ದಾವಣಗೆರೆ: ಕಲಬುರ್ಗಿ ಚಂದ್ರಶೇಖರ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ 14 ಮತ್ತು 17 ವರ್ಷ ವಯೋಮಿತಿಯ ಲಟನ್ ಟೆನಿಸ್ ಸ್ಪರ್ಧೆಯಲ್ಲಿ ನಗರದ ಪಿ.ಜೆ.ಬಡಾವಣೆಯ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಜಯ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಾಂಶುಪಾಲರಾದ ಕೆ.ಎಸ್.ಪ್ರಭುಕುಮಾರ್ ತಿಳಿಸಿದ್ದಾರೆ.
14 ವರ್ಷ ವಯೋಮಿತಿಯ ವಿಭಾಗದಲ್ಲಿ ನಡೆದ ಲಾನ್ ಟೆನಿಸ್ ಕ್ರೀಡೆಯಲ್ಲಿ ಸ್ಪರ್ಧಿಸಿ ಶಾಲೆಯ ಮನ್‌ಮಂತ್, ಆಶ್ರೀತ್ ಆರ್.ರಾಯ್ಕರ್, ಆರ್ಯನ್ ‘ರಾಷ್ಟ್ರ ಮಟ್ಟಕ್ಕೆ’ ಆಯ್ಕೆಯಾದ ವಿದ್ಯಾರ್ಥಿಗಳಾಗಿದ್ದಾರೆ.
17 ವರ್ಷ ವಯೋಮಿತಿಯ ವಿಭಾಗದಲ್ಲಿ ನಡೆದ ಲಾನ್ ಟೆನ್ನಿಸ್ ಕ್ರೀಡೆಯಲ್ಲಿ ಸ್ಪರ್ಧಿಸಿ ತರುಣ್ ಹೆಚ್, ಸೃಜನ್ ಜಿ.ಎಂ. ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರೆ ಮತ್ತು ತರುಣ ಬಾಬು ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Read also : ಮಕ್ಕಳ ಕವಿತೆ|ನಮ್ಮ ಸುಬ್ಬ|ಜಿ.ಮಂಜುನಾಥ
ಈ ವಿದ್ಯಾರ್ಥಿಗಳಿಗೆ ಶಾಲಾಡಳಿತ ಮಂಡಳಿಯ ಅಧ್ಯಕ್ಷಕರಾದ ಕೆ.ಆರ್.ಸುಜಾತ ಕೃಷ್ಣ, ಕಾರ್ಯದರ್ಶಿ ಎ.ಆರ್.ಉಷಾರಂಗನಾಥ್ ಮತ್ತು ಎಲ್ಲಾ ಪದಾಧಿಕಾರಿಗಳು, ಶಾಲಾ ಪ್ರಾಂಶುಪಾಲರಾದ ಕೆ.ಎಸ್.ಪ್ರಭುಕುಮಾರ್, ಉಪಪ್ರಾಂಶುಪಾಲರಾದ ಜಿ.ಎಸ್.ಶಶಿರೇಖಾ ಹಾಗೂ ತರಬೇತಿ ನೀಡಿದ ಶಾಲಾ ದೈಹಿಕ ಶಿಕ್ಷಣದ ಶಿಕ್ಷಕರಾದ ರವಿ ಕೆ., ನಾಗರಾಜ್ ಉತ್ತಂಗಿ ಹಾಗೂ ಪ್ರಸನ್ನ ಎಂ. ಮತ್ತು ಶಾಲಾ ಗುರುವೃಂದದವರು ಈ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
