಡಿಯುವದು ಅವನಿಗೆ ವಾಡಿಕೆಯಾಗಿ ಹೋಯಿತು.

Read also : ವಾರದ ಕಥೆ | ಗೊಡ್ನಳ್ಳಿ ಬಸವಣ್ಣ : ಜಗದೀಶ ಕೆ. ಬಳಿಗೇರ

ಹುಡಕಬೇಕು… ಈ ಪತ್ರಿಕೆಯಲ್ಲಿ ಇವನ ಪೋಟೊ ಕೊಟ್ಟು, 5000 ರೂಪಾಯಿ ಬಹುಮಾನ ಅಂತಾ ಹಾಕಿದಾರ. ಈ ವ್ಯಕ್ತಿನ ಏನಾದ್ರಾ ಮಾಡಿ ಪತ್ತೆ ಮಾಡಿದ್ರೆ ನನಗೆ 5000 ರೂಪಾಯಿ ಬಹುಮಾನ ಸಿಗುತ್ತೆ!! ನನ್ನ ತಂಗಿ ಮದುವೆ ಧಾರಾಳವಾಗಿ ನಡದಹೊಗುತ್ತೆ. ನನಗವರು ಐದು ಸಾವಿರ ಕೊಡೊದು ಬೇಡಾ, ಬರೀ ಸಾವಿರ ರೂಪಾಯಿ ಕೊಟ್ರೆ ಸಾಕು. ನನ್ನ ತಂಗಿ ಮದುವೆ ಮುಗಿದೇ ಹೋಗುತ್ತೆ. ಅರುಣ ತಂಗಿ ಮದುವಗೋಸ್ಕರ ಕಾಣೆಯಾದ ವ್ಯಕ್ತಿನ ಹುಡುಕುವ ಶೋಧನೆಯಲ್ಲಿ ತೊಡಗಿದಾ. ಅರುಣ ಈ ಶೋಧನೆಯನ್ನ ಪ್ರಾರಂಭಿಸಿ ಹದಿನೈದು ದಿವಸಗಳಾಗುತ್ತಾ ಬಂದರೂ ವ್ಯಕ್ತಿ ಸಿಗುವ ಸೂಚನೆ ಅವನಿಗೆ ಕಾಣ ಬರಲಿಲ್ಲ.
ಈ ಹುಬ್ಬಳ್ಳಿಯಂಥಾ ದೊಡ್ಡಪಟ್ಟಣದಲ್ಲಿ. ಎಲ್ಲಿ ಅಂತಾ ಹುಡುಕೋದು ? ಇಲ್ಲಿರುವ ಎಲ್ಲ ದೊಡ್ಡ ಹೊಟೆಲಗಳನ್ನ ಹುಡುಕಿಯಾಯಿತು. ಬೀದಿ ಸಂದಿಗಳೂ ಮುಗಿದವು. ಮನೆಯಿಂದಾ ಓಡಿ ಬಂದವರಿಗೆ ಹೊಟೆಲುಗಳೇ ಆಶ್ರಯ. ಇಲ್ಲಿ ಇಲ್ಲ ಅಂದ ಮೇಲೆ ಮುಂದಿನ ವಾರ ಹಾಗೂ ಅಕ್ಕನ ಮನೆಗೆ ಬೆಂಗಳೂರಿಗೆ ಹೊಗಬೇಕಾಗಿದೆ. ಅಲ್ಲಿ ಒಂದ ವಾರಯಿದ್ದು ಪ್ರಯತ್ನಿಸಿದರಾಯಿತು —ಬೆಂಗಳೂರಲ್ಲೂ ಸಿಗಲಿಲ್ಲ ಅಂದ್ರೆ ಏನ ಮಾಡೋದು ? ಅರುಣನ ವಿಚಾರಕ್ಕೆ ನಿರ್ಧಿಷ್ಟ ನಿಲುವು ಸಿಗಲಾರದಾಗಿತ್ತು.  ಅರುಣನ ಶೋಧನ ಈಗ ಇಳಿಮುಖವಾಗತೊಡಗಿತು. ಈ ಸಾರಿ ಅರುಣ ಯಾವ ಹೊಟೆಲನಲ್ಲೂ ಕಾಫಿ ಕುಡಿಯಲಿಲ್ಲ. ಅವನದು ಶೋಧನೆಯೊಂದೆ ಮುಖ್ಯ ಗುರಿಯಾಗಿತ್ತು. ನಿರಾಶೆಯಿಂದಾ ಭಾರವಾದ ಹೆಜ್ಜೆ ಯಿಡುತ್ತಾ ಮನೆಕಡೆಗೆ ಬರುವಾಗ ಎದುರಿಗೊಂದು ಸಣ್ಣ ರೆಸ್ಟೋರೆಂಟ ಕಣ್ಣಿಗೆ ಬಿತ್ತು.
