ದಾವಣಗೆರೆ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಕ್ತಿ ಸದನ ಶುಭೋದಯ ಸ್ವಾಧಾರ ಗ್ರಹ” ಸಂಯುಕ್ತ ಆಶ್ರಯದಲ್ಲಿ “”ಸಂಕಷ್ಟದಲ್ಲಿರುವ ಮಹಿಳೆಯರಿಗೆ ಉಚಿತ ಊಟ, ಬಟ್ಟೆ, ಆಶ್ರಯ ನೀಡುವ ಸರ್ಕಾರದ ಯೋಜನೆಯ ಪ್ರಚಾರಕ್ಕೆ ನ್ಯಾ. ಮಹಾವೀರ ಮ. ಕರೆಣ್ಣವರ ಶನಿವಾರ ಚಾಲನೆ ನೀಡಿದರು.
18ರಿಂದ 55 ವರ್ಷದೊಳಗಿನ ನಿರಾಶ್ರಿತ/ನಿರ್ಗತಿಕ ಮಹಿಳೆಯರು ಮತ್ತು ಆರ್ಥಿಕ ಭದ್ರತೆ ಇಲ್ಲದ ಮಹಿಳೆಯರು, ಪ್ರಕೃತಿ ವಿಕೋಪಕ್ಕೆ ಒಳಗಾಗಿ ಮನೆ, ಆಶ್ರಯ ಕಳೆದುಕೊಂಡು, ಜೈಲಿನಿಂದ ಬಿಡುಗಡೆ ಹೊಂದಿ ಸಾಮಾಜಿಕ ಮತ್ತು ಆರ್ಥಿಕ ಸಹಾಯ ಇಲ್ಲದೇ ಇರು ವವರು, ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಪಟ್ಟವರು, ಕುಟುಂಬ/ಮನೆಯಿAದ ಹೊರಹಾಕಲ್ಪಟ್ಟವರು, ಪತಿಯಿಂದ ಅಥವಾ ಬೇರೆ ಸದಸ್ಯರಿಂದ ದೌರ್ಜನ್ಯಕ್ಕೆ ಒಳಪಟ್ಟವರು, ವಿಧವೆಯರು, ವಿಚ್ಚೇದಿತ ಮಹಿಳೆಯರು, ಮನೆಯವರಿಂದ ನಿರ್ಲಕ್ಷಕ್ಕೆ ಒಳಪಟ್ಟವರು ಇತ್ಯಾದಿ ಮಹಿಳೆಯರು ಹಾಗೂ ಸದರಿ ಮಹಿಳೆಯರಿಗೆ 12 ವರ್ಷದೊಳಗಿನ ಗಂಡುಮಕ್ಕಳು ಹಾಗೂ 18 ವರ್ಷದೊಳಗಿನ ಹೆಣ್ಣು ಮಕ್ಕಳಿದ್ದರೆ ಅವರೂ ಕೂಡಾ ತಾಯಿಯೊಂದಿಗೆ ಆಶ್ರಯ ಪಡೆಯಬಹುದು ಎಂದರು.
ಸ್ವಧಾರ್ ಗೃಹದಲ್ಲಿ ಉಚಿತ ಊಟ, ಬಟ್ಟೆ, ಆಶ್ರಯ, ವೈದ್ಯಕೀಯ ಸೌಲಭ್ಯ, ಆಪ್ತಸಮಾಲೋಚನೆ, ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಅಗತ್ಯ ಕಾನೂನು ಸಲಹೆ ಕೊಡಿಸುವುದು. ವೃತ್ತಿ ತರಬೇತಿಗಳಾದ ಟೈಲರಿಂಗ್ ಎಂಬ್ರಾಯಿಡರಿ ತರಬೇತಿ, ಅಗರಬತ್ತಿ ಮೇಕಿಂಗ್ ಇತ್ಯಾದಿ ಕೌತ್ಯಲ್ಯಾಧಾರಿತ ಸ್ವಾವಲಂಬನೆಯ ತರಬೇತಿ ಮತ್ತು ಮಾರ್ಗದರ್ಶನ, ಆಪ್ತ ಸಮಾಲೋಚನೆ ಮೂಲಕ ನಿವಾಸಿಗಳನ್ನು ತಂದೆ/ತಾಯಿ/ಅಥವಾ ಪತಿಯೊಂದಿಗೆ ಸೇರಿಸುವುದು, ಮನರಂಜನೆ ಇತ್ಯಾದಿ ಕಾರ್ಯಕ್ರಮ ನಡೆಯಲಿವೆ ಎಂದರು.
