ದಾವಣಗೆರೆ: ಆರೋಗ್ಯವನ್ನು ಕಾಪಾಡಿಕೊಂಡರೆ ಜೀವನದಲ್ಲಿ ಎಲ್ಲ ಸಂತೃಪ್ತಿಯನ್ನು ಪಡೆಯಬಹುದು ಹಾಗೂ ಆರೋಗ್ಯಕ್ಕಿಂತ ಸಂಪತ್ತು ಮತ್ತೊಂದಿಲ್ಲ ಎಂದು ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆಯ ಮುಖ್ಯಸ್ಥರಾದ ಡಾ. ಮೂಗನಗೌಡ ಪಾಟೀಲ್ ಪೋಷಕರಿಗೆ ಕಿವಿಮಾತು ಹೇಳಿದರು.
ನಗರದ ಪಿ.ಜೆ.ಬಡಾವಣೆಯ ಈಶ್ವರಮ್ಮ ಹಿರಿಯ ಮತ್ತು ಪ್ರೌಢಶಾಲೆಯಲ್ಲಿ ಮಂಗಳವಾರ ಶ್ರೀಸತ್ಯಸಾಯಿಬಾಬಾರವರ ಜನ್ಮಶತಮಾನೋತ್ಸವದ ಅಂಗವಾಗಿ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಎಸ್.ಎಸ್.ಕೇರ್ ಟ್ರಸ್ಟ್ನ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ವೈದ್ಯಕೀಯ ಶಿಬಿರದಲ್ಲಿ ಅವರು ಮಾತನಾಡಿದರು.
ಶಾಲಾ ಪ್ರಾಂಶುಪಾಲರಾದ ಕೆ.ಎಸ್.ಪ್ರಭುಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸುಮಾರು 400 ಜನ ಶಾಲಾ ಪೋಷಕರು, 600 ವಿದ್ಯಾರ್ಥಿಗಳಿಗೆ ಕೀಲು ಮೂಳೆ ಜನರಲ್ ಮೆಡಿಸಿನ್, ಸ್ತಿçÃರೋಗ, ಮಕ್ಕಳ ಆರೋಗ್ಯ, ಕಣ್ಣು ಮತ್ತು ಚರ್ಮ ಈ ಆರು ವಿಭಾಗಗಳಲ್ಲಿ ಎಸ್.ಎಸ್.ಕೇರ್ ಟ್ರಸ್ಟ್ ಉಚಿತವಾಗಿ ಆರೋಗ್ಯ ತಪಾಸಣೆ ಮತ್ತು ಔಷಧಗಳನ್ನು ನೀಡಿರುವುದಾಗಿ ತಿಳಿಸಿದರು.
Read also : ದೆಹಲಿಯಲ್ಲಿ ಸ್ಫೋಟ|ದಾವಣಗೆರೆಯಲ್ಲಿ ಹೈ ಆಲರ್ಟ್: ಜನಸಂದಣಿ ಸ್ಥಳಗಳಲ್ಲಿ ತಪಾಸಣೆ
ಶಾಲಾ ಕಾರ್ಯದರ್ಶಿಗಳು ಮಾತನಾಡಿ, ಶ್ರೀಸತ್ಯಸಾಯಿ ಬಾಬಾರವರು ಪುಟ್ಟಪರ್ತಿ ಮತ್ತು ಬೆಂಗಳೂರಿನಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸಿ, ಹಲವಾರು ವರ್ಷಗಳಿಂದ ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಆರು ವಿಭಾಗಗಳಿಂದ ಸುಮಾರು 50 ಜನ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಎಸ್.ಎಸ್.ಕೇರ್‌ನ ಸಂಚಾಲಕರಾದ ಹರೀಶ್ ನೇತೃತ್ವದಲ್ಲಿ ಕಾರ್ಯನಿರ್ವಹಿಸಿದರು.
ಶಾಲಾಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ಆರ್.ಸುಜಾತ ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಉಪಪ್ರಾಂಶುಪಾಲರಾದ ಜಿ.ಎಸ್.ಶಶಿರೇಖಾ, ಶಾಲಾ ವಿಜ್ಞಾನ ಶಿಕ್ಷಿಕೆಯರಾದ ಅನುರಾಧ, ಆಶಾಲತಾ, ಸವಿತಾ ಎನ್.ಸ್ವಾಮಿ, ಅನುಪಮಾ, ವಾಣಿಶ್ರೀ, ನಂದಾ ಎ.ಎಚ್. ಕಾವ್ಯ ಡಿ.ಎಂ. ಪಟೇಲ್, ಕೆ.ರವಿ, ಎಂ.ಪ್ರಸನ್ನ ಉಪಸ್ಥಿತರಿದ್ದರು.
