ದಾವಣಗೆರೆ : ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ಮಾನ್ಯಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಹತ್ಯೆಗೈದು ಹಾಗೂ ವಿವೇಕಾನಂದ ಎಂಬ ಯುವಕನ ಮೇಲೆ ಮತ್ತು ಕುಟುಂಬಸ್ಥರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಸರ್ಕಾರಿ ಶಾಲೆ ಉಳಿಸಿ ಹೋರಾಟ ಸಮಿತಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಹುಬ್ಬಳಿಯ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಮಾನ್ಯ ಎಂಬ ಯುವತಿ ಅದೇ ಗ್ರಾಮದ ವಿವೇಕಾನಂದ ದೊಡ್ಡಮನಿ ಎಂಬ ದಲಿತ ಯುವಕನನ್ನು ಕುಟುಂಬದ ವಿರೋಧದ ನಡುವೆಯೂ ಮದುವೆಯಾಗಿದ್ದರು. ಎನ್ನುವ ದ್ವೇಷದಿಂದ ಮಾನ್ಯಳ ಕುಟುಂಬದವರು ಮಾರಾಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ವಿವೇಕಾನಂದನ ತಾಯಿ ರೇಣುಕವ್ವ ಸೇರಿದಂತೆ ಕುಟುಂಬದ ಇತರೆ ಸದಸ್ಯರ ಮೇಲೂ ಮಾರಕ ಅಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.
ರೇಣುಕವ್ವ ಹಾಗೂ ಅವರ ದೊಡ್ಡಪ್ಪನ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಕಾನೂನು ಬಾಹಿರ ಕೃತ್ಯವಾಗಿದೆ. ತ್ವರಿತ ಹಾಗೂ ನಿಷ್ಪಕ್ಷಪಾತ ಕಾನೂನು ತನಿಖೆ ನಡೆಸಬೇಕು. ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಗುರುತಿಸಿ ಕಾನೂನು ಪ್ರಕಾರ ಬಂಧಿಸಿ ಕ್ರಮ ಕೈಗೊಳ್ಳಬೇಕು. ಜಾಮೀನಾಗಲೀ ಅಥವಾ ನಿರೀಕ್ಷಣಾ ಜಾಮೀನು ನೀಡದಂತೆ ಕ್ರಮ ವಹಿಸಬೇಕು. ಬಾಧಿತ ಕುಟುಂಬಕ್ಕೆ ಸುರಕ್ಷತೆ ಮತ್ತು ನ್ಯಾಯವನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
Read also : Political analysis:ಬಜೆಟ್ ಮಂಡಿಸಲು ಸಿದ್ದು-ಡಿಕೆಶಿ ರೆಡಿ
ಈ ಘಟನೆಯಲ್ಲಿ ಭಾಗಿಯಾದವರ ವಿರುದ್ದ ತೀವ್ರ ಹಾಗೂ ಕಠಿಣ ತರಹದ ಕಾನೂನು ತನಿಖೆಯನ್ನು ನಡೆಸಿ, ಉಗ್ರವಾದ ಶಿಕ್ಷೆ ನೀಡಬೇಕೆಂದು ಲಿಂಗರಾಜು. ಎಂ ಗಾಂಧಿ ನಗರ ಆಗ್ರಹಿಸಿದ್ದಾರೆ.
ಆದಿಲ್ ಖಾನ್, ಅರವಿಂದ. ಮೈಲಾರಪ್ಪ, ಚೆನ್ನಮ್ಮ, ಅರುಣ್, ಅಜೇಯ, ರಾಯುಡು, ಪ್ರವೀಣ ಕಕ್ಕರಗೊಳ್ಳ ಇತರರು ಇದ್ದರು.
