ದಾವಣಗೆರೆ: ಈಚೆಗೆ ಹರಿಹರ ತಾಲ್ಲೂಕು ಮಲೇಬೆನ್ನೂರು ಜಾಮೀಯಾ ನ್ಯಾಷನಲ್ ಸಂಯಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದಾವಣಗೆರೆ ಕ್ಲಬ್ ಕ್ರೀಡಾಪಟುಗಳು ಸಾಧನೆ ಮೆರೆದಿದ್ದಾರೆ.
ವಿಕಲಚೇತನರಾದ ಥಾಮಸ್ ವಿಜಯ್ ಇವರು 84 ಕೆಜಿ ಬಾಡಿ ವೆಯಿಟ್ ಮಾಸ್ಟರ್ ಕ್ಲಾಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದು,ಪ್ರಜ್ವಲ್ ಜಿ. ಇವರು 93 ಕೆಜಿ ಬಾಡಿ ವೆಯಿಟ್ ಜ್ಯೂನಿಯರ್ ಕ್ಲಾಸ್ ವಿಭಾಗದಲ್ಲಿ ದ್ವೀತೀಯ ಸ್ಥಾನ ಪಡೆದಿರುವರು. ಇವರಿಗೆ ಗೋಪಾಲ್ ಜಿಮ್ ತರಬೇತಿ ನೀಡಿದ್ದರು.
ವಿಜೇತರಾಗಿರುವವರಿಗೆ ದಾವಣಗೆರೆ ಕ್ಲಬ್‌ನ ಅಧ್ಯಕ್ಷ ಎ.ಬಿ.ಚಂದ್ರಶೇಖರ್, ಉಪಾಧ್ಯಕ್ಷ ಎಸ್.ಜಿ. ಉಳವಯ್ಯ, ಗೌರವ ಕಾರ್ಯದರ್ಶಿ ರವಿಶಂಕರ್ ಪಲ್ಲಾಗಟ್ಟಿ, ಸಹ ಕಾರ್ಯದರ್ಶಿ ಐನಳ್ಳಿ ಜಯದೀಪ್, ಖಜಾಂಚಿ ಪ್ರಶಾಂತ್ ಗುಪ್ತಾ ಹಾಗೂ ನಿರ್ದೇಶಕ ಬೆಳ್ಳೂಡಿ ಸದಾನಂದ, ರುದ್ರೇಶ್.ಹೆಚ್.ವಿ., ಬಾದಾಮಿ ಮಲ್ಲಿಕಾರ್ಜುನ್, ಅಭೀಷೇಕ್ ಬೇತೂರು, ಸುಪುತ್ರ ಕುಮಾರ್ ಬಿ.ಟಿ ಮತ್ತು ವಿಶ್ವನಾಥ್ ಬಿ.ಪಾಟೀಲ್ ಇವರುಗಳು ಅಭಿನಂದಿಸಿದ್ದಾರೆ.
