ದಾವಣಗೆರೆ : ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇವರ ನಿರ್ದೇಶನದಂತೆ ಇಡೀ ದೇಶದಾದ್ಯಂತ 90 ದಿನಗಳ ಕಾಲ ಮಧ್ಯಸ್ಥಗಾರಿಕೆ ಅಭಿಯಾನವನ್ನು ಆಯೋಜಿಸಲಾಗಿದೆ. ಮಧ್ಯಸ್ಥಗಾರಿಕೆ ಅಭಿಯಾನ ಸದ್ಬಳಕೆ ಮಾಡಿಕೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಕರೆಣ್ಣವರ್ ತಿಳಿಸಿದ್ದಾರೆ.
ಈ ಮಧ್ಯಸ್ಥಗಾರಿಕೆ ಅಭಿಯಾನ 1.7.2025 ರಿಂದ ಸೆಪ್ಟೆಂಬರ್ ಅಭಿಯಾನದಲ್ಲಿ ಎಲ್ಲ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸುವಂತ ಮಹತ್ವದ ಇಚ್ಛೆಯನ್ನ ಮತ್ತು ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಈ ಒಂದು ಅಭಿಯಾನದಲ್ಲಿ ನುರಿತ ವಕೀಲರುಗಳು ಮತ್ತೆ ನ್ಯಾಯಾಧೀಶರು ಎಲ್ಲರೂ ಭಾಗವಹಿಸಿ ಪಕ್ಷಗಾರರಿಗೆ ಸಂಧಾನಕಾರರಾಗಿ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.
ಸಂಧಾನದಲ್ಲಿ ಭಾಗವಹಿಸುವ ವ್ಯಕ್ತಿಗಳು ಕನಿಷ್ಠ 10 ವರ್ಷ ವಕೀಲ ವೃತ್ತಿ ಮಾಡಿದವರು ಸಂಧಾನಕಾರರಾಗಿ ನೇಮಕವಾಗಿರುತ್ತಾರೆ. ಸಂಧಾನ ಪ್ರಕ್ರಿಯೆಯಲ್ಲಿ ನ್ಯಾಯಾಧೀಶರು ಕೂಡ ಭಾಗವಹಿಸಲಿದ್ದಾರೆ. ಎಲ್ಲ ಸೇರ್ಕೊಂಡು ಜನರಿಗೆ ಅವರ ಪ್ರಕರಣಗಳಿಗೆ ಸಂಬಂಧಪಟ್ಟಂತಹ ಮಾಹಿತಿಗಳನ್ನು ಕೊಡಲಿದ್ದಾರೆ.
ಪ್ರಕರಣಗಳ ಸಂಧಾನ ಪ್ರಕ್ರಿಯೆ ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ವಿಶೇಷ ಕೊಠಡಿಗಳನ್ನು ಮತ್ತು ಆಸನ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಪಕ್ಷಗಾರರು ಭೌತಿಕವಾಗಿ ಸಂದಾನಕ್ಕೆ ಹಾಜರಾಗಲು ಸಾಧ್ಯವಾಗದಿದ್ದರೆ ವಿಡಿಯೋ ಮೂಲಕ ಹಾಜರಾಗಲು ಕೂಡ ಅವಕಾಶ ಕಲ್ಪಿಸಲಾಗಿದೆ.
ಸಂಧಾನ ಪ್ರಕ್ರಿಯೆಗೆ ಯಾವುದೇ ಪಕ್ಷಕಾರರು ಯಾವುದೇ ಕಾರಣಕ್ಕೂ ಕೂಡ ಹಣವನ್ನು ಖರ್ಚು ಮಾಡುವುದು ಅವಶ್ಯಕತೆ ಇರುವುದಿಲ್ಲ. ಈ ಅಭಿಯಾನಕ್ಕೆ ಅಗತ್ಯವಿರುವ ಎಲ್ಲಾ ಖರ್ಚು ವೆಚ್ಚಗಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದಲೇ ಭರಿಸಲಾಗುತ್ತದೆ.
Read also : Leopard attack |ಚಿರತೆ ದಾಳಿ: 27 ಕುರಿ ಸಾವು
ಯಾವುದೇ ಕಾರಣಕ್ಕೂ ಬಲವಂತ ಅಥವಾ ಅವರ ಇಚ್ಛೇಗೆ ವಿರುದ್ಧವಾಗಿ ಯಾವುದೇ ಪ್ರಕ್ರಿಯೆಗಳು ಇಲ್ಲಿ ನಡೆಯುವುದಿಲ್ಲ. ಈ ಸಂದರ್ಭದಲ್ಲಿ ಅತ್ಯಂತ ಜನಸ್ನೇಹಿ ಮತ್ತು ಅವರಿಗೆ ಅನುಕೂಲವಾಗುವಂತ ವಾತಾವರಣ ನಿರ್ಮಿಸಿ ಮನವರಿಕೆ ಮಾಡಿಕೊಡುವಂತ ಒಂದು ಪ್ರಕ್ರಿಯೆ ಇದಾಗಿದೆ. ಹೆಚ್ಚಿನ ಜನರು ಈ ಒಂದು ಅಭಿಯಾನ ಅಂದ್ರೆ ಮಧ್ಯಸ್ಥಗಾರಿಕಾ ಅಭಿಯಾನದ ಉಪಯೋಗ ಪಡೆದುಕೊಂಡು ನ್ಯಾಯಾಲಯದಲ್ಲಿರುವ ಪ್ರಕರಣಗಳ ಭಾರ ಕೂಡ ಕಡಿಮೆ ಮಾಡಿ ತಮ್ಮ ಜೀವನ ಉತ್ತ ಮ ಮಾಡಿಕೊಳ್ಳಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.