ದಾವಣಗೆರೆ : ಕೊಡುಗೈ ದಾನಿಗಳಾದಂತಹ ಡಾ. ಶಾಮನೂರ ಶಿವಶಂಕರಪ್ಪನವರು ಅವರ ಆತ್ಮಕ್ಕೆ ಶಾಂತಿ ಕೋರಿ ದಾವಣಗೆರೆ ಜಿಲ್ಲಾ ಸಂಘದ ವತಿಯಿಂದ ಹಾಗೂ ದಾವಣಗೆರೆ ತಾಲೂಕ ಫೋಟೋಗ್ರಾಫರ್ ಯೂತ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಹಾಗೂ ದಾವಣಗೆರೆ ತಾಲೂಕ ಛಾಯಾಗ್ರಹಕರ ಸಹಕಾರ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ಸಂತಾಪ ಸೂಚಿಸಲಾಯಿತು.
ದಾವಣಗೆರೆ ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ಶಂಬಣ್ಣನವರು ಹಾಗೂ ದಾವಣಗೆರೆ ತಾಲೂಕ ಛಾಯಾಗ್ರಾಹಕರ ಸಹಕಾರ ಸಂಘದ ಅಧ್ಯಕ್ಷ ಮತ್ತು ತಾಲೂಕ ಕಮಿಟಿಯ ಅಧ್ಯಕ್ಷ ಎಸ್ ಆರ್ ತಿಪ್ಪೇಸ್ವಾಮಿ ಅವರು ಹಾಗೂ ಉಪಾಧ್ಯಕ್ಷ ಮಾಂತೇಶ್ ರವರು ಹಾಗೂ ಪ್ರಧಾನ ಕಾರ್ಯದರ್ಶಿ ದುಗ್ಗಪ್ಪ ಹಾಗೂ ಖಜಾಂಚಿ ಕಿರಣ್ ಕುಮಾರ್ ಕೆ ಬಿ ರವರು ಹಾಗೂ ಸಂಘಟನಾ ಕಾರ್ಯದರ್ಶಿಗಳಾದಂತಹ ಕೆಪಿ ನಾಗರಾಜ್, ಶ್ರೀನಿವಾಸ್ ಜಿ ಹಾಗೂ ಸಂಚಾಲಕ ಪ್ರಕಾಶ್ ಕೆ ಮತ್ತು ನಿರ್ದೇಶಕ ಶ್ರೀನಾಥ್ ಅಗಡಿ ಮತ್ತು ಸದಸ್ಯ ಚಿದಾನಂದ ಸ್ವಾಮಿ ಅವರು ಹಾಗೂ ಸಹಕಾರ ಸಂಘದ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
