PM ಕಿಸಾನ್ ಯೋಜನೆಯಿಂದ ಲಕ್ಷ, ಲಕ್ಷ ಫಲಾನುಭವಿಗಳನ್ನು ತೆಗೆದುಹಾಕಲಾಗಿದೆ ಎಂಬ ಸುದ್ದಿ ಬಗ್ಗೆ ಕೇಂದ್ರ ಸ್ಪಷ್ಟನೆ ನೀಡಿದೆ.
ʻಮಾರ್ಗಸೂಚಿಗಳ ಪ್ರಕಾರ, 1 ಫೆ. 2019ರ ನಂತರ ಭೂಮಿ ಖರೀದಿಸಿದವರಿಗೆ ಈ ಯೋಜನೆ ಅನ್ವಯಿಸುವುದಿಲ್ಲ. ಒಂದೇ ಕುಟುಂಬದ ಗಂಡ, ಹೆಂಡತಿ, ಮಕ್ಕಳು ಪ್ರತ್ಯೇಕವಾಗಿ ಹಣ ಪಡೆಯುತ್ತಿರುವ ವಿಚಾರ ಗೊತ್ತಾಗಿದ್ದು, ಅಂಥವರ ಹೆಸರನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ.
ಅವರು ಅರ್ಹರೆಂದು ಕಂಡುಬಂದರೆ, ನಾವು ಅವರನ್ನು ಮತ್ತೆ ಲಿಸ್ಟ್‌ನಲ್ಲಿ ಸೇರಿಸುತ್ತೇವೆʼ ಎಂದು ಅದು ಹೇಳಿದೆ.
