ಹೊನ್ನಾಳ್ಳಿ : ಶೋಷಿತ ಸಮುದಾಯಕ್ಕೆ ಪ್ರಸ್ತುತ ನಡೆಯಲಿರು ಜಾತಿ ಜನಗಣತಿಯಲ್ಲಿ ನಾವು ಜಾತಿಯ ಕಲಂ ನಲ್ಲಿ ನಮ್ಮ ನಮ್ಮ ಜಾತಿಯ ಹೆಸರುಗಳನ್ನು ನಮೂದಿಸಿಕೊಂಡು, ಧರ್ಮದ ಕಲಂ ನಲ್ಲಿ ಬೌದ್ಧರು ಎಂದು ನಮೂದಿಸಿಕೊಳ್ಳಬೇಕು ಎಂದು ಶಿವಮೊಗ್ಗದ ಬೌದ್ಧ ಧಮ್ಮಚಾರಿಗಳಾದ ಪ್ರೋ. ಹೆಚ್.ರಾಚಪ್ಪ ಹೇಳಿದರು.
ಪ್ರೋ ಬಿ.ಕೃಷ್ಣಪ್ಪ ಫೌಂಡೇಶನ್ ಹೊನ್ನಾಳಿ ವತಿಯಿಂದ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಲಿರುವ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ 2025-26 (ಜಾತಿ ಜನಗಣತಿ) ಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಅಭಿಮಾನಿ ಮತ್ತು ಅನುಯಾಯಿಗಳ ಪಾತ್ರವೇನು? ಕುರಿತ ಕರ‍್ಯಕ್ರಮದಲ್ಲಿ ಮಾತನಾಡಿದರು.
ಇದು ಮತಾಂತರ ಅಥವಾ ಧರ್ಮಾಂತರವಲ್ಲ ಬಾಬಾಸಾಹೇಬರು ಹೇಳಿದಂತೆ ಮರಳಿ ನಮ್ಮ ಮನೆಗೆ ಹೋಗುವುದು. ದಲಿತರು ಬೌಧ್ಧ ಧರ್ಮವನ್ನು ತಮ್ಮ ಧರ್ಮವೆಂದು ನಮೂದಿಸಿಕೊಂಡರೆ ಸಂವಿಧಾನದ ಮೀಸಲಾತಿಯ ಸೌಲಭ್ಯಗಳು ಯತಾವತ್ತಾಗಿ ಮುಂದುವರೆಯಲಿದೆ. ಹಾಗಾಗಿ ನಾವು ಬೌದ್ಧರು ಎಂದು ಹೆಮ್ಮೆಯಿಂದ ಈ ಸಮೀಕ್ಷೆಯಲ್ಲಿ ದಲಿತರು ಬರೆಸಬೇಕು ಎಂದು ತಿಳಿಸಿದರು.
ದಲಿತರಿಗೆ ಈ ಚರಿತ್ರೆಯಲ್ಲಿ ಸಾಂಸ್ಕೃತಿಕ ಗಟ್ಟಿತನ ಇದೆ. ಈ ನಿಟ್ಟಿನಲ್ಲಿ ನಮ್ಮ ಪೂರ್ವಜರ ಧರ್ಮವಾಗಿರುವಂತಹ ಬೌದ್ಧ ಧರ್ಮವನ್ನು ಒಪ್ಪಿಕೊಂಡು ಈ ಮೂಲಕ ನಮ್ಮ ಜನಗಳಿಗೆ ನಾವು ಒಂದು ದಾರಿ ದೀಪವಾಗಬೇಕು ಇದು ಪ್ರಾಯಶಃ ಇಡೀ ಕರ್ನಾಟಕಕ್ಕೆ ವಿಜೃಂಭಿಸಲಿದೆ ಎಂದರು.