Read also : RSS ನವರು ಅಂಬೇಡ್ಕರ್ ಸಂವಿಧಾನ ವಿರೋಧಿಸಿದ್ದರು: ಮುಖ್ಯಮಂತ್ರಿ ಸಿದ್ದರಾಮಯ್ಯ
ದಾವಣಗೆರೆ ನಗರ ಪ್ರದೇಶದಲ್ಲಿ ಸರ್ಕಾರಿ ಬಾಲಕಿಯರ ಬಾಲ ಮಂದಿರ, ರಾಜ್ಯ ಮಹಿಳಾ ನಿಲಯ, ಸರ್ಕಾರಿ ಬಾಲಕರ ಬಾಲ ಮಂದಿರ, ತುರ್ಚಗಟ್ಟದ ನಿರಾಶ್ರಿತರ ಕೇಂದ್ರ, ಜಾಗೃತ ಮಹಿಳಾ ನಿಲಯ, ಶುಭೋದಯ ಮಹಿಳಾ ನಿಲಯ ಇವುಗಳು ಮತ್ತು ಇನ್ನೂ ಕೆಲವು ಸರ್ಕಾರಿ ಅನುದಾನಿತ ಸಂಸ್ಥೆಗಳು ಕರ್ತವ್ಯ ನಿರ್ವಹಿಸುತ್ತಿದ್ದು ಇಲ್ಲಿ ಬರುವ ಎಲ್ಲಾ ನಿರಾಶ್ರಿತರಿಗೆ ಮತ್ತು ಬಾದೀತರಿಗೆ ಮತ್ತು ಮಕ್ಕಳಿಗೆ ಉಚಿತ ಊಟ ವಸತಿ ಮತ್ತು ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ತಿಳಿಸಿದರು. ಇದಕ್ಕೆ ತಗಲುವ ಎಲ್ಲಾ ವೆಚ್ಚವನ್ನು ಸರ್ಕಾರದಿಂದಲೇ ಪಾವತಿಸಲಾಗುತ್ತದೆ ಯಾರೊಬ್ಬರೂ ಕೂಡ ಹಣ ಪಾವತಿಸುವ ಅಗತ್ಯವಿಲ್ಲವೆಂದು ತಿಳಿಸಿದರು.
ಮಹಿಳೆಯರಿಗೆ ಯಾವುದೇ ತೊಂದರೆಗಳಾದಲ್ಲಿ ಉಚಿತ ಸಹಾಯವಾಣಿ 181 ಅಥವಾ ಕಾನೂನು ಸೇವೆಗಳ ಪ್ರಾಧಿಕಾರದ ಟೋಲ್ ಫ್ರೀ ಸಂಖ್ಯೆ 15100 ಅಥವಾ ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡಲು ಸಲಹೆ ನೀಡಿದರು
ಭಿತ್ತಿ ಪತ್ರ ಅನಾವರಣ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು,”ಶಕ್ತಿ ಸದನ ಶುಭೋದಯ ಸ್ವಾಧಾರ ಗ್ರಹ”, ಸ್ವಾಧಾರ ಗೃಹಗಳ ಮೇಲ್ವಿಚಾರಕಿಯರು ಇತರೆ ವಕೀಲರೂ ಹಾಜರಿದ್ದರು.