ಸಂಜೆವರೆಗೂ ತಿರುಗಿ ಸುಸ್ತಾಗಿದ್ದ ಅರುಣ, ಕಡೆ ಪಕ್ಷ ಇಲ್ಲ ಒಂದ ಕಪ್ಪ ಕಾಫಿನಾದ್ರೂ ಕುಡುದ ಹೋಗೋಣಂತ ಆ ಚಿಕ್ಕ ರೆಸ್ಟೋರೆಂಟಗೆ ಧಾವಿಸಿದಾ.ಕಾಣೆಯಾದ ವ್ಯಕ್ತಿ ಹೊಟೆಲ ಚಿಕ್ಕದಾದ ಆ ರೆಸ್ಟೋರೆಂಟ ನಿಲ್ಲೇ ಇರತಾನ ಅಂತ ಯಾವ ಯಾವ ಗ್ಯಾರಂಟಿ? ಮತ್ತೆ ಬೇರೆಡೆಯಲ್ಲಾದರೂ ಟೇಬಲ್ಗಳು. ಮತ್ತಾರೂ ಅವರ ಸಂಬಂದಿಕರ ಮನೆಗೆ ಹೋಗಿರಬಹುದಾ? ಅಲ್ಲಿ ಹೋಗಿ ಮನೇಲಿ ಇರಬಹುದಲ್ಲ !! ಛೇ ಛೇ ಕುಳಿತುಕೊಂಡಾಗ ಮಾನಿ ಪ್ರತ್ಯಕ್ಷ ಹಾಗೇನಾದ್ರೂ ಆಗಿದೆ, ಇದನ್ನು ವಾಗಿಲ್ಲ. ಎದುರಿಗೆ ನಿಂತಿದ್ದ ಮಾನಿ ಪೇಪರನಲ್ಲಿ ವ್ಯಕ್ತಿನೇ ಆಗಿದ್ದಕಂಡ.ಅರುಣ ಒಂದು ಕ್ಷಣ ಸಾವರಿಸಿಕೊಂಡು, ಹೌದು ‘ಅವನೇ ಸಂಶಯವೇ ಇಲ್ಲ –
“ ಏನ ಬೇಕು ಸರ್ ಆಂ,,,,,,
ಮಾನಿಯ ಧ್ವನಿಗೆ ಎಚ್ಚೆತ್ತ ಅರುಣ ಕಾಫಿ ಆರ್ಡರ ಮಾಡಿ ಜೇಬಿನಲ್ಲಿದ್ದ ಭಾವಚಿತ್ರ ತೆಗೆದು ಮತ್ತೊಮ್ಮೆ ಕೂಲಂಕುಷವಾಗಿ ಪರೀಕ್ಷಿಸಿ ಹೌದೆಂದು ತೀರ್ಮಾನವಾದ ಮೇಲೆ ಜೇಬಿನಲ್ಲಿ ಅವನ್ನ ಭದ್ರಪಡಿಸಿದಾ. ಮಾನಿ ಕಾಫಿ ತಂದು ಮುಂದಿಟ್ಟಾಗ, ಅವನನ್ನೂದೇಶಿಸಿ
ಅರುಣ – “ನಿನ್ನ ಹೆಸರೇನು ? “ಚನ್ನಕೇಶವ ಅಂತ” “ಯಾವೂರು ?” “ದಾವಣಗೆರೆ”
“ಸಂಬಳ ಎಷ್ಟ ಕೊಡತಾರಂತೆ ?” “ಸಂಬಳ ಇನ್ನೂ ಕೇಳಿಲ್ಲ. ಸಾರ್”
“ನಿನಗೆ ಸಂಬಳ ತಿಂಗಳಿಗೆ ಎಷ್ಟ ಕೊಟ್ರೆ ಇರಬೇಕು ಅಂತಿಯಾ ?”
“ನನ್ನ ಹೊಟ್ಟೆ, ಬಟ್ಟೆ ನೋಡಿಕೊಂಡು ತಿಂಗಳಿಗೆ 5000 ಕೊಟ್ರೆ ಸಾಕ ಸಾರ್, ನಾನೀರೋದಿಕ್ಕೆ ಸಿದ್ಧವಾಗಿದಿನಿ”
“ಹಾಗಿದ್ರೆ ನಾನು ಹೊಟ್ಟೆ ಬಟ್ಟೆ ನೋಡಿಕೊಂಡು ತಿಂಗಳಿ 50000 ರೂಪಾಯಿ ಸಂಬಳ ಕೊಡತೇನಿ.
   ನನ್ನಜೊತೆ ಬರತಿಯಾ ?”” !!! –“
“ಬರತೇನಿ ಸರ್, ಖಂಡಿತಾ ಬರತೇನಿ, – ಈಗ್ಗೆ ಬಂದಬಿಡ್ತಾ ಸರ್ !! –
