ದಾವಣಗೆರೆ: ಜೀವನದಲ್ಲಿ ಬೇಸರಗೊಂಡು ನದಿಗೆ ಬೀಳಲು ಹೋಗಿದ್ದ ವಯೋವೃದ್ಧೆಯನ್ನು ಹರಿಹರ ಪೊಲೀಸರು ರಕ್ಷಿಸಿದ್ದಾರೆ.
87 ವರ್ಷದ ವೃದ್ದೆಯೊಬ್ಬರು ತುಂಗಾಭದ್ರಾ ನದಿಗೆ ಬೀಳಲು ಹೋಗಿರುವ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಅಫ್ತಾಬ್ ಎನ್ನುವವರು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಕೂಡಲೇ ಹರಿಹರ ನಗರ ಠಾಣೆ ಎಂ ಕೋಟೇಶ್ ಅವರು ತಕ್ಷಣ ನದಿ ಹತ್ತಿರ ಹೋಗಿ ವಯೋವೃದ್ದೆಯನ್ನು ಸ್ಥಳೀಯರೊಂದಿಗೆ ರಕ್ಷಣೆ ಮಾಡಿದ್ದಾರೆ.
Read also : 1.5 ಕೋಟಿ ಮೌಲ್ಯದ ಮೊಬೈಲ್ ಪತ್ತೆ : ವಾರಸುದಾರರಿಗೆ ಹಿಂದಿರುಗಿಸಿದ ಪೊಲೀಸರು
112ಗೆ ಕರೆ ಮಾಡಿ ಅಧಿಕಾರಿಗಳಾದ ಗುತ್ಯಪ್ಪ ಹಾಗೂ ಚಾಲಕ ನಾಗಪ್ಪ ಅವರ ಸಹಾಯದಿಂದ ನೊಂದ ವಯೋವೃದ್ಧೆಯನ್ನು ರಕ್ಷಣೆ ಮಾಡಿ ವಿಳಾಸ ಪತ್ತೆ ಹಚ್ಚಿದ್ದಾರೆ. ನಂತರ ಮಗ ಶಿವಕುಮಾರ್ ಜೊತೆ ಮನೆಗೆ ಕಳಿಸಿ ಕೊಟ್ಟಿದ್ದಾರೆ.
ಕಾರ್ಯವನ್ನು ಎಸ್ಪಿ ಉಮಾ ಪ್ರಶಾಂತ್ ಪ್ರಶಂಸಿಸಿದ್ದಾರೆ.
