ದಾವಣಗೆರೆ : ಅಪ್ರಾಪ್ತ ಬಾಲಕಿ ಅಪಹರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಗೆ 2 ವರ್ಷ ಜೈಲು ಹಾಗೂ 5 ಸಾವಿರ ದಂಡ , ಈ ಕೃತ್ಯ ಎಸಗಲು ಸಹಾಯ ಮಾಡಿದ ಇನ್ನೋರ್ವ ಆರೋಪಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಎಫ್‌ಟಿಎಸ್‌ಸಿ-1 ನ್ಯಾಯಾಲಯ ಆದೇಶ ನೀಡಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಲ್ಲಿ 2023ರಲ್ಲಿ ಪ್ರಕರಣ ನಡೆದಿತ್ತು. ಸಮೀರ್ ಬೇಗ್ ಹಾಗೂ ಇಸ್ಮಾಯಿಲ್ ಶಿಕ್ಷೆಗೊಳಗಾದ ಆರೋಪಿಗಳು.
ಮದಾರಸಕ್ಕೆ ತೆರಳುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಸಮೀರ್ ಬೇಗ್ ಅಪಹರಿಸಿದ್ದ. ಈ ಕೃತ್ಯಕ್ಕೆ ಇಸ್ಮಾಯಿಲ್ ಸಹಕರಿಸಿದ್ದ. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪೋಕ್ಕೂ ಪ್ರಕರಣ ದಾಖಲಾಗಿತ್ತು.
Read also : ದಾವಣಗೆರೆ|ಸೆ.22 ರಿಂದ ಅ.07 ರವರೆಗೆ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆ : ಡಿಸಿ
ತನಿಖಾಧಿಕಾರಿ ರೂಪೀಬಾಯಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ ಅವರು ತೀರ್ಪು ಪ್ರಕಟಿಸಿದ್ದಾರೆ.
ಸರ್ಕಾರಿ ವಕೀಲ ಎ.ಎಂ. ಬಸವರಾಜ ವಾದ ಮಂಡಿಸಿದ್ದರು.
