ದಾವಣಗೆರೆ: ಮಕ್ಕಳ ಸರ್ವಾಂಗೀಣ ಪ್ರಗತಿಗೆ ಮೊಬೈಲ್ ಬಳಕೆ ದೊಡ್ಡ ಸಮಸ್ಯೆಯಾಗಿದೆ ಎಂದು ದಾವಣಗೆರೆ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ವಿಶಾಲಾಕ್ಷಿ ಆತಂಕ ವ್ಯಕ್ತಪಡಿಸಿದರು.
ನಗರದ ಪಿ.ಜೆ.ಬಡಾವಣೆಯಲ್ಲಿರುವ ವನಿತಾ ಸಮಾಜದಲ್ಲಿ ಜ್ಞಾನಜ್ಯೋತಿ ವನಿತಾ ಶಿಕ್ಷಕಿಯರ ವೇದಿಕೆ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೊರೊನಾ ನಂತರ ಮಕ್ಕಳು ಸದಾ ಮೊಬೈಲ್‌ನಲ್ಲಿ ಆಟವಾಡುತ್ತ ಓದಿನ ಕಡೆ ಗಮನ ನೀಡುತ್ತಿಲ್ಲ. ತಂದೆ-ತಾಯಿಗಳು ಮೊಬೈಲ್ ಬಳಸುವುದನ್ನು ಬಿಟ್ಟರೆ ಮಾತ್ರ ಮಕ್ಕಳಿಂದಲೂ ಬಿಡಿಸಬಹುದು. ಇಲ್ಲವಾದರೆ ಶಿಕ್ಷಣದಲ್ಲಿ ಪ್ರಗತಿ ಸಾಧ್ಯವಿಲ್ಲ ಎಂದರು.
ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಂಬAಧ ಅವಿನಾಭಾವವಾದುದು. ಶಿಕ್ಷಕ ಗುರುವಾಗಿ ಪರಿವರ್ತನೆ ಆಗಬೇಕು. ಮೌಲ್ಯಗಳ ಗಣಿಯಾಗಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಬೇಕು. ಡಾ.ಸರ್ಪಪಲ್ಲಿ ರಾಧಾಕೃಷ್ಣನ್‌ನವರು ರಾಷ್ಟçಪತಿಯಾಗಿ ಉನ್ನತ ಹುದ್ದೆಯಲ್ಲಿದ್ದರೂ ಶಿಕ್ಷಕ ವೃತ್ತಿ ಅವರಿಗೆ ಅಚ್ಚುಮೆಚ್ಚಿನದ್ದಾಗಿತ್ತು. ಪ್ರಸ್ತುಸ ಸಮಾಜದಲ್ಲಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವ ಮತ್ತು ಶ್ರೇಷ್ಠ ವ್ಯಕ್ತಿತ್ವವನ್ನು ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಈಶ್ವರಮ್ಮ ಶಾಲೆಯ ಉಪ ಪ್ರಾಂಶುಪಾಲರು ಮತ್ತು ಜ್ಯಾನಜ್ಯೋತಿ ವನಿತಾ ಶಿಕ್ಷಕಿಯರ ವೇದಿಕೆಯ ಅಧ್ಯಕ್ಷರಾದ ಜಿ.ಎಸ್.ಶಶಿರೇಖಾ, ನೈಜ ಘಟನೆಗಳನ್ನು ತಿಳಿಸುವ ಮೂಲಕ ಆದರ್ಶ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಯಾವ ರೀತಿ ಮೌಲ್ಯಗಳನ್ನು ಬಿತ್ತಿ ಬೆಳೆಸಬೇಕೆಂಬುದನ್ನು ತಿಳಿಸಿದರು.
Read also : ದಾವಣಗೆರೆ|ಒತ್ತಡಕ್ಕೆ ಮಣಿಯದೇ ಸಮೀಕ್ಷೆಗೆ ಆದೇಶ ಸ್ವಾಗತಾರ್ಹ : ಬಿ.ಲಿಂಗರಾಜ್
ಪಾಠಗಳಲ್ಲಿ ಮೌಲ್ಯಗಳ ಸಮನ್ವಯ ಮಾಡಿ ಮಕ್ಕಳಲ್ಲಿ ಮೌಲ್ಯ ಶಿಕ್ಷಣವನ್ನು ನೀಡುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗುತ್ತದೆ. ಮಕ್ಕಳು ದೇಶದ ಸತ್ಪçಜೆಗಳಾಗಿ ಉತ್ತಮ ನಾಗರಿಕರನ್ನಾಗಿ ರೂಪಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಸಲಹೆ ನೀಡಿದರು.
ಜ್ಯಾನಜ್ಯೋತಿ ವನಿತಾ ಶಿಕ್ಷಕಿಯರ ವೇದಿಕೆಯ ಕಾರ್ಯದರ್ಶಿ ಮಲ್ಲಮ್ಮ ನಾಗರಾಜ್ ಮಾತನಾಡಿ, ಮಾಜಿ ಶಿಕ್ಷಣ ಸಚಿವರು ಮತ್ತು ವನಿತಾ ಸಮಾಜದ ಗೌರವಾಧ್ಯಕ್ಷರಾದ ಡಾ.ನಾಗಮ್ಮ ಕೇಶವಮೂರ್ತಿ ಯವರು ಹಾಗೂ ಈಶ್ವರಮ್ಮ ಶಾಲೆಯ ಸಂಸ್ಥಾಪಕರಾದ ಬಿ.ಆರ್. ಶಾಂತಕುಮಾರಿಯವರ ಸಲಹೆ, ಮಾರ್ಗದರ್ಶನ ಮತ್ತು ಪ್ರೇರಣೆಯಿಂದ ಜ್ಞಾನಜ್ಯೋತಿ ವನಿತಾ ಶಿಕ್ಷಕಿಯರ ವೇದಿಕೆ ಆರಂಭಿಸಲು ಕಾರಣವಾಯಿತು ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಮಾಗನೂರು ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯಿನಿ ಕುಸುಮ ಹಾಗೂ ಸೀತಮ್ಮನವರ ಸ್ಮರಣಾರ್ಥ ವಾಗ್ದೇವಿಯವರು ನೀಡುವ ಪ್ರಶಸ್ತಿಯನ್ನು ಗಣಿತ ಶಿಕ್ಷಕಿ ಭವಾನಿ ಅವರಿಗೆ ನೀಡಿ ಗೌರವಿಸಲಾಯಿತು.
ನಿವೃತ್ತ ಮುಖ್ಯೋಪಾಧ್ಯಾಯಿನಿ ವಾಗ್ದೇವಿ, ಶಿಕ್ಷಕಿ ಗಿರಿಜ, ಹಿರಿಯ ಸಾಹಿತಿ ನೀಲಗುಂದ ಜಯಮ್ಮ, ಶಿಕ್ಷಕಿ ಗೌರಮ್ಮ ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