“ಓಹ್ ಈಗ್ಗೆ ಬಾ. ಅದಕ್ಕೇನಂತೆ” ಅರುಣ ತನ್ನ ಶೋಧನೆಯಲ್ಲಿ ವಿಜಯ ಶಾಲಿಯಾಗಿದ್ದಾ. ಬಹುಮಾನದ ಕಲ್ಪನೆ ಯಲ್ಲಿ ಆಚರಿಸ್ತಾಯಿದ್ದ. ಇನ್ನ ಮೇಲೆ ನನ್ನ ತಂಗಿ ಮದುವೆ ಖಂಡಿತಾ ನಡಿ ಯುತ್ತೆ ಅಂತ ಬಲವಾದ ನಂಬಿಕೆ ಅವನಲ್ಲಿ ತಳವೂರಿತು.ಚನ್ನಕೇಶವನನ್ನ ನೇರ ತನ್ನ ಸ್ಟಡಿ ರೂಂಗೆ ಕರೆತಂದ.
“ಚನ್ನಕೇಶವ ಇವತ್ತೊಂದ ದಿವಸ ನೀನು ಇಲ್ಲೇ ಇರಬೇಕಾಗುತ್ತೆ
“ಸರಿ ಸಾರ್”
“ಸಂಜೆ ಊಟ ಕಳಿಸ್ತೀನಿ.
ನೀನು ವಿಶ್ರಾಂತಿ ತಗೊ”
“ಸರ್ ತಮ್ಮ ಉಪಕಾರಾನಾ ನಾತ್ಕಾಂಗ ತಿರಸಬೇಕೊ ಗೊತ್ತಾಗತಾಯಿಲ್ಲ ಸಾರ್”
“ಪರವಾಗಿಲ್ಲ ಬಿಡು, ನಾನ್ ಬರತೇನಿ”ಅರುಣ ಅವನಿಗೆ ಚೆನ್ನಾಗಿ ನೋಡಿಕೊಂಡು, ರಾತ್ರಿ ತಾನೂ ಊಟ ಮಾಡಿ, ಚನ್ನಕೇಶವನಲ್ಲಿಗೆ ಹೋಗಿ ! ಅವನ ವೃತ್ತಾಂತವನ್ನು ವಿಚಾರಿಸತೊಡಗಿದಾ.
“ಚನ್ನಕೇಶವ, ನೀನು “ಯಾಕ ಸುಮ್ಮನಾದ ? ” “ಏನಂತ ಹೇಳಬೇಕು ಸಾರ್ ನಾನೂ … ವರೆಗೂ ಓದಿದೇನಿ, ಉದ್ಯೋಗವಿಲ್ಲದೆ ನಿರುದ್ಯೋಗದಿಂದಾ “ನನ್ನ ತಂಗಿ ಮದುವೆಗೆ ಬಂದಿದಾಳೆ, ಅವಳ ಮದುವೆ ಜವಾಬ್ದಾರಿ ನನ್ನ ತಂದೆ ನನ್ನ ತಲೆಮೇಲೆ ಹೊರಿಸಿ ಹೋಗಿ ಬಿಟ್ಟು. ನಾನು ಮನೇಲಿ ಕೈಚೆಲ್ಲಿ ಅಸಹಾಯ ಕನಂತಿರೋದನ್ನ ಸಹಿಸಲಾರದೇ ಅಮ್ಮ ತಂಗಿ ಮದುವೆ ಸಲುವಾಗಿ ಹೇಳಿ, ಎಲ್ಲಿಯಾದೊಂದು ಉದ್ಯೋಗ ಹುಡುಕ ಬಾರದೇ ಅಂತ ಬಾಯಿಗೆ ಬಂದಿದ್ದೆಲ್ಲಾ ಬೈದಬಿಟ್ರ ಸಾರ್, ಮನ ಪರಿಸ್ಥಿತಿನ ನೋಡಲಾರದೆ, ಅಮ್ಮನ ಮಾತುಗಳಿಂದಾ ಕೇಳಲಾರದೆ, ಮನೆ ಬಿಟ್ಟು ಬಂದ ಬಿಟ್ಟೆ ಸಾರ್.”“ಅಲ್ಲಪ್ಪಾ ವಿದ್ಯಾವಂತನಾದ ನೀನೇ ಈ ರೀತಿ ಮನೆಬಿಟ್ಟು ಬಂದ್ರ ನಿನ್ನ ತಾಯಿ-ತಂಗಿ ಗತಿ ? ”
“ಅದೇ ಸಾರ್, ನನಗೆ ಬರೋ ತಿಂಗಳ ಸಂಬಳಾನಲ್ಲಾ ಅವರಿಗೇ ಕಳಿಸಿಬಿಡಬೇಕು
“ಮತ್ತೆ ಪೇಪರನಲ್ಲಿ ನಿನ್ನ ಹುಡುಕಿ ಕೊಟ್ಟವರಿಗೆ 5000 ರೂಪಾಯಿ ಬಹುಮಾನ ಕೊಡತೇವಿ ಅಂತ ಕೊಟ್ಟಿದಾರೆ ?’
ಅದನ್ನ ನಾನ ನೋಡಿದ ಸರ್. ಅದೇಲ್ಲಾ ಸುಳ್ಳು ,,,,,,,,,,,
