ದಾವಣಗೆರೆ : ಸ್ವತ್ತು ಕಳವು ಪ್ರಕರಣದಲ್ಲಿ ಆರೋಪಿ ಬಂಧಿಸಿರುವ ಚನ್ನಗಿರಿ ಪೊಲೀಸರು 10 ಲಕ್ಷ ಮೌಲ್ಯದ 100 ಗ್ರಾಂ ತೂಕದ ಬಂಗಾರದ ಒಡವೆಗಳು ಹಾಗೂ 20 ಸಾವಿರ ನಗದು ಹಣ ವಶಕ್ಕೆ ಪಡೆದಿದ್ದಾರೆ.
ಚನ್ನಗಿರಿಯ ಲಷ್ಕರ್ ಮೊಹಲ್ಲಾದ ನಿವಾಸಿ ಮಹಮ್ಮದ್ ಅಲೀಂವುಲ್ಲಾ ಮನೆಗೆ ಹಾಕಿದ ಬೀಗವನ್ನು ಮುರಿದು ಗಾಡ್ರೆಜ್‌ನಲ್ಲಿದ್ದ ಬಂಗಾರದ ಒಡವೆಗಳು ಹಾಗೂ ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಸ್ಪಿ ಉಮಾ ಪ್ರಶಾಂತ್ , ಎಎಸ್ಪಿ ಪರಮೇಶ್ವರ ಹೆಗಡೆ ಹಾಗೂ ಚನ್ನಗಿರಿ ಉಪ-ವಿಭಾಗದ ಎ.ಎಸ್.ಪಿ. ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವೀಶ್ ಕೆ ಎನ್ ನೇತೃತ್ವದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಅಧಿಕಾರಿ-ಸಿಬ್ಬಂದಿ ತಂಡವನ್ನು ರಚಿಸಿ ಆರೋಪಿ ಮಹಮ್ಮದ್ ಸಾಧಿಕ್ ಬಂಧಿಸಿದ್ದಾರೆ. ಆರೋಪಿಯಿಂದ 10 ಲಕ್ಷ ಮೌಲ್ಯದ 100 ಗ್ರಾಂ ತೂಕದ ಬಂಗಾರದ ಒಡವೆಗಳು ಮತ್ತು 20 ಸಾವಿರ ನಗದು ಹಣವನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ.
Read also : ಇ- ಸ್ವತ್ತು ಮತ್ತು ಖಾತೆ ಬದಲಾವಣೆಗೆ ಹಣಕ್ಕೆ ಬೇಡಿಕೆ : ಪಿಡಿಓ ಲೋಕಾ ಬಲೆಗೆ
ಆರೋಪಿ ಪತ್ತೆ ಹಚ್ಚಿ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಚನ್ನಗಿರಿ ಉಪ-ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್, ತನಿಖಾಧಿಕಾರಿ ರವೀಶ್ ಕೆ ಎನ್ ಪೊಲೀಸ್ ಇನ್ಸ್ ಪೆಕ್ಟರ್ ಚನ್ನಗಿರಿ ಠಾಣೆ, ಹಾಗೂ ಎ.ಎಸ್.ಐ. ಶಶಿಧರ್ ಮತ್ತು ಸಿಬ್ಬಂದಿಯರಾದ ರೇವಣಸಿದ್ದಪ್ಪ, ರಮೇಶ್ ಜೆ, ಚನ್ನಕೇಶವ, ಪ್ರಶಾಂತ್, ರೇವಣಸಿದ್ದಪ್ಪ ರವರನ್ನು ಎಸ್ಪಿ ಉಮಾ ಪ್ರಶಾಂತ್ ಪ್ರಶಂಸಿಸಿದ್ದಾರೆ.