ದಾವಣಗೆರೆ : ದೌರ್ಜನ್ಯ ಪ್ರಕರಣದಡಿ ಎಫ್.ಐ.ಅರ್, ಆರೋಪ ಪಟ್ಟಿ ಮತ್ತು ಶಿಕ್ಷೆಯ ಆಧಾರದ ಮೇಲೆ ವಿವಿಧ ಹಂತದಲ್ಲಿ ದೌರ್ಜನ್ಯ ಸಂತ್ರಸ್ಥರಿಗೆ ಪರಿಹಾರ ಧನವಾಗಿ ಪ. ಜಾತಿಯ 115 ಮತ್ತು ಪ.ಪಂಗಡದ 47 ಸೇರಿದಂತೆ ಒಟ್ಟು 162 ಸಂತ್ರಸ್ಥರಿಗೆ ಇದುವರೆವಿಗೂ ರೂ. 121.50 ಲಕ್ಷಗಳನ್ನು ಪಾವತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ನಾಲ್ಕನೆ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2025 ರ ಜನವರಿ ಮಾಹೆಯಿಂದ ಇದುವರೆವಿಗೂ ದೌರ್ಜನ್ಯದಡಿ ಕೊಲೆಯಾದ 2 ಪ್ರಕರಣಗಳು ದಾಖಲಾಗಿರುತ್ತವೆ, ಇದೇ ಪ್ರಕರಣದಡಿ ಸರ್ಕಾರಿ ನೌಕರಿಗಾಗಿ 2 ಅರ್ಜಿಗಳು ಸ್ವೀಕೃತವಾಗಿದ್ದು ಅರ್ಜಿಗಳು ಪರಿಶೀಲನಾ ಹಂತದಲ್ಲಿರುತ್ತವೆ, ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ದೌರ್ಜನ್ಯ ತಡೆ ಕಾಯ್ದೆ 1989 ರ ಅಡಿಯಲ್ಲಿ ಇದುವರೆವಿಗೂ 154 ಪ್ರಕರಣಗಳು ಬಾಕಿ ಇದ್ದು 2025 ಅಕ್ಟೋಬರ್ ಮಾಹೆಯಿಂದ ಇಲ್ಲಿಯವರಿಗೆ 8 ಪ್ರಕರಣಗಳು ವಿಲೇವಾರಿಯಾಗಿದೆ ಎಂದು ತಿಳಿಸಿದರು.
Read also : ಅಪಘಾತ:ಲಾರಿ ಡ್ರೈವರ್ ಸೇರಿದಂತೆ 5 ಮಂದಿ ಸಜೀವ ದಹನ
ಸಭೆಯಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರುಗಳು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ಪೊಲೀಸ್ ಉಪಾಧೀಕ್ಷಕರು , ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
