ದಾವಣಗೆರೆ: ಆವರಗೆರೆ ವಸತಿ ನಿವೇಶನ ರಹಿತ ಸಂತ್ರಸ್ತರಿಗೆ ಪುನರ ವಸತಿ ಕಲ್ಪಿಸಲು ಒತ್ತಾಯಿಸಿ ಅ.9 ರಂದು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಡಾ. ಅಂಬೇಡ್ಕಾರ್ ವಾದ ರಾಜ್ಯ ಸಂಚಾಲಕ ಹೆಚ್. ಮಲ್ಲೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕು ಸಮಿತಿ ಆಶ್ರಯದಲ್ಲಿ ದಾವಣಗೆರೆ ಉಪ ವಿಭಾಗಾಧಿಕಾರಿ ಕಛೇರಿ ಎದುರು ಧರಣಿ ಸತ್ಯಾಗ್ರಹ ನಂತರ ಉಪ ವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಮಹಾನಗರ ಪಾಲಿಕೆಯ ದನವಿನ ಓಣಿ ಹತ್ತಿರ ಗೋಮಾಳದಲ್ಲಿ ಕಳೆದ 2022ರಲ್ಲಿ ನೂರಾರು ಸಂಖ್ಯೆಯ ವಸತಿ ನಿವೇಶನ ರಹಿತರು ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದಾಗ ಜಿಲ್ಲಾಡಳಿತದ ಮೌಖಿಕ ನಿರ್ದೇಶನದಂತೆ ರಾತ್ರಿ ಬೆಳಗಿನ ಜಾವ 2:00 ಗಂಟೆ ಸಮಯದಲ್ಲಿ ನಿವಾಸಿಗಳಿಗೆ ಯಾವುದೇ ಮಾಹಿತಿ ಸೂಚನೆ ನೀಡದೇ ಏಕಾ ಏಕಿ ಮಹಾನಗರ ಪಾಲಿಕೆ ಮತ್ತು ತಾಲ್ಲೂಕು ತಹಶೀಲ್ದಾರರು ಪೊಲೀಸ್ ಬಲದೊಂದಿಗೆ ಜೆ.ಸಿ.ಬಿ. ಯಂತ್ರಗಳ ಸಹಾಯದಿಂದ ವಸತಿ ಗುಡಿಸಲು ಧ್ವಂಸ ಕಾರ್ಯಚರಣೆ ನಡೆಸಿ ಅಮಾಯಕ ಕುಟುಂಬಗಳನ್ನು ಬೀದಿ ಪಾಲುಮಾಡಿ ದೌರ್ಜನ್ಯ ಮೆರೆದಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
Read also : ವಿಜಯದಶಮಿ ಶೋಭಾಯಾತ್ರೆ : ಪೊಲೀಸ್ ಪಥ ಸಂಚಲನ
ದನವಿನ ಓಣಿಯಲ್ಲಿ ನಿವಾಸಿಗಳನ್ನು ಪುನಃ ಒಕ್ಕಲೆಬ್ಬಿಸುವ ಹುನ್ನಾರ ಮುಂದುವರೆದಿದೆೆ. ಈ ಹಿನ್ನೆಲೆಯಲ್ಲಿ ಅ.9 ರಂದು ಧರಣಿ ಸತ್ಯಾಗ್ರಹ ನಡೆಸಲಾಗುವುದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚಂದ್ರಪ್ಪ ಆವರಗೆರೆ, ಜಿ.ಎಸ್. ಲೋಕೇಶ ಹಾಲೇಕಲ್ಲು, ಸಮಾದಪ್ಪ, ಎಲ್. ಶಿವು, ಮಹಾಂತೇಶ, ಚನ್ನಬಸಪ್ಪ, ಶಿವಾನಂದ ಗಿರೀಶ ಆರ್. ಪ್ರವೀಣ ಎಸ್ ಇದ್ದರು.
