ದಾವಣಗೆರೆ ; ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ಐಎಎಸ್ ಬಾಬಾ ಸಂಸ್ಥೆಯ ಸಹಭಾಗಿತ್ವದಲ್ಲಿ ಭಾನುವಾರ ಬೆಳಗ್ಗೆ ಸಂಕಲ್ಪ ಉಚಿತ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆ ದಾವಣಗೆರೆ ಕ್ಷೇತ್ರದಾದ್ಯಂತ ಯಶಸ್ವಿಯಾಗಿ ಜರುಗಿತು.
ಈ ವೇಳೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಭೇಟಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಹರಿಹರ, ಜಗಳೂರು, ಚನ್ನಗಿರಿ, ಹೊನ್ನಾಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಾಗೂ ಹರಪನಹಳ್ಳಿಯ ಟಿ.ಎಂ.ಎ.ಇ. ಶಿಕ್ಷಣ ಮಹಾವಿದ್ಯಾಲಯದ(ತೆಗ್ಗಿನಮಠ) ಕಾಲೇಜುಗಳಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆದಿದೆ.
ಪರೀಕ್ಷೆಗೆ ಹೆಸರು ನೊಂದಾಯಿಸಿದ್ದ 1600 ವಿದ್ಯಾರ್ಥಿಗಳಲ್ಲಿ 1000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.ಮೆರಿಟ್ ಆಧಾರದ ಮೇಲೆ ಆಯ್ಕೆಯಾದವರಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಲಭಿಸಲಿದೆ.
Read also : ದಾವಣಗೆರೆ |ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಕ್ಕಿ, ರಾಗಿ ವಶ
ಯಶಸ್ವಿಯಾಗಿ ಪರೀಕ್ಷೆ ನಡೆಸಿ ಕೊಟ್ಟ ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ. ರಮೇಶ್ ಸಿ ಕೆ, ನೋಡಲ್ ಅಧಿಕಾರಿ ಪ್ರೊ. ಶಶಿಧರ್, ಜಿಎಫ್ ಜಿಸಿ ಕಾಲೇಜಿನ ಪ್ರೊ. ಮಂಜುನಾಥ್, ಶಾಂತಕುಮಾರ್ ಅವರಿಗೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಕೃತಜ್ಞತೆ ಕೋರಿದರು.
ಈ ವೇಳೆ ಸಂಕಲ್ಪ ತಂಡದ ವೀರೇಶ್ ಪಟೇಲ್, ಸಿಂಡಿಕೇಟ್ ಸದಸ್ಯ ಪ್ರಶಾಂತ್ , ಪಾಲಿಕೆ ಮಾಜಿ ಸದಸ್ಯ ಗಡಿಗುಡಾಳ್ ಮಂಜುನಾಥ್, ಶ್ರೀಕಾಂತ್ ಬಂಗೇರ, ನವೀನ್ ಕಕ್ಕರಗೊಳ್ಳ, ಮಧುಕರ್ ಹಾಗೂ ಇತರೆ ಸಂಕಲ್ಪ ತಂಡದವರು ಉಪಸ್ಥಿತರಿದ್ದರು.
ಎಲ್ಲಾ ಕೇಂದ್ರಗಳಲ್ಲೂ ವ್ಯವಸ್ಥಿತವಾಗಿ ಕಾರ್ಯನಿರ್ವಾಹಿಸಿದ ಸಂಕಲ್ಪ ಯುವ ತಂಡದ ಮುಂದಾಳತ್ವ ವಹಿಸಿದ್ದ ವರುಣ್ ಬೆಣ್ಣೆಹಳ್ಳಿ, ಅಲಿ ರೆಹಮತ್ ಪೈಲ್ವಾನ್ ಮತ್ತು ನಗರದ ಎ.ಆರ್ಯ,ಬರ್ಕತ್ ಅಲಿ,ಜಗಳೂರಿನ ಅಕ್ಷಯ್ ಕುಮಾರ್,ಹೊನ್ನಾಳಿಯ ಮನು ವಾಲಿ,ಚನ್ನಗಿರಿಯ ರುದ್ರೇಶ್,ಹರಿಹರದ ಶ್ರೀನಿಧಿ ಹಾಗೂ ಮಾಯಕೊಂಡದ ಲೋಕೇಶ್ ನಾಯ್ಕ್ ಸೇರಿದಂತೆ ತಂಡದವರ ಕಾರ್ಯಕ್ಕೆ ಸಂಸದರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.