ದಾವಣಗೆರೆ: ದಾವಣಗೆರೆಯ ಅಂಚೆ ವಿಭಾಗದಲ್ಲಿ ಸೆಪ್ಟೆಂಬರ್ 8ರಿಂದ 13ರವರೆಗೆ ನಡೆಯುತ್ತಿರುವ ಮಹಾ ಉದ್ಯಮ ಸಪ್ತಾಹದ ಅಂಗವಾಗಿ ದಾವಣಗೆರೆಯ ಅಂಚೆ ಅಧೀಕ್ಷಕರಾದ ಚಂದ್ರಶೇಖರ ನೇತೃತ್ವದಲ್ಲಿ ಅಂಚೆ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಅಂಚೆ ಪಾಲಕರು ನಗರದ ವಿವಿಧ ಭಾಗಗಳಲ್ಲಿ ಮಾಹಿತಿ ಪ್ರಚಾರ ಮತ್ತು ಜಾಥಾ ಹಮ್ಮಿಕೊಳ್ಳಲಾಯಿತು.
ನಗರದ ಲೋಕಿಕೆರೆ ರಸ್ತೆಯಲ್ಲಿರುವ ಇಂಡಸ್ಟ್ರಿಯಲ್ ಏರಿಯಾದಲ್ಲಿ ಹಲವು ಕೈಗಾರಿಕೆಗಳಿಗೆ ಭೇಟಿ ನೀಡಿ ಮಾಲೀಕರಿಗೆ ಅಂಚೆ ಸೇವೆಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಾವಣಗೆರೆ ಅಂಚೆ ಅಧೀಕ್ಷಕ ಚಂದ್ರಶೇಖರ್, ದೇಶದ ಮೂಲೆ ಮೂಲೆಗಳನ್ನು ಸಂಪರ್ಕಿಸಿ ಸ್ಪೀಡ್ ಪೋಸ್ಟ್ ಡಾಕ್ಯುಮೆಂಟ್, ಸ್ಪೀಡ್ ಪೋಸ್ಟ್ ಪಾರ್ಸೆಲ್, ಇಂಟರ್ ನ್ಯಾಷನಲ್ ಸ್ಪೀಡ್ ಪೋಸ್ಟ್ಗಳನ್ನು ಬೃಹತ್ ಸಂಖ್ಯೆಯಲ್ಲಿ ಕಳಿಸುವ ಗ್ರಾಹಕರನ್ನು ಸಂಪರ್ಕಿಸಿ ನಮ್ಮ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳನ್ನು ಪ್ರಚಾರಗೊಳಿಸುವ ಯೋಜನೆಯಾಗಿದ್ದು, ಇದು ಯಶ್ವಸಿಯಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಗ್ರಾಹಕರು ಕಡಿಮೆ ಬೆಲೆಯಲ್ಲಿ ದೇಶ ಹಾಗೂ ವಿದೇಶಗಳಿಗೆ ತಮ್ಮ ಪತ್ರಗಳನ್ನು ಮತ್ತು ಸರಕು ಸಾಮಗ್ರಿಗಳನ್ನು ಕಳುಹಿಸಬಹುದು. ಗ್ರಾಹಕರ ಆಫೀಸ್ ಅಥವಾ ಅವರ ವ್ಯವಹಾರಿಕ ಸ್ಥಳಗಳಿಗೆ ಬಂದು ಅಂಚೆಗಳನ್ನು ಸಂಗ್ರಹಿಸುವ ವ್ಯವಸ್ಥೆಯು ಸಹ ಇರುತ್ತದೆ ಅಥವಾ ಗ್ರಾಹಕರೇ ಅದನ್ನು ಬುಕ್ ಮಾಡಿದರೆ, ಅದನ್ನು ಸಮೀಪದ ಅಂಚೆ ಕಚೇರಿಯವರು ಬಂದು ತೆಗೆದುಕೊಂಡು ಹೋಗುವ ಸೌಲಭ್ಯವು ಇರುತ್ತದೆ ಎಂದು ಮಾಹಿತಿ ನೀಡಿದರು.
ಬೃಹತ್ ಸಂಖ್ಯೆಗಳಲ್ಲಿ ಅಂಚೆ ಪತ್ರಗಳನ್ನು ಅಥವಾ ಸರಕು ಸಾಮಗ್ರಿಗಳನ್ನು ಕಳುಹಿಸುವ ಗ್ರಾಹಕರು ಈ ಸೌಲಭ್ಯಗಳನ್ನು ಉಪಯೋಗಿಸಿ ಸುರಕ್ಷಿತವಾಗಿ ತಮ್ಮ ಅಂಚೆಗಳನ್ನು ಸಮಯಕ್ಕೆ ಸರಿಯಾಗಿ ಕಳುಹಿಸುವ ಈ ಅಂಚೆ ಸೇವೆಯನ್ನು ಪಡೆದುಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ ಮಾರುಕಟ್ಟೆ ಅಭಿವೃದ್ಧಿ ಬಿ.ಸಂತೋಷ್ (8861126883), ಅಭಿವೃದ್ಧಿ ಅಧಿಕಾರಿ ಎಸ್.ಮಹೇಶ್ (9986038721) ದೂರವಾಣಿ ಸಂಪರ್ಕಿಸಬಹುದು ಎಂದು ತಿಳಿಸಿದರು.
Read also : ಭದ್ರಾ ನಾಲೆಗಳ ದುರಸ್ತಿಗೆ ಅನುದಾನ : ರೈತರ ಹಿತಕ್ಕಾಗಿ ಡಿಸಿಎಂಗೆ ಮನವಿ ಸಲ್ಲಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
ಈ ಜಾಗೃತಿ ಅಭಿಯಾನದಲ್ಲಿ ಸಹಾಯಕ ಅಂಚೆ ಅಧೀಕ್ಷಕರಾದ ನರೇಂದ್ರ ನಾಯ್ಕ, ವಿದ್ಯಾನಗರ ಅಂಚೆ ಪಾಲಕರಾದ ಶಶಿಕಲಾ, ಮಾರುಕಟ್ಟೆ ಅಧಿಕಾರಿ ಸಂತೋಷ್, ಅಭಿವೃದ್ದಿ ಅಧಿಕಾರಿ ಎಸ್.ಮಹೇಶ್ ಹಾಗೂ ನಗರದ ವಿವಿಧ ಅಂಚೆ ಕಚೇರಿಗಳ ಅಂಚೆ ಪಾಲಕರು, ಇತರೆ ಅಂಚೆ ಸಿಬ್ಬಂದಿಗಳು ಭಾಗವಹಿಸಿದ್ದರು.