ದಾವಣಗೆರೆ : ಗ್ಯಾರಂಟಿ ಯೋಜನೆ ಯುವನಿಧಿ ಫಲಾನುಭವಿಗಳಿಗೆ ಡಿ.ಬಿ.ಟಿ. ಮೂಲಕ ಹಣ ಸಂದಾಯ ಮಾಡಲಾಗುತ್ತಿದ್ದು, ಫಲಾನುಭವಿಗಳಿಗೆ ನಂತರದ ತಿಂಗಳುಗಳ ಯುವನಿಧಿ ಹಣ ಸಂದಾಯವಾಗಲು ಕಡ್ಡಾಯವಾಗಿ ಪ್ರತಿ ತಿಂಗಳ 25ನೇ ತಾರೀಖಿನೊಳಗೆ ಸ್ವಯಂ ದೃಢೀಕರಣ ಮಾಡಿಕೊಳ್ಳಬೇಕಾಗಿರುತ್ತದೆ.
ಆದ್ದರಿಂದ ಯುವನಿಧಿ ಯೋಜನೆಯ ಫಲಾನುಭವಿಗಳು ಮೊಬೈಲ್ ಮೂಲಕ ಅಥವಾ ಹತ್ತಿರದ ದಾವಣಗೆರೆ ಒನ್, ಗ್ರಾಮ ಒನ್ ಸೆಂಟರ್‍ಗಳಲ್ಲಿ ಸ್ವಯಂ ದೃಢೀಕರಣ ಮಾಡಿಕೊಳ್ಳಬೇಕು.
Read also : ದಾವಣಗೆರೆ|ಬುಳ್ಳಾಪುರ ಕೆರೆ ಜೀರ್ಣೋದ್ಧಾರ:ಗಂಭೀರ ಚರ್ಚೆ
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾಡಳಿತ ಭವನ, ದಾವಣಗೆರೆ ಇವರನ್ನು ಸಂಪರ್ಕಿಸಬಹುದೆಂದು ಇಲಾಖೆಯ ಉದ್ಯೋಗಾಧಿಕಾರಿ ರವೀಂದ್ರ ತಿಳಿಸಿದ್ದಾರೆ.
