ದಾವಣಗೆರೆ : ದೇವರಾಜ್ ಅರಸು ಬಡಾವಣೆಗೆ ದಿ.ಡಿ.ದೇವರಾಜ ಅರಸು ಅವರ ನಾಮಫಲಕ ಅಳವಡಿಸುವಂತೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾಂತರ ಜಾಗೃತಿ ವೇದಿಕೆಯ ಅಧ್ಯಕ್ಷ ಅಬ್ದುಲ್ ಘನಿ ತಾಹೀರ ದೂಡ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.
1985 ರಲ್ಲಿ ದೇವರಾಜ ಅರಸು ಅವರು ದೇವರಾಜ ಅರಸು ಬಡಾವಣೆ ಮೂರು ಬ್ಲಾಕ್‌ಗಳಾಗಿ ಅಭಿವೃದ್ದಿ ಪಡಿಸಿದ್ದಾರೆ. ಅಭಿವೃದ್ದಿ ಪಡಿಸಿ 40 ವರ್ಷಗಳಾದರೂ ಸಹ ಬಿ ಮತ್ತು ಸಿ ಬ್ಲಾಕ್‌ಗೆ ಸಂರ್ಪಕಿಸುವ ರಸ್ತೆಗೆ ಮಾಜಿ ಸಿಎಂ ದೇವರಾಜ ಅರಸು ಅವರ ನಾಮಫಲಕ ಅಳವಡಿಸದೇ ಇರುವುದು ಖಂಡನೀಯ ಎಂದರು.
Read also : ಡಾ.ಬಿ.ಆರ್.ಅಂಬೇಡ್ಕರ್ ಕೆನರಾ ವಿದ್ಯಾಜ್ಯೋತಿ ಯೋಜನೆ : ವಿದ್ಯಾರ್ಥಿ ವೇತನ ವಿತರಣೆ
ದೇವರಾಜ ಅರಸು ಬಡಾವಣೆಯ ಮುಖ್ಯ ರಸ್ತೆಯಾಗಿರುವ ಬಿ ಬ್ಲಾಕ್ ಸಂರ್ಪಕ ರಸ್ತೆಗೆ ಈ ಕೂಡಲೇ ದೇವರಾಜ್ ಅರಸು ನಾಮಫಲಕ ಅಳವಡಿಸುವಂತೆ ವಿನಂತಿಸಿದ್ದಾರೆ.