ನಮ್ಮನ ಪಕ್ಕದಲ್ಲಿ ಶ್ರೀಮಂತ ರೊಬ್ರು ತುಂಬಾ ಒಳ್ಳೆಯವರಿದ್ದಾರೆ ಸಾರ್. ಅವರು ನಮ್ಮ ತಂದೆಗೊ ಬೇಕಾದವರು, ನಾನು ಮನೆ ಬಿಟ್ಟು ಬಂದ ಮೇಲೆ ಅಮ್ಮ ಹಾಸಿಗೆ ಹಿಡಿದಿದಾಳಂತೆ, ನನ್ನ ಯಾರಾದರೂ ಸರಿ ತಂದು ಮನೆಗೆ ಓಪ್ಪಿಸಿದ್ರೆ ಸಾಕು ಅಂತಾ ಈ ಬಹುಮಾನ ಘೋಷಣೆ ಮಾಡಿದಾರ ಸಾರ್ ” “ಈಗ ನಿನ್ನನ್ನ ನಿಮ್ಮನೆಗೆ ಕಳಿಸಿದ್ರೆ ಬಹುಮಾನ ಕೋಡೊದಿಲ್ಲಾ ? ”
“ಮನೆಗೆ ಬಂದವರಿಗೆ ಒಪ್ಪತ್ತಿನ ಊಟಾ ಹಾಕೋ ಸ್ಥಿತಿನೂ ಇಲ್ಲ ಸಾರ್ ” ಅರುಣನ ವಿಜಯೋತ್ಸವದ ಶೋಧನ ಪ್ರಯೋಗ ಆಚರಿಸುವ ‘ದಕ್ಕಿಂತಾ ಮುಂಚೆ, ಟುಸ್ಸಾ ಅಗಿತ್ತು. ಆತನ ತಂಗಿ ಮದುವೆ ಸಾವಿರ ಬಹುಮಾನ ರೂಪಾಯಿ,,,,,,,,,,,,!!!
ಸಾರ್ ಈಗ ಇರೋ ದೊಂದು ಮನೆ, ತಂದೆ ಕುಡಿದು ಆಕ್ಸಿಡೆಂಟನಲ್ಲಿ ಸತ್ತ ಹೋದ್ರು ನಾ ನನಗೀಗ ಇರೋವರು ತಾಯಿ – ಒಬ್ಳು ತಂಗಿ ”ನನ್ನ ತಂಗಿ ಮದುವೆಗೆ ನಾ ಕೆಲ್ಸಕ್ಕ ಬಂದೆ ಸರ್, ನೀವು ನಿಮ್ಮ ತಂಗಿ ಮದುವೆ ಮಾಡಾಕ ನನ್ನ ಹುಡುಕಿದ್ರಿ, ಈಗ ನಿಮ್ಮ ತಂಗಿ ಮದುವೆನಾ… ಇಲ್ಲಾ ನನ್ನ ತಂಗಿ ಮದುವೆನಾ???? ಹೇಳಿ ಸರ್.ಅರುಣ ಕಂಗಾಲಾದ, ವ್ಯಕ್ತಿ ಸಿಕ್ಕಿದಾ, ಆದ್ರೆ ಬಹುಮಾನ ಸಿಗದಂಗಾತು, ಈಗ ನನ್ನ ತಂಗಿ ಮದುವೆನಾ ಇಲ್ಲಾ ಅವ ಅವನ ತಂಗಿ ಮದುವೆನಾ?ಅರುಣ ತನ್ನ ತಂಗಿ ಮದುವೆಗೆ ಇಟ್ಟಿದ್ದ ಎಲ್ಲಾ ಹಣಾನು ಆ ವ್ಯಕ್ತಿಗೇ ಕೊಟ್ಟು, ಹೋಗು ತಮ್ಮಾ, ನೀನು ನಿನ್ನ ಮನಿಗೆ ಹೋಗಿ ನಿನ್ನ ತಂಗಿ ಮದುವೆ ಮಾಡು, ನಾನು ನನ್ನ ತಂಗಿ ಮದುವೆನಾ ಹೇಗಾದರೂ ಮಾಡಿ ಮುಂದಕ್ಕೆ ಹಾಕತೇನಿ” ಅಂದಾ, ಆ ವ್ಯಕ್ತಿ ಕುಷಿಯಿಂದ ತನ್ನ ತಂಗಿ ಮದುವಿ ಮಾಡಾಕ ಹೋದಾ, ಅರುಣನ ತಂಗಿ ಮದುವೆ!!!!?????ಅರುಣನ ಬಹುಮಾನ ಬರೀ ಬಹುಮಾನವಾಗಿ ಯ ಉಳಿಯಿತು.