ವಕೀಲ ಮೋಹನ್ ಕುಮಾರ್ ಎಂ ಸಿ ಮಾತನಾಡಿ, ಜಗತ್ತಿನ ಸಮಸ್ಯೆಗಳಿಗೆ ಗೌತಮ ಬುದ್ಧರು ತೋರಿದ ತ್ರಿಸರಣ ಮತ್ತು ಪಂಚಸದೀಲಗಳಲ್ಲಿ ಪರಿಹಾರಗಳಿವೆ. ಹಾಗಾಗಿ ಜಗತ್ತೆ ಇಂದು ಬುದ್ಧರ ವಿಚಾರಗಳಿಗೆ ಮನಸೋಲುತಿದೆ. ನಾವುಗಳು ಬಾಬಾಸಾಹೇಬ್ ಅಂಬೇಡ್ಕರ್ ಮಕ್ಕಳಾಗಿ ರುವುದರಿಂದ ಅವರು 1956 ಆಕ್ಟೊಬರ್ 14 ರಂದು ಮಹಾರಾಷ್ಟ್ರದಲ್ಲಿ 5 ಲಕ್ಷ ಜನರಿಗೆ ಬೌದ್ಧ ಧಮ್ಮದ ದೀಕ್ಷೆಯನ್ನು ನೀಡಿ ಕರೆಕೊಟ್ಟಿರುವುದರಿಂದ ಅವರ ವಂಶಜರಾದ ನಾವು ಅವರ ಮಾರ್ಗದಲ್ಲಿಯೇ ಮುಂದೆ ಸಾಗುವುದು ಅನಿವಾರ್ಯವಾಗಿದೆ ಹಾಗೂ ಪರಿಶಿಷ್ಟ ಜಾತಿ ಜನಾಗಂದವರು ಈ ಸಮೀಕ್ಷೆಯಲ್ಲಿ ಬೌದ್ಧರು ಎಂದು ಬರೆಸಬೇಕು ಮತ್ತು ಶೋಷಿತ ಬಹುಜನ ಮಕ್ಕಳ ಶೈಕ್ಷಣಿಕ ಮತ್ತು ಜೌದ್ಯೋಗಿಕ ಹಾಗೂ ಸರ್ವತೋಮುಖ ಪ್ರಗತಿಗೆ ಫ್ರೋ.ಬಿ.ಕೆ ಫೌಂಡೇಶನ್ ಸದಾ ಕಾರ್ಯೋನ್ಮುಖವಾಗಿದೆ ಎಂದರು.
ಆರ್.ನಾಗಪ್ಪ ಮಾತನಾಡಿ, ದಲಿತ ಸಂಘರ್ಷ ಸಮಿತಿ ಮಾಡುತ್ತಿದ್ದಂತಹ ಭೂಮಿ ಹೋರಾಟಗಳನ್ನು ಮಾಡಬೇಕು, ಚಳವಳಿ ಗಟ್ಟಿಯಾಗಬೇಕು ಎಂದು ಹೇಳಿದರು.
ಎ.ಡಿ.ಈಶ್ವರಪ್ಪ ಮಾತನಾಡಿ, ದಲಿತರು ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಸೇರಬೇಕು. ಈ ನಿಟ್ಟಿನಲ್ಲಿ ನಾವೆಲ್ಲರು ಒಟ್ಟಾಗಿ ಕೆಲಸಮಾಡಬೇಕು ಎಂದರು.
ತಮ್ಮಣ್ಣ ಜಿ.ಹೆಚ್ ಮಾತನಾಡಿ,ದಲಿತರು ಮೂಢನಂಬಿಕೆ, ಕಂದಾಚಾರದAತಹ ಅನಿಷ್ಟ ಪದ್ದತಿಗಳಿಂದ ಆಚೆ ಬರಬೇಕು ಎಂದರು.
ವಕೀಲ ಸಂತೋಷ್ ಎಸ್. ನಿರೂಪಿಸಿದರು. ಅಂಬೇಡ್ಕರ್ ಬೋಧ್.ಡಿ.ಎಂ.ಸ್ವಾಗತಿಸಿದರು.
Read also : Political analysis|ವಿಜಯೇಂದ್ರ ಬೆನ್ನಿಗೆ ಈಗ ಸಂತೋಷ್ ನಿಂತರು
ಮಾತೆ ರಮಾಬಾಯಿ ಅಂಬೇಡ್ಕರ್ ಮಹಿಳಾ ಸ್ವ-ಸಹಾಯ ಸಂಘ, ಹರಳಹಳ್ಳಿ. ಮಾತೆ ಸಾವಿತ್ರಿಬಾ ಫುಲೆ ಮಹಿಳಾ ಸ್ವಸಹಾಯ ಸಂಘ ಹರಳಹಳ್ಳಿ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮಹಿಳಾ ಸ್ವಸಹಾಯ ಸಂಘ ಗೋಪಗೊಂಡನಹಳ್ಳಿ. ಮಾತಾಂಗ ತಮಟೆ ಕಲಾ ತಂಡ ಸಾಸ್ವೆಹಳ್ಳಿ ಸಹಯೋಗದಲ್ಲಿ ಕರ‍್ಯಕ್ರಮ ನಡೆಯಿತು.
ದಲಿತ ಸಾಹಿತ್ಯ ಪರಿಷತ್ ಜಿಲ್ಲಾದ್ಯಕ್ಷರು ರಘು ಆರ್, ಮಂಜುನಾಥ ಬೆನಕನಹಳ್ಳಿ, ಕುಬೇರ.ಆರ್, ಪ್ರದೀಪ್, ಪುಟ್ಟಸ್ವಾಮಿ ಉಪಸ್ಥಿತರಿದ್ದರು.
