ದಾವಣಗೆರೆ : ವಸ್ತು ಪದರ್ಶನ ಕಾರ್ಯಕ್ರಮಗಳು, ಮಕ್ಕಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಒಂದು ಉತ್ತಮ ವೇದಿಕೆಯಾಗಿದೆ ಎಂದು ಡಯಟ್ ಪ್ರಾಚಾರ್ಯರಾದ ಗೀತಾ ಎಸ್ ಹೇಳಿದರು.
ನಗರದ ಜೈನ್ ವಿದ್ಯಾಲಯ, ಪಿ.ಜೆ. ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಮಕ್ಕಳ ಪ್ರತಿಭೆಗಳನ್ನು ಗುರುತಿಸಲು ಹಾಗೂ ಅವರ ಕನಸುಗಳನ್ನು ನನಸು ಮಾಡಲು ಸಹಕಾರಿಯಾಗಲಿವೆ ಎಂದರು.
Read also : ಸ್ವತ್ತು ಕಳವು ಪ್ರಕರಣ: 20.38 ಕೋಟಿ ರೂ ಮೌಲ್ಯದ ಸ್ವತ್ತು ಮಾಲೀಕರಿಗೆ ವಿತರಣೆ
ಶಾಲೆಯ 1ನೇ ತರಗತಿಯ ಮಕ್ಕಳಿಂದ 10ನೇ ತರಗತಿಯವರೆಗಿನ ಮಕ್ಕಳು ಕಲಾ ಮತ್ತು ವಿಜ್ಞಾನ ಮಾದರಿಗಳನ್ನು ತಯಾರಿಸಿ ಪ್ರದರ್ಶನದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಶಾಲೆಯ ಅಧ್ಯಕ್ಷ ರಮೇಶಕುಮಾರ ಹೆಚ್., ಕಾರ್ಯದರ್ಶಿ ರಮೇಶಕುಮಾರ ಜೆ., ಜಂಟಿ ಕಾರ್ಯದರ್ಶಿ ನರೇಂದ್ರ ಕುಮಾರ, ಜಂಟಿ ಖಜಾಂಚಿ ಕಿಶೋರ ಕುಮಾರ ಪಿ.,ಆಡಳಿತ ಮಂಡಳಿಯ ಸದಸ್ಯರಾದ ಶಾಂತಿಲಾಲ ಕೆ., ಮುಖ್ಯೋಪಾಧ್ಯಯರಾದ ಸಯೀದಾ ಪರವಿನ್ ಹಾಗೂ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