ಒಮ್ಮ ಧೀರ್ಘವಾಗಿ ನಿಟ್ಟುಸಿರು ಬಿಟ್ಟು ಅಲ್ಲಿಂದಾ ಎದ್ದು ಹೊರಗಿದ್ದ ಕತ್ತಲಲ್ಲಿ ಒಂದೊಂದೆ ಹೆಜ್ಜೆ ಇಡುತ್ತಾ ಕರಗಿ ಹೋದಾ,,,,,,,.
ಜಗದೀಶ ಕೆ. ಬಳಿಗೇರ
TAGGED:Davanagere districtdinamaana.comDinamana.comJagadish K. BaligeraStory of the weekಜಗದೀಶ ಕೆ. ಬಳಿಗೇರವಾರದ ಕಥೆ
Share This Article
Twitter Email Copy Link Print
By ಜಗದೀಶ ಕೆ. ಬಳಿಗೇರ
ಜಗದೀಶ ಕೆ. ಬಳಿಗೇರ ( ಮೊಬೈಲ್ : 7676745820) ಶಿಕ್ಷಣ: ಎ.ಎಂ, ಜಿ ಡಿ ಹುಟ್ಟಿದ ಸ್ಥಳ : ಬೈಲಹೊಂಗಲ ತಾಲೂಕ ಉಡಿಕೇರಿ ಗ್ರಾಮ ಅನುಭವ : 10 ವರ್ಷ ಹುಬ್ಬಳ್ಳಿ ತಾಲುಕ ಸುಳ್ಳ ಗ್ರಾಮದ ಶ್ರೀ ಶಿವಾನಂದ ಭಾರತಿ ಹೈಸ್ಕೂಲಿನಲ್ಲಿ ಚಿತ್ರಕಲಾ ಶಿಕ್ಷಕನಾಗಿ ಸೇವೆ. ಧಾರವಾಡ ಆಕಾಶವಾಣಿಯಲ್ಲಿ 10 ವರ್ಷ ಬರಹಗಾರ, ಕಥೆ, ಕವನ, ನಾಟಕ, ರೂಪಕ ರಚನೆ ಮತ್ತು ಪ್ರಸ್ತುತಿ. ಇನ್ನು ಪತ್ರಿಕಾ ರಂಗದಲ್ಲಿ 12 ವಷ9 ಸೇವೆ, ವಿಶ್ವವಾಣಿ, ಸಂಜೆವಾಣಿ, ಕನಾ9ಟಕ ಟೈಮ್ಸ್, ಇಂದಿನ ಕಲಿಯುಗ, ಸಂಜೆದರ್ಪಣ, ಕನ್ನಡಮ್ಮ, ಹಸಿರುಕ್ರಾಂತಿ, ಜಿಲ್ಲೆ ಸಮಾಚಾರ ಹಾಗೂ ಅನೇಕ ಪ್ರಿಂಟಿಂಗ್ ಪ್ರೆಸ್ ಗಳಲ್ಲಿ ಡಿಟಿಪಿ ಆಪರೇಟರ್ ಆಗಿ ಸೇವೆ. ಈಗ ಸದ್ಯ ದಾವಣಗೆರೆಯ ವಿಸ್ಮಯವಾಣಿ ಪತ್ರಿಕೆಯಲ್ಲಿ ಉಪ ಸಂಪಾದಕ ಮತ್ತು ವರದಿಗಾರನಾಗಿ ಸೇವೆ.  
Previous Article Political analysis Political analysis | ಕುಮಾರಣ್ಣಂಗೂ ಈಗ ವಿಜಯೇಂದ್ರ ಬೇಕಿಲ್ಲ
Next Article city's main roundabout be named after Sri Madiwala Machideva ದಾವಣಗೆರೆ | ನಗರದ ಪ್ರಮುಖ ವೃತ್ತಕ್ಕೆ ಶ್ರೀ ಮಡಿವಾಳ ಮಾಚಿದೇವ ಹೆಸರಿಡುವಂತೆ ಆಗ್ರಹಿಸಿ ಮನವಿ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

