ದಾವಣಗೆರೆ (Davanagere) : ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಾಗೂ ಹಜ್ -ವಕ್ಫ್ ಬೋರ್ಡ್ ವತಿಯಿಂದ ಮುಸ್ಲಿಂ ವಿದ್ಯಾರ್ಥಿನಿಯರ ಉತ್ತಮ ಶಿಕ್ಷಣಕ್ಕಾಗಿ ರಾಜ್ಯದಲ್ಲಿ 47.76 ಕೋಟಿ ವೆಚ್ಚದಲ್ಲಿ ರಾಜ್ಯಾದ್ಯಂತ 15 ಪದವಿ ಪೂರ್ವ ಕಾಲೇಜ್ ನಿರ್ಮಾಣಕ್ಕೆ ಅಡಿಗಲ್ಲ ಸಮಾರಂಭ ಶನಿವಾರ ಬೆಂಗಳೂರಿನಲ್ಲಿ ನಡೆಯಿತು.
ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಸಾಬ್ ಮತ್ತು ವಕ್ಪ್ ಬೋರ್ಡ ಅಧ್ಯಕ್ಷ ಸಿರಾಜ್ ಅವರ ಶ್ರಮದಿಂದ ದಾವಣಗೆರೆಗೆ
ಒಂದು ಮಹಿಳಾ ಕಾಲೇಜ್ ಮತ್ತು ಅಧುನಿಕ ಐಸಿಯು ವ್ಯವಸ್ಥೆಯುಳ್ಳ 39 ಲಕ್ಷದ ಅಂಬುಲೇನ್ಸ್ ದೊರತಿದೆ. ಅಲ್ಲದೇ 70 ಸಾವಿರ ಮೌಲ್ಯದ ಕೋಲ್ಡ್ ಫ್ರಿಜರ್ ಲಭಿಸಿವೆ.
ಸುಮಾರು 39 ಲಕ್ಷ ವೆಚ್ಚದ ಐಸಿಯು ವ್ಯವಸ್ಥೆಯಿರುವ ಅಂಬ್ಯುಲೇನ್ಸ್, ಶವಪೆಟ್ಟಿಗೆಗಳನ್ನು ಸಚಿವರಾದ ಜಮೀರ್ ಅಹಮದ್ ಖಾನ್, ರಹೀಂಖಾನ್, ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್, ವಿಧಾನಪರಿಷತ್‌ರಾದ ಸದಸ್ಯ ಸಲೀಂ ಅಹಮದ್, ಬಲ್ಕಿಸ್ ಬಾನು, ವಕ್ಪ್ ಬೋರ್ಡ್ ಅಧ್ಯಕ್ಷ ಅನ್ವರಬಾಷಾ, , ಅಲ್ಪ ಸಂಖ್ಯಾತ ಆಯೋಗ ಅಧ್ಯಕ್ಷರಾದ ನಿಸಾರ ಅಹಮದ್ ಇತರರು ದಾವಣಗೆರೆ ವಕ್ಪ್ ಅಧಿಕಾರಿಗಳಿಗೆ ಕೀ ಹಸ್ತಾಂತರ ಮಾಡಿದರು.
Read also : LG Havanur | ಅರಸು -ಹಾವನೂರ್ ಜೋಡಿ ಮಾಡಿದ ಮೋಡಿ
ಈ ವೇಳೆ ವಕ್ಪ್ ಅಧಿಕಾರಿಗಳು ಹಾಗೂ ಮುಸ್ಲಿಂ ಎಜುಕೇಷನ್ ಫಂಡ್ ಅಸೋಸಿಯೇಷನ್ ಆಡಳಿತಾಧಿಕಾರಿಗಳು ಸೈಯದ್ ಮೊಜಂ ಪಾಷಾ, ವಕ್ಪ್ ರಾಜ್ಯ ಸಮಿತಿ ಸದಸ್ಯ ಘನಿ ತಾಹೀರ್ ಇತರರು ಇದ್ದರು.