ದಾವಣಗೆರೆ.ಡಿ.3 : ಜಿಲ್ಲಾ ಬಾಲ ನ್ಯಾಯ ಮಂಡಳಿ ಸದಸ್ಯರನ್ನಾಗಿ ಸಾಮಾಜಿಕ ಕಾರ್ಯಕರ್ತೆ ಹರಿಹರದ ಶ್ರೀಮತಿ ಜಿ.ಎಂ.ರೂಪ ಮತ್ತು ದಾವಣಗೆರೆಯ ವಕೀಲರಾದ ಲಕ್ಷ್ಮೀ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ, ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಉಪ ಕಾರ್ಯದರ್ಶಿ ರಂಗನಾಥ್ ಆದೇಶಿಸಿದ್ದಾರೆ.
Read also : ದಿವ್ಯಾಂಗ್ಯ ಮಕ್ಕಳ ಸೇವೆಯೊಂದಿಗೆ ದೇವರನ್ನು ಕಾಣಿರಿ: ಶಾಸಕ ಕೆ.ಎಸ್.ಬಸವಂತಪ್ಪ
ನೇಮಕಾತಿ ಆದೇಶದಿಂದ ಮುಂದಿನ 3 ವರ್ಷಗಳ ಅವಧಿಗೆ ದಾವಣಗೆರೆ ಜಿಲ್ಲಾ ಬಾಲನ್ಯಾಯ ಮಂಡಳಿ ಸದಸ್ಯರಾಗಿ ಜಿ.ಎಂ.ರೂಪ ಮತ್ತು ಲಕ್ಷ್ಮೀ ಅವರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