Davanagere | ಮಕ್ಕಳಿಗೆ ಶಿಕ್ಷಣ ಅತ್ಯಂತ ಅವಶ್ಯಕ : ಜಿಲ್ಲಾ ನಿರ್ದೇಶಕ ಲಕ್ಷ್ಮಣ್

ಹರಿಹರ (Davanagere ) : ಮಕ್ಕಳು ಉತ್ತಮ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಪಡೆಯುವುದಕ್ಕಾಗಿ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ…

By Dinamaana Kannada News

Davanagere news | ಹರಿಹರ ನಗರಸಭೆ : ಅಧ್ಯಕ್ಷರಾಗಿ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷರಾಗಿ ಎಂ ಜಂಬಣ್ಣ

ಹರಿಹರ (Davanagere ):  ಹರಿಹರ ನಗರಸಭೆಯ ಅಧ್ಯಕ್ಷೆರಾಗಿ ಜೆಡಿಎಸ್‌ನ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷರಾಗಿ ಎಂ ಜಂಬಣ್ಣ, ಆಯ್ಕೆಯಾಗಿದ್ದಾರೆ. ಹರಿಹರ…

By Dinamaana Kannada News

ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳ ಕುರಿತು ಪ್ರಧಾನಿಯವರ ನಿರ್ಧಾರಗಳನ್ನು ಎಲ್ಲರೂ ಬೆಂಬಲಿಸಬೇಕು : ಆಲೂರು ನಿಂಗರಾಜ್

ದಾವಣಗೆರೆ (Davanagere) : ಅಮೆರಿಕಾ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಘೋಷಣೆ ಆಯಿತು ಎಂಬುದು ಸರಿಯಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ…

By Dinamaana Kannada News

You Might Also Like

Dinesh K Shetty
ತಾಜಾ ಸುದ್ದಿ

ದಾವಣಗೆರೆ|ದೇಶ ಮತ್ತು ಯೋಧರ ವಿಚಾರದಲ್ಲಿ ರಾಜಕೀಯ ಸಲ್ಲ: ದಿನೇಶ್ ಕೆ ಶೆಟ್ಟಿ

By Dinamaana Kannada News
recruitment for posts in BSF
ತಾಜಾ ಸುದ್ದಿ

BSFನಲ್ಲಿ 3588 ಹುದ್ದೆಗಳ ಭರ್ಜರಿ ನೇಮಕಾತಿ

By Dinamaana Kannada News
Gold price
ತಾಜಾ ಸುದ್ದಿ

ಮೂರು ದಿನಗಳಲ್ಲಿ ಚಿನ್ನದ ಬೆಲೆ 2,400 ರೂ. ಇಳಿಕೆ

By Dinamaana Kannada News
PUC
ತಾಜಾ ಸುದ್ದಿ

ಪ್ರಥಮ PUC ಪ್ರವೇಶಾತಿಗೆ ಜುಲೈ 31 ಕೊನೆ ಅವಕಾಶ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?