ದಾವಣಗೆರೆ (Davanagere) ಏ.05: ಜಿಲ್ಲಾ ವ್ಯಾಪ್ತಿಯಲ್ಲಿನ ಸರ್ಕಾರಿ ಕಚೇರಿಗಳ ಕಟ್ಟಡಗಳ ಆವರಣ, ಶಾಲಾ-ಕಾಲೇಜು, ರಸ್ತೆ ಬದಿಗಳಲ್ಲಿ ಆಸ್ಪತ್ರೆ ಆವರಣ, ಸ್ಮಾರಕ, ಪ್ರತಿಮೆ, ಕಂಬ, ಗೋಡೆಗಳ ಮೇಲೆ ಸಾರ್ವಜನಿಕರಿಗೆ ಅಭಿಮುಖವಾಗಿ ಬಿತ್ತಿ ಪತ್ರಗಳು ಹಾಗೂ ಸೂಚನಾ ಜಾಹಿರಾತುಗಳು ಅಂಟಿಸಿರುವುದು ಕಂಡು ಬಂದಿದೆ. ಇವುಗಳನ್ನು ಕೂಡಲೇ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚಿಸಿದ್ದಾರೆ.
Read also : ಮಾದಕ ವಸ್ತು ಸಾಗಾಟ, ಮಾರಾಟ, ಬಳಕೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ
ಇದು ಕರ್ನಾಟಕ ತೆರೆದ ಸ್ಥಳಗಳು (ವಿರೂಪಗೊಳಿಸುವಿಕೆ ತಡೆಗಟ್ಟುವಿಕೆ) ಕಾಯ್ದೆ-1981ರ ನಿಯಮ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಆದ್ದರಿಂದ ಎಲ್ಲಾ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಕಟ್ಟಡಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಬಿತ್ತಿ ಪತ್ರಗಳು ಮತ್ತು ಜಾಹೀರಾತುಗಳನ್ನು ಕೂಡಲೆ ತೆರವುಗೊಳಿಸುವುದರ ಜೊತೆಗೆ ಇಂತಹ ಪ್ರಕರಣಗಳು ಮರುಕಳಿಸದಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.