ದಾವಣಗೆರೆ, ಆ 21 – ತಾಲ್ಲೂಕಿನ ಕುಕ್ಕುವಾಡದ ಶ್ರೀ ಆಂಜನೇಯ ಸೌಹಾರ್ದ ಸಹಕಾರಿ ಸಂಘ ನಿ., 2024-25ನೇ ಸಾಲಿನಲ್ಲಿ 10,69, 853.82 ರೂ. ಲಾಭ ಗಳಿಸಿ ಅಭಿವೃದ್ದಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಸಕಹಾರಿಯ ಅಧ್ಯಕ್ಷ ಜಿ.ಎಂ.ರುದ್ರಗೌಡ್ರು ಸಂತಸ ವ್ಯಕ್ತಪಡಿಸಿದರು.
ಶ್ರೀ ಮಾರಿಕಾಂಬ ದೇವಸ್ಥಾನದ ಮುಂಭಾಗದಲ್ಲಿ ಆ 16ರಂದು ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಸಂಸ್ಥೆಯು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದ್ದು, ಇದಕ್ಕೆ ಆಡಳಿತ ಮಂಡಳಿ ಸದಸ್ಯರ ಸಹಕಾರ, ಸಿಬ್ಬಂದಿ ವರ್ಗದವರ ಶ್ರಮ ಕಾರಣ ಎಂದು ಶ್ಲ್ಯಾಘಿಸಿದರು. ಪ್ರಸಕ್ತ ಸಾಲಿನಲ್ಲಿ 9535 ಸದಸ್ಯರು ಇದ್ದು, ಸಹಕಾರಿಯು ರೂ. 241.11 ಲಕ್ಷ ಷೇರು ಬಂಡವಾಳ ಹೊಂದಿದೆ. ರೂ. 2608.29 ಲಕ್ಷ ಠೇವಣಿ ಇದ್ದು, ರೂ.2106.23 ಲಕ್ಷ ಸಾಲ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಹಕಾರಿಯಿಂದ ಶುದ್ಧ ಕುಡಿಯುವ ನೀರಿನ ಘಟಕ, ಬಚ್ ಪನ್ ಶಾಲೆ, ಎರೆಹುಳ ಗೊಬ್ಬರದ ಘಟಕಗಳನ್ನು ತೆರೆಯಲಾಗಿದೆ ಹಾಗೂ ಸದಸ್ಯರ ಮಕ್ಕಳು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ 75 ಅಂಕ ಪಡೆದಲ್ಲಿ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ, ಹೊಸ ಯೋಜನೆಗೋಸ್ಕರ 6.31ಕೋಟಿಯ ಆಸ್ತಿ ಖರೀದಿಸಲಾಗಿದೆ ಎಂದು ತಿಳಿಸಿದರು.
Read also : ಅಡಿಕೆ–ತೆಂಗು ರೈತರ ಸಂಕಷ್ಟ ನಿವಾರಣೆಗಾಗಿ ಕೇಂದ್ರ ಕೃಷಿ ಸಚಿವರ ಭೇಟಿ :ನಿಯೋಗದೊಂದಿಗೆ ಮನವಿ
ಸಂಘದ ಸಂಪೂರ್ಣ ವ್ಯವಹಾರವನ್ನು ಗಣಕೀಕೃತ ಗೊಳಿಸಲಾಗಿದೆ. ಸಂಘವು ಮುಖ್ಯ ಶಾಖೆ ಸೇರಿದಂತೆ 8 ಶಾಖಾ ಕಛೇರಿಗಳನ್ನು ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜಿ.ಆರ್.ಹರ್ಷ, ನಿರ್ದೇಶಕರುಗಳಾದ ಕೆ.ಟಿ.ಚಂದ್ರಶೇಖರಪ್ಪ, ಕೆ.ಶರಣಪ್ಪ, ಬಿ.ಹೆಚ್.ಶಿವನಗೌಡ, ಕೆ.ಎಂ.ಉಮೇಶ್, ಟಿ.ಎಂ.ಕರಿಬಸಪ್ಪ, ಶ್ರೀಮತಿ ಶೋಭಾ ಸಿ. ಮುಳ್ಥಳ್ಳಿ, ಪಿ.ಎನ್. ಮಹೇಂದ್ರಪ್ಪ, ಕೆ.ಜಿ.ಕೇದಾರಮೂರ್ತಿ, ಕೆ.ಜಿ.ಯೋಗೇಂದ್ರಪ್ಪ, ಕೆ.ಎ.ಮಹಮ್ಮದ್, ಬಿ.ವೆಂಕಟೇಶ, ಶ್ರೀಮತಿ ಡಿ.ಎಂ.ಮಂಜುಳ, ಬಿ.ಎಂ.ವಿಶ್ವನಾಥ,ಕಾನೂನು ಸಲಹೆಗಾರರಾದ ಶ್ರೀಮತಿ ಕೆ ಪವಿತ್ರ , ಶ್ರೀಮತಿ ಸಿಂಧುಜಾ ವೈ.ಬಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಎಸ್.ರಾಜು, ಸಿಬ್ಬಂದಿ ವರ್ಗದವರು ಹಾಗೂ ಷೇರುದಾರರು ಉಪಸ್ಥಿತರಿದ್ದರು.