ನವದೆಹಲಿ/ದಾವಣಗೆರೆ; ಮಾಜಿ ಪ್ರಧಾನ ಮಂತ್ರಿಗಳಾದ ದಿ.ರಾಜೀವ್ ಗಾಂಧಿ ಅವರ 81 ನೇ ಜನ್ಮದಿನದ ಪ್ರಯುಕ್ತ ರಾಜೀವ್ ಗಾಂಧಿ ಅವರ ಸ್ಮಾರಕವಿರುವ ನವದೆಹಲಿಯ ವೀರಭೂಮಿಯಲ್ಲಿ ಬುಧವಾರ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಭಾಗಿಯಾಗಿ ಪುಷ್ಪನಮನ ಸಲ್ಲಿಸಿದರು.
ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ದಿ.ರಾಜೀವ್ ಗಾಂಧಿಯವರನ್ನು ಸ್ಮರಿಸುವ ಈ ದಿನ ಸದ್ಬಾವನಾ ದಿನವಾಗಿದೆ ಎಂದು ಬರೆದುಕೊಂಡಿದ್ದಾರೆ.
ರಾಜೀವ್ ಗಾಂಧಿಯವರು ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಕೈಗೊಂಡ ಯೋಜನೆಗಳು ಇಂದಿಗೂ ಪ್ರಸ್ತುತ. ಅವರ ಆಡಳಿತ ಶೈಲಿ, ಬಡ ಜನರ ಬಗ್ಗೆ ಇದ್ದ ಕಾಳಜಿ ಸದಾ ಸ್ಫೂರ್ತಿದಾಯಕ.
ದೇಶದ ಪ್ರಗತಿಗೆ ಶಾಶ್ವತ ಕೊಡುಗೆ ನೀಡಿದ ಮಹಾನ್ ನಾಯಕರಾದ ರಾಜೀವ್ ಗಾಂಧಿಯವರ ತ್ಯಾಗ, ದೃಷ್ಟಿಕೋನ ಮತ್ತು ಮಹಿಳಾ ಸಬಲೀಕರಣ ಹೀಗೆ ಹಲವು ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ ಎಂದು ನೆನಪಿಸಿಕೊಂಡಿದ್ದಾರೆ.