ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಮಾಸಡಿ ಗ್ರಾಮ ಪಂಚಾಯತಿಯಲ್ಲಿ 14-15 ನೇ ಹಣಕಾಸಿನಲ್ಲಿ ಬಂದಿರುವ ಎಲ್ಲಾ ಅನುದಾನವನ್ನು ಬೊಗಸ್ ಬಿಲ್ಲು ಬರೆಸಿ ಕಬಳಿಸಿರುವುದನ್ನು ಖಂಡಿಸಿ ಗ್ರಾಮಸ್ಥರು ಗ್ರಾಮಪಂಚಾಯತಿಯ ಮುಂದೆ ಧರಣಿ ಕೂತು ಪ್ರತಿಭಟನೆ ನಡೆಸಿದರು.
ಈ ಸ್ವತ್ತು, ಶೌಚಾಲಯ ನಿರ್ಮಾಣ, ದನದಕೊಟ್ಟಿಗೆ, ಇಂಗು ಗುಂಡಿ ನಿರ್ಮಾಣ, ವಸತಿ ನಿರ್ಮಾಣಕ್ಕೆ ಅನುದಾನವನ್ನು ಬಳಸದೇ, ಫಲಾನುಭವಿಗಳಿಗೆ ಅನುದಾನ ನೀಡದೆ ಸತಾಯಿಸಿ ನೇರವಾಗಿ ತಮ್ಮ ಖಾತೆಗೆ ಜಮಾ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ, ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
Read also : ಅಕ್ರಮವಾಗಿ ಪಡಿತರ ದಾಸ್ತಾನು:ವಿವಿಧ ಕಡೆ ದಾಳಿ ನಡೆಸಿ ವಶಕ್ಕೆ ಪಡೆದ ಪೊಲೀಸರು
ಯುವ ಮುಖಂಡರಾದ ಸಿದ್ದೇಶ್ ಮಾಸಡಿ, ಬೆಟಗೇರಿ ರುದ್ರಪ್ಪ, ಮಾದಪ್ಪ, ನವೀನ್,ಅಣ್ಣಪ್ಪ, ಯುವರಾಜ್, ಕೆ. ಹರೀಶ್, ಕೆ.ಡಿ. ಶಾಂತರಜ್ ಹಾಗೂ ಗ್ರಾಮಸ್ಥರು ಇದ್ದರು.
