ಚಾಮರಾಜನಗರ : ಸರ್ಕಾರಿ, ಅನುದಾನಿತ ಶಾಲೆಗಳಿಗೆ 18,500 ನೇಮಕಾತಿ ಪ್ರಕ್ರಿಯೆ ಶೀಘ್ರ ಶುರುವಾಗಲಿದೆ ಎಂದು ಶಾಲಾ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 13,500 ಶಿಕ್ಷಕರ ನೇಮಕವಾಗಿದೆ ಎಂದು ಹೇಳಿದರು.
Read also : ದಾವಣಗೆರೆ|ಸಾಲ ತೀರಿಸಲಾಗದೆ ರೈತ ಆತ್ಮಹತ್ಯೆ
‘ವಿವೇಕ’ ಯೋಜನೆಯಡಿ 8,200 ಶಾಲಾ ಕೊಠಡಿ ನಿರ್ಮಿಸಿದ್ದು ಹೆಚ್ಚುವರಿ 3 ಸಾವಿರ ಕೊಠಡಿ ನಿರ್ಮಿಸಲಾಗು ವುದು. ಹೊಸದಾಗಿ 800 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